Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Virat Kohli: ಟೆಸ್ಟ್ ಕ್ರಿಕೆಟ್ ನಿಜವಾದ 'ಟೆಸ್ಟ್': ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ ಎಲ್ಲಾ ಮೂರು ಫಾರ್ಮ್ಯಾಟ್‌ಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವ ವಿಶ್ವದ ಕೆಲವೇ ಕ್ರಿಕೆಟಿಗರಲ್ಲಿ ಒಬ್ಬರು. ವಿರಾಟ್ ಕೊಹ್ಲಿಗೆ ಟೆಸ್ಟ್ ಕ್ರಿಕೆಟ್ ಎಂದರೆ ತುಂಬಾ ಇಷ್ಟ. ಕಿಂಗ್ ಕೊಹ್ಲಿ ಆಗಾಗ್ಗೆ ಟೆಸ್ಟ್ ಕ್ರಿಕೆಟ್‌ನ ಮಹತ್ವದ ಬಗ್ಗೆ ಮಾತನಾಡುತ್ತಾರೆ. ಈ ಬಾರಿಯೂ ಟೆಸ್ಟ್‌ ಕ್ರಿಕೆಟ್‌ನ ಸ್ಥಿತಿಗತಿಯನ್ನು ಗಮನದಲ್ಲಿಟ್ಟುಕೊಂಡು ಕೆಂಪು ಚೆಂಡಿನ ಕ್ರಿಕೆಟ್‌ ಬಗ್ಗೆ ಮಾತನಾಡಿದ್ದಾರೆ. ಟೆಸ್ಟ್ ಕ್ರಿಕೆಟ್ ನಿಜವಾದ 'ಟೆಸ್ಟ್' ಎಂದು ಕೊಹ್ಲಿ ಹೇಳಿದ್ದಾರೆ.

ಸ್ಟಾರ್ ಸ್ಪೋರ್ಟ್ಸ್‌ ಜೊತೆ ಮಾತನಾಡಿರುವ ವಿರಾಟ್ ಕೊಹ್ಲಿ, "ನಿಮಗೆ ಇಷ್ಟವಿರಲಿ ಇಲ್ಲದಿರಲಿ, ನೀವು ಟೆಸ್ಟ್ ಕ್ರಿಕೆಟ್‌ನಲ್ಲಿ ವಿಭಿನ್ನ ಆಟವನ್ನು ತೋರಿಸಬೇಕು. ಇದು ಕೆಲವು ಗಂಟೆಗಳ ಅಥವಾ ಒಂದು ದಿನದ ಆಟವಲ್ಲ. ಟೆಸ್ಟ್ ಕ್ರಿಕೆಟ್ ನಿಮ್ಮ ಎಲ್ಲವೂ 'ಟೆಸ್ಟ್'. ಇದು ನಿಜವಾದ ಪರೀಕ್ಷೆ" ಎಂದಿದ್ದಾರೆ.

Test cricket is the real Test: Virat Kohli

ಭಾರತ ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದೆ. ಪ್ರವಾಸದಲ್ಲಿ ಆಡಿರುವ ಟಿ20 ಸರಣಿಯಲ್ಲಿ ಸಮಬಲ ಸಾಧಿಸಿದ್ದ ಟೀಮ್ ಇಂಡಿಯಾ, ಏಕದಿನ ಸರಣಿಯನ್ನು ವಶಕ್ಕೆ ಪಡೆದಿತ್ತು. ಟೆಸ್ಟ್‌ ಸರಣಿ ಗೆಲುವಿನ ಕನಸಿನೊಂದಿಗೆ ಟೀಮ್ ಇಂಡಿಯಾ ಅಂಗಳಕ್ಕೆ ಇಳಿದಿತ್ತು. ಆದರೆ ಸೆಂಚುರಿಯನ್‌ನಲ್ಲಿ ಟೀಮ್ ಇಂಡಿಯಾ ಆಸೆ ಫಲಿಸಲಿಲ್ಲ.

ಮೊದಲ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಇನಿಂಗ್ಸ್ ಹಾಗೂ 32 ರನ್‌ಗಳಿಂದ ಸೋಲನುಭವಿಸಿತ್ತು. ಆದರೆ, ಪಂದ್ಯದ ಮೂರನೇ ಇನ್ನಿಂಗ್ಸ್ ಮತ್ತು ಟೀಮ್ ಇಂಡಿಯಾದ ಎರಡನೇ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ 76 ರನ್ ಗಳಿಸಿ ಕೊನೆಯವರಾಗಿ ಪೆವಿಲಿಯನ್‌ಗೆ ಮರಳಿದರು. ಇವರ ಮನಮೋಹಕ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಮತ್ತು 1 ಸಿಕ್ಸರ್ ಸೇರಿವೆ.

Test cricket is the real Test: Virat Kohli

ಕೊಹ್ಲಿ 2011 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದರು. ಇಲ್ಲಿವರೆಗೆ ಅವರು 112 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ ಪಂದ್ಯಗಳ 189 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿದ ಅವರು 49.38 ರ ಸರಾಸರಿಯಲ್ಲಿ 8790 ರನ್ ಗಳಿಸಿದ್ದಾರೆ, ಇದರಲ್ಲಿ 29 ಶತಕಗಳು ಮತ್ತು 29 ಅರ್ಧ ಶತಕಗಳು ಮತ್ತು 7 ದ್ವಿಶತಕಗಳು ಸೇರಿವೆ. ಕೊಹ್ಲಿ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 983 ಬೌಂಡರಿ ಮತ್ತು 25 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಈ ವರ್ಷ ಅಂದರೆ 2023ರಲ್ಲಿ ಕೊಹ್ಲಿ 8 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 12 ಇನ್ನಿಂಗ್ಸ್‌ಗಳಲ್ಲಿ 55.91 ಸರಾಸರಿಯಲ್ಲಿ 671 ರನ್ ಗಳಿಸಿದ್ದು, ಇದರಲ್ಲಿ 2 ಶತಕ ಮತ್ತು 2 ಅರ್ಧಶತಕ ಸೇರಿವೆ.

Story first published: Saturday, December 30, 2023, 10:05 [IST]
Other articles published on Dec 30, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+