ಭಾರತ ಕೈ ಬಿಟ್ಟರೆ ಟೆಸ್ಟ್ ಕ್ರಿಕೆಟ್ ಸತ್ತುಹೋಗಲಿದೆ: ಗ್ರೇಗ್ ಚಾಪೆಲ್

ಆಸ್ಟ್ರೇಲಿಯಾದ ಲೆಜೆಂಡರಿ ಆಟಗಾರ ಮತ್ತು ಟೀಮ್ ಇಂಡಿಯಾದ ಮಾಜಿ ಕೋಚ್ ಗ್ರೇಗ್ ಚಾಪೆಲ್ ಟೆಸ್ಟ್ ಕ್ರಿಕೆಟ್ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ವಿಶ್ವಾದ್ಯಂತ ಕೊರೊನಾ ವೈರಸ್ ಭೀತಿ ಹೆಚ್ಚಾಗುತ್ತಿದ್ದು ಇದು ಟೆಸ್ಟ್ ಕ್ರಿಕೆಟ್‌ನ ಮೇಲೆ ನೇರ ಪರಿಣಾಮವನ್ನು ಬೀರುವ ಸಾಧ್ಯತೆಯನ್ನು ಅವರ ಹೇಳಿದ್ದಾರೆ.
ಭಾರತ ಟೆಸ್ಟ್ ಕ್ರಿಕೆಟ್ ಬಗ್ಗೆ ಆಸ್ಥೆವಹಿಸುವುದನ್ನು ಬಿಟ್ಟುಬಿಟ್ಟರೆ ಟೆಸ್ಟ್ ಕ್ರಿಕೆಟ್ ಸತ್ತುಹೋಗಲಿದೆ. ಭಾರತದ ಜೊತೆಗೆ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ದೇಶಗಳು ಮಾತ್ರವೇ ಟೆಸ್ಟ್ ಕ್ರಿಕೆಟ್ ಕಡೆಗೆ ಹೆಚ್ಚಿನ ಯುವಕರನ್ನು ಸೆಳೆಯುವ ಪ್ರಯತ್ಮಮಾಡುತ್ತಿದೆ ಎಂದು ಅವರು ಹೇಳಿದರು. ಫೇಸ್‌ಬುಕ್ ಸಂದರ್ಶನದ ಸಂದರ್ಭದಲ್ಲಿ ಚಾಪೆಲ್ ಈ ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ಟಿ20 ಕ್ರಿಕೆಟ್ ಬಗ್ಗೆ ನನಗೆ ತಿರಸ್ಕಾರವಿಲ್ಲ. ಕ್ರಿಕೆಟ್ ಪ್ರೇಮಿಗಳಿಗೂ ಅದು ಇಷ್ಟವಾಗುತ್ತದೆ. ಆದರೆ ಟೆಸ್ಟ್ ಕ್ರಿಕೆಟ್ ವಿಚಾರವಾಗಿ ಆರ್ಥಿಕತೆಯ ಸಂಗತಿಯೂ ಪ್ರಮುಖವಾಗುತ್ತದೆ. ಆದರೆ ಇದೇ ಸಂದರ್ಭದಲ್ಲಿ ಅವರು ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ಉತ್ಕೃಷ್ಟ ಆಟ ಎಂದು ಎಂದು ಹೇಳಿದ್ದಾರೆ. ಹೀಗಾಗಿ ಅದು ಮುಂದೆಯೂ ಉಳಿದುಕೊಳ್ಳಿದೆ ಎಂದು ಭಾವಿಸುತ್ತೇನೆ ಎಂದು ಚಾಪೆಲ್ ಹೇಳಿದ್ದಾರೆ.
ಕೊರೊನಾ ವೈರಸ್‌ನ ಕಾರಣದಿಂದಾಗಿ ಕ್ರಿಕೆಟ್ ಸಂಪೂರ್ಣವಾಗಿ ಸ್ತಬ್ಧವಾಗಿದೆ. ಹೀಗಾಗಿ ಬಿಸಿಸಿಐ ಸೇರಿದಂತೆ ಜಗತ್ತಿನ ಎಲ್ಲಾ ಕ್ರಿಕೆಟ್ ಸಂಸ್ಥೆಗಳೂ ಸಾಕಷ್ಟು ನಷ್ಟದಲ್ಲಿದೆ. ಹೀಗಾಗಿ ಇದನ್ನು ಸರಿದೂಗಿಸಲು ಸೀಮಿತ ಓವರ್‌ಗಳ ಕ್ರಿಕೆಟ್‌ನತ್ತ ಚಿತ್ತ ಹರಿಸುವ ಸಾಧ್ಯತೆಯಿದೆ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ಚಾಪೆಲ್ ಈ ಆತಣಕವನ್ನು ವ್ಯಕ್ತಪಡಿಸಿದ್ದಾರೆ.
ಗ್ರೇಗ್ ಚಾಪೆಲ್ ಟೀಮ್ ಇಂಡಿಯಾದ ಅತ್ಯಂತ ವಿವಾದಾತ್ಮಕ ಕೋಚ್ ಆಗಿದ್ದವರು. ಸ್ವತಃ ಸಚಿನ್ ತೆಂಡೂಲ್ಕರ್ ತನ್ನ ಆತ್ಮಕಥೆಯಲ್ಲಿ ಚಾಪೆಲ್ ಬಗ್ಗೆ "ಆತನೋರ್ವ ರಿಂಗ್ ಮಾಸ್ಟರ್ ತರ, ತನ್ನ ಚಿಂತನೆಗಳನ್ನು ಹಿಂದುಮುಂದು ಯೋಚಿಸದೆ ಆಟಗಾರರ ಮೇಲೆ ಹೇರುತ್ತಿದ್ದರು, ಅವರ ಮೇಲೆ ಅದು ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಒಂದಷ್ಟು ಯೋಚನೆ ಮಾಡುತ್ತಿರಲಿಲ್ಲ ಎಂದು ಬರೆದುಕೊಂಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications