ಟೆಸ್ಟ್ ಸರಣಿ: ಅಭ್ಯಾಸ ಪಂದ್ಯಕ್ಕೆ ಕೊಹ್ಲಿ ಪಡೆ ಸಿದ್ಧತೆ: ಎದುರಾಳಿ, ದಿನಾಂಕ, ಸಂಪೂರ್ಣ ಮಾಹಿತಿ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಬಳಿಕ 20 ದಿನಗಳ ವಿರಾಮದಲ್ಲಿದ್ದ ಟೀಮ್ ಇಂಡಿಯಾ ಆಟಗಾರರು ಈಗ ಮತ್ತೆ ಜೊತೆಯಾಗಿದ್ದಾರೆ ಈ ಅವಧಿಯಲ್ಲಿ ರಿಷಭ್ ಪಂತ್ ಸಹಿತ ಭಾರತದ ಇಬ್ಬರು ಕ್ರಿಕೆಟಿಗರು ಕೊರೊನಾವೈರಸ್‌ಗೆ ತುತ್ತಾಗಿದ್ದು ಇಬ್ಬರು ಕೂಟ ಕ್ವಾರಂಟೈನ್‌ನಲ್ಲಿದ್ದಾರೆ. ಉಳಿದ ಎಲ್ಲಾ ಸದಸ್ಯರು ಅಭ್ಯಾಸಕ್ಕೆ ಸಜ್ಜಾಗಿದ್ದಾರೆ. ಇನ್ನು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಆರಂಭಕ್ಕೂ ಮುನ್ನ ಭಾರತ ತಂಡ ಅಭ್ಯಾಸ ಪಂದ್ಯವನ್ನು ಆಡಲಿದೆ.
ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ ಭಾಗಿಯಾಗಲಿದೆ. ಈ ಪಂದ್ಯ ಡರ್ಹಾಮ್‌ನ ಎಮಿರೇಟ್ಸ್ ರಿವರ್ಸೈಡ್‌ನಲ್ಲಿ ನಡೆಯಲಿದೆ. ಮೊದಲಿಗೆ ಈ ಅಭ್ಯಾಸ ಪಂದ್ಯವನ್ನು ನಿಗದಿಪಡಿಸಿರಲಿಲ್ಲ. ಆದರೆ ವಿರಾಟ್ ಕೊಹ್ಲಿ ಪಡೆಯ ಮನವಿಯ ಹಿನ್ನೆಲೆಯಲ್ಲಿ ಬಿಸಿಸಿಐ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ಜೊತೆಗೆ ಮಾತುಕತೆ ನಡೆಸಿ ಈ ಅಭ್ಯಾಸ ಪಂದ್ಯಕ್ಕೆ ಏರ್ಪಾಡು ಮಾಡಿದೆ.
ಈ ಪಂದ್ಯದ ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ..

ದಿನಾಂಕ, ಸಮಯ ಮತ್ತು ಸ್ಥಳ
ಈ ಮೂರು ದಿನಗಳ ಅಭ್ಯಾಸ ಪಂದ್ಯವನ್ನು ಡರ್ಹಾಮ್‌ನ ಎಮಿರೇಟ್ಸ್ ರಿವರ್ಸೈಡ್ ಕ್ರೀಡಾಂಗಣದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಜುಲೈ 20 ರಿಂದ ಈ ಪಂದ್ತ ಆರಂಭವಾಗಲಿದ್ದು 22ರಂದು ಅಂತ್ಯವಾಗಲಿದೆ. ಭಾರತೀಯ ಕಾಲಮಾನ 4:30ಕ್ಕೆ ಈ ಪಂದ್ಯ ಆರಂಭವಾಗಲಿದೆ.

ಎದುರಾಳಿ ತಂಡ ಹಾಗೂ ನೇರಪ್ರಸಾರ
ಭಾರತ ತಂಡ ಈ ಅಭ್ಯಾಸ ಪಂದ್ಯವನ್ನು ಕೌಂಟಿ ಚಾಂಪಿಯನ್‌ಶಿಪ್ ತಂಡದ ವಿರುದ್ಧ ಆಡಲಿದೆ. ಆದರೆ ಯಾವೆಲ್ಲಾ ಆಟಗಾರರು ಈ ತಂಡದಲ್ಲಿ ಇರಲಿಲ್ಲದ್ದಾರೆ, ತಂಡ ಹೇಗಿರಲಿದೆ ಎಂಬುದರ ಬಗ್ಗೆ ಈವರೆಗೂ ಮಾಹಿತಿಗಳಿಲ್ಲ. ಈ ವಾರಾಂತ್ಯದಲ್ಲಿ ಈ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯುವ ನಿರೀಕ್ಷೆಯಿದೆ. ಈ ಅಭ್ಯಾಸ ಪಂದ್ಯದ ವೀಕ್ಷಣೆಗೂ ಅವಕಾಶವಿದೆ. ಯೂಟ್ಯೂಬ್‌ನಲ್ಲಿ ಡರ್ಹಾಮ್ ಕ್ರಿಕೆಟ್ ಟಿವಿ ಚಾನೆಲ್‌ನಲ್ಲಿ ಪಂದ್ಯ ನೇರಪ್ರಸಾರವಾಗಲಿದೆ.

ಆರ್ ಅಶ್ವಿನ್ ಸಿದ್ಧತೆ
ಇನ್ನು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಸಿಕ್ಕಿದ ವಿರಾಮದ ಸಂದರ್ಭದಲ್ಲಿ ಟೀಮ್ ಇಂಡಿಯಾ ಅನುಭವಿ ಆಟಗಾರ ಆರ್ ಅಶ್ವಿನ್ ಉತ್ತಮ ಅಭ್ಯಾಸವನ್ನು ನಡೆಸಿದ್ದಾರೆ. ಕೌಂಟಿ ಕ್ರಿಕೆಟ್‌ನಲ್ಲಿ ಸರ್ರೆ ತಂಡದ ಪರವಾಗಿ ಅಶ್ವಿನ್ ಅಡಲು ಇಳಿದಿದ್ದು ಉತ್ತಮ ಯಶಸ್ಸು ಸಾಧಿಸಿದ್ದಾರೆ. ಪಂದ್ಯದಲ್ಲಿ ಒಟ್ಟು ಅಶ್ವಿನ್ ಏಳು ವಿಕೆಟ್ ಪಡೆಯುವ ಮೂಲಕ ಎದುರಾಳಿ ಇಂಗ್ಲೆಂಡ್ ತಂಡಕ್ಕೆ ಈಗಾಗಲೇ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ. ಸೋಮರ್ಸೆಟ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಅಶ್ವಿನ್ 1 ವಿಕೆಟ್ ಮಾತ್ರವೇ ಪಡೆದಿದ್ದರೂ ಎರಡನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ಗಳ ಗೊಂಚಲು ಪಡೆದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications