Test: ಭಾರತ, ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿಯ ವೇಳಾ ಪಟ್ಟಿ ಬಿಡುಗಡೆ; ಒಂದು ಡೇ ಆಂಡ್ ನೈಟ್ ಟೆಸ್ಟ್
ಬಹು ನಿರೀಕ್ಷಿತ ಬಾರ್ಡರ್ ಗವಾಸ್ಕರ್ ಟ್ರೋಫಿಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಬಾರಿ ಸರಣಿ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ವಿಶೇಷವೆಂದರೆ ಐದು ಟೆಸ್ಟ್ ಪಂದ್ಯಗಳು ನಡೆಯಲಿವೆ. ಈ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಒಂದು ಟೆಸ್ಟ್ ಡೇ-ನೈಟ್ ಆಗಿರಲಿದೆ. ಕಳೆದ ಬಾರಿ ಭಾರತ, ಆಸ್ಟ್ರೇಲಿಯಾಕ್ಕೆ ಪ್ರವಾಸ ಬೆಳೆಸಿದ್ದಾಗ, ಟೀಮ್ ಇಂಡಿಯಾ ಸರಣಿಯನ್ನು ವಶಕ್ಕೆ ಪಡೆದಿತ್ತು. ಈ ಬಾರಿಯೂ ಟೀಮ್ ಇಂಡಿಯಾ ಇಂತಹದ್ದೇ ಸಾಧನೆ ಮಾಡಲು ಎದುರು ನೋಡುತ್ತಿದೆ.
ನವೆಂಬರ್ 22 ರಿಂದ ಆಸ್ಟ್ರೇಲಿಯಾದಲ್ಲಿ ಟೀಂ ಇಂಡಿಯಾ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. 32 ವರ್ಷಗಳ ನಂತರ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಐದು ಟೆಸ್ಟ್ ಸರಣಿ ನಡೆಯಲಿದೆ. 1991-92ರಲ್ಲಿ ಉಭಯ ದೇಶಗಳ ನಡುವೆ ಕೊನೆಯ ಬಾರಿಗೆ ಐದು ಟೆಸ್ಟ್ ಪಂದ್ಯ ಆಡಲಾಗಿತ್ತು. ಆಗಿನಿಂದಲೂ ಉಭಯ ದೇಶಗಳ ನಡುವೆ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿ ನಡೆಯುತ್ತಿದೆ.

2020-21ರಲ್ಲಿ ಭಾರತದ ಪ್ರದರ್ಶನ ಹೇಗಿತ್ತು?
2020-2021ರಲ್ಲಿ ಭಾರತ ತಂಡ ಆಸ್ಟ್ರೇಲಿಯಾಕ್ಕೆ ಕೊನೆಯ ಬಾರಿಗೆ ಪ್ರವಾಸ ಕೈಗೊಂಡಿತ್ತು. ಆ ವೇಳೆ ಉಭಯ ತಂಡಗಳ ನಡುವೆ 4 ಟೆಸ್ಟ್ ಪಂದ್ಯಗಳು ನಡೆದಿದ್ದವು. ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ 8 ವಿಕೆಟ್‌ಗಳ ಜಯ ಸಾಧಿಸಿತ್ತು. ಈ ಮೂಲಕ ಆಸೀಸ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತ್ತು. ಎರಡನೇ ಪಂದ್ಯದಲ್ಲಿ ಪ್ರವಾಸಿ ತಂಡ 8 ವಿಕೆಟ್ ಜಯ ಸಾಧಿಸಿತು. ಮೂರನೇ ಟೆಸ್ಟ್ ಡ್ರಾದಲ್ಲಿ ಅಂತ್ಯವಾಗಿತ್ತು. ನಾಲ್ಕನೇ ಟೆಸ್ಟ್ ಪಂದ್ಯ ಸಹ ಡ್ರಾ ದತ್ತ ಸಾಗಿತ್ತು. ಆದರೆ ರಿಷಭ್ ಪಂತ್ ಅವರ ಅಮೊಘ ಆಟದ ನೆರವಿನಿಂದ ಭಾರತ ಗೆಲುವಿನ ಕೇಕೆ ಹಾಕಿತ್ತು. ಈ ಮೂಲಕ ಆಸೀಸ್ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದ ಮೊದಲ ಏಷ್ಯಾ ಖಂಡದ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ಒಂದು ಡೇ & ನೈಟ್ ಟೆಸ್ಟ್
ಭಾರತ ತಂಡ ಡಿಸೆಂಬರ್ 6 ರಿಂದ 10 ರವರೆಗೆ ಅಡಿಲೇಡ್ ಓವಲ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ಹಗಲು-ರಾತ್ರಿ ಟೆಸ್ಟ್ ಆಡಲಿದೆ. ಈ ಟೆಸ್ಟ್ ಗುಲಾಬಿ ಚೆಂಡಿನಲ್ಲಿ ಆಡಲಾಗುತ್ತದೆ. ಮೊದಲ ಟೆಸ್ಟ್ ಪಂದ್ಯ ಪರ್ತ್‌ನಲ್ಲಿ ನಡೆಯುತ್ತಿರುವುದು ಈ ಸರಣಿಯ ವಿಶೇಷ. ಈ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾದ ದಾಖಲೆ ಈ ಅಂಗಳದಲ್ಲಿ ಬಲವಾಗಿದೆ. ಪರ್ತ್‌ನ ಹೊಸ ಕ್ರೀಡಾಂಗಣದಲ್ಲಿ ಕಾಂಗರೂಗಳು ನಾಲ್ಕು ಟೆಸ್ಟ್‌ಗಳಲ್ಲಿ ನಾಲ್ಕರಲ್ಲಿ ಗೆದ್ದಿದ್ದಾರೆ.
ಡಿಸೆಂಬರ್ 14 ರಿಂದ ಗಬ್ಬಾದಲ್ಲಿ ಮೂರನೇ ಟೆಸ್ಟ್ ನಡೆಯಲಿದೆ. ಮೆಲ್ಬೋರ್ನ್‌ನ ಎಂಸಿಜಿ ಅಂಗಳ ಬಾಕ್ಸಿಂಗ್ ಡೆ ಟೆಸ್ಟ್‌ಗೆ ಆತಿಥ್ಯ ವಹಿಸಲಿದೆ. ಸಿಡ್ನಿಯ ಎಸ್‌ಸಿಜಿಯಲ್ಲಿ ಟೂರ್ನಿಯ ಐದನೇ ಪಂದ್ಯ ಜನವರಿ 3ರಿಂದ, 7ರವರೆಗೆ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications