Thailand Open 2026: ಫೈನಲ್ ಪ್ರವೇಶಿಸಿದ ಭಾರತದ ಪುರುಷರ ಡಬಲ್ಸ್ ಜೋಡಿ
ಭಾರತದ ಸ್ಟಾರ್ ಪುರುಷರ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಥೈಲ್ಯಾಂಡ್ ಓಪನ್ 2026 ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಪ್ರಶಸ್ತಿ ಸುತ್ತು ಪ್ರವೇಶಿಸಿದ್ದಾರೆ. ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಸ್ಟಾರ್ ಜೋಡಿ ಮಲೇಷ್ಯಾದ ಜೋಡಿಯನ್ನು ಮಣಿಸಿ ಮುನ್ನಡೆ ಸಾಧಿಸಿತು. ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತದ ಜೋಡಿ, ಇಂಡೋನೇಷ್ಯಾದ ಜೋಡಿಯನ್ನು ಎದುರಿಸಲಿದೆ.
ವಿಶ್ವದ ನಾಲ್ಕನೇ ಶ್ರೇಯಾಂಕದ ಸಾತ್ವಿಕ್ ಮತ್ತು ಚಿರಾಗ್ ಥೈಲ್ಯಾಂಡ್ ಓಪನ್ 2026 ರ ಸೆಮಿಫೈನಲ್‌ನಲ್ಲಿ 9 ನೇ ಶ್ರೇಯಾಂಕಿತ ಮಲೇಷ್ಯಾದ ಜೋಡಿ ಗೋಹ್ ಜೇ ಫೀ ಮತ್ತು ನೂರ್ ಇಝುದ್ದೀನ್ ಜೋಡಿಯ ಸವಾಲನ್ನು ಎದುರಿಸಿತು. ಮೊದಲ ಗೇಮ್‌ನಲ್ಲಿ ಭಾರತದ ಜೋಡಿ ಜಿದ್ದಾಜಿದ್ದಿನ ಆಟದ ಪ್ರದರ್ಶನ ನೀಡಿತು. ಈ ಹಂತದಲ್ಲಿ ಮಲೇಷ್ಯಾದ ಜೋಡಿ, ಭಾರತದ ಪುರುಷರ ಡಬಲ್ಸ್ ಜೋಡಿಯನ್ನು ಮಣಿಸಿ ಅಬ್ಬರಿಸಿತು. ಈ ಮೂಲಕ 1-0 ಮುನ್ನಡೆ ಸಾಧಿಸಿತು.

ಎರಡನೇ ಗೇಮ್‌ನಲ್ಲಿ ಭಾರತದ ಜೋಡಿ ಭರ್ಜರಿ ಪ್ರದರ್ಶನ ನೀಡಿತು. ಈ ಹಂತದಲ್ಲಿ ಭಾರತದ ಜೋಡಿ, ಮಲೇಷ್ಯಾ ಜೋಡಿಯ ಸವಾಲನ್ನು ಮೀರಿ ನಿಂತಿತು. ಪರಿಣಾಮ ಎರಡನೇ ಗೇಮ್‌ನಲ್ಲಿ 22-20 ರಿಂದ ಗೆದ್ದುಕೊಂಡು ಪುಟಿದೆದ್ದಿತು. ಉಭಯ ತಂಡಗಳು ತಲಾ ಒಂದೊಂದು ಪಂದ್ಯವನ್ನು ಗೆದ್ದಿದ್ದರಿಂದ ಪಂದ್ಯ ರೋಚಕತೆ ಹುಟ್ಟಿಸಿತು.
ಎರಡನೇ ಗೇಮ್‌ನ ಗೆಲುವಿನ ಜೋಶ್‌ನಲ್ಲಿದ್ದ ಭಾರತದ ಜೋಡಿ, ಮೂರನೇ ಗೇಮ್‌ನಲ್ಲೂ ಕಮಾಲ್ ಪ್ರದರ್ಶನ ನೀಡಿತು. ಈ ಗೇಮ್‌ನಲ್ಲಿ ಭಾರತದ ಜೋಡಿ 21-16 ರಿಂದ ಗೆದ್ದು ಬೀಗಿತು. ಪರಿಣಾಮ ಮೂರು ಗೇಮ್‌ಗಳ ಪಂದ್ಯದಲ್ಲಿ ಭಾರತದ ಜೋಡಿ 2-1 ರಿಂದ ಜಯ ಸಾಧಿಸಿ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದಿದೆ.
ಮೂರನೇ ಪ್ರಶಸ್ತಿಯ ಕನಸಿನಲ್ಲಿ ಭಾರತದ ಜೋಡಿ
ಸಾತ್ವಿಕ್-ಚಿರಾಗ್ ಜೋಡಿ 2019 ಮತ್ತು 2024 ರಲ್ಲಿ ಥೈಲ್ಯಾಂಡ್ ಓಪನ್ ಪ್ರಶಸ್ತಿಯನ್ನು ಗೆದ್ದು ಕೊಂಡಿತ್ತು. ಈ ಬಾರಿ ಪ್ರಶಸ್ತಿ ಎತ್ತುವ ಮೂಲಕ ಮೂರನೇ ಬಾರಿಗೆ ಈ ಸಾಧನೆ ಮಾಡುವ ಕನಸು ಕಾಣುತ್ತಿದೆ. ಫೈನಲ್ ಪಂದ್ಯದಲ್ಲಿ ಭಾರತದ ಜೋಡಿ ಇಂಡೋನೇಷ್ಯಾದ ಲಿಯೋ ರೋಲಿ ಕಾರ್ನಾಂಡೊ ಮತ್ತು ಡೇನಿಯಲ್ ಮಾರ್ಟಿನ್ ಸವಾಲು ಎದುರಿಸಲಿದೆ. ಈ ಜೋಡಿ ಉಪಾಂತ್ಯ ಪಂದ್ಯದಲ್ಲಿ 21-15 ಮತ್ತು 21-18 ನೇರ ಸೆಟ್‌ಗಳಿಂದ ಚೀನಾದ ಜೋಡಿಯನ್ನು ಮಣಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications