Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಚೇತರಿಸಿಕೊಂಡು ಮತ್ತೆ ಗಾಲ್ಫ್ ಮೈದಾನಕ್ಕಿಳಿದ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್

That’s what life is all about : Kapil Dev back at the golf course

ಭಾರತ ಕ್ರಿಕೆಟ್ ತಂಡದ ದಿಗ್ಗಜ ಆಲ್‌ರೌಂಡರ್ ಮಾಜಿ ನಾಯಕ ಕಪಿಲ್ ದೇವ್ ಮತ್ತೆ ಗಾಲ್ಫ್ ಅಂಗಳದಲ್ಲಿ ಕಾಣಿಸಿಕೊಂಡಿದ್ದಾರೆ. ಸ್ನೇಹಿತರ ಜೊತೆಗೆ ಗಾಲ್ಫ್ ಆಡುತ್ತಿರುವ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಕಪಿಲ್‌ದೇವ್ ಮತ್ತೊಮ್ಮೆ ಅಂಗಳಕ್ಕಿಳಿದಿರುವುದು ಸಂತಸ ನೀಡುತ್ತಿದೆ ಎಂದಿದ್ದಾರೆ.

ಕಪಿಲ್‌ದೇವ್ ಇತ್ತೀಚೆಗೆ ಲಘು ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆ್ಯಂಜಿಯೋಪ್ಲಾಸ್ಟಿಯ ಬಳಿಕ ಕಪಿಲ್ ಚೇತರಿಕೆಯನ್ನು ಕಂಡಿದ್ದರು. ಬಳಿಕ ತಮ್ಮ ಮನೆಯಲ್ಲೇ ವಿಶ್ರಾಂತಿಯನ್ನು ಪಡೆದು ಸಂಪೂರ್ಣ ಚೇತರಿಕೆಯನ್ನು ಕಂಡಿದ್ದಾರೆ ಕಪಿಲ್‌ದೇವ್.

ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾದ ಬಳಿಕ ಕಪಿಲ್ ಗಾಲ್ಫ್‌ ಆಟದಲ್ಲಿ ಹೆಚ್ಚಿನ ಸಮಯನ್ನು ಕಳೆಯುತ್ತಿದ್ದಾರೆ. ತಮ್ಮ ಗೆಳೆಯರೊಂದಿಗೆ ಗಾಲ್ಫ್ ಆಡುತ್ತಾ ಸಮಯವನ್ನು ಕಳೆಯಲು ಕಪಿಲ್ ಇಷ್ಟ ಪಡುತ್ತಾರೆ. ಹೃದಯ ಚಿಕಿತ್ಸೆಯ ನಂತರ ವಿರಾಮವನ್ನು ಪಡೆದಿದ್ದ ಅವರು ಮತ್ತೊಮ್ಮೆ ಗಾಲ್ಫ್ ಅಂಗಳಕ್ಕೆ ಇಳಿದಿದ್ದಾರೆ.

"ಕ್ರಿಕೆಟ್ ಅಂಗಳ ಅಥವಾ ಗಾಲ್ಫ್ ಅಂಗಳಕ್ಕೆ ಮರಳಿ ಮಜಾ ಅನುಭವಿಸುವುದನ್ನು ನೀವು ಶಬ್ಧಗಳಲ್ಲಿ ವರ್ಣಿಸುವುದು ಸಾಧ್ಯವಿಲ್ಲ. ಗಾಲ್ಫ್ ಅಂಗಳಕ್ಕೆ ಮರಳಿರುವುದು ಸುಂದರವಾದ ಅನುಭವ. ಗೆಳೆಯರ ಜೊತೆಗೆ ಆಡುತ್ತಾ ಮಜಾ ಮಾಡುತ್ತಿದ್ದೇನೆ. ಬದುಕೆಂದರೆ ಇದೇ ಅಲ್ಲವೇ" ಎಂದು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಕಪಿಲ್ ದೇವ್ ಮಾತನಾಡಿದ್ದಾರೆ.

Story first published: Thursday, November 12, 2020, 17:29 [IST]
Other articles published on Nov 12, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+