
ಟೆಸ್ಟ್ ಕ್ರಿಕೆಟ್ ಕೊಹ್ಲಿಯ ಮಹತ್ತರ ಗುರಿಯಾಗಿತ್ತು
ಟೆಸ್ಟ್ ಕ್ರಿಕೆಟ್‌ನಲ್ಲಿ ಮಹತ್ವದ ಸಾಧನೆ ಮಾಡುವ ಹಂಬಲವನ್ನು ಇಡೀ ಭಾರತ ತಂಡದಲ್ಲಿ ಉಂಟು ಮಾಡಿದ್ದ ವಿರಾಟ್ ಕೊಹ್ಲಿ ನಾಯಕನಾಗಿ ಮಾಡಿದ ಮಹತ್ತರವಾದ ಸಾಧನೆ ಎಂದು ಇಯಾನ್ ಚಾಪೆಲ್ ಅಭಿಪ್ರಾಯಪಟ್ಟಿದ್ದಾರೆ. "ಎಲ್ಲಾ ಯಶಸ್ಸುಗಳ ಹೊರತಾಗಿಯೂ ಟೆಸ್ಟ್ ಕ್ರಿಕೆಟ್‌ನಲ್ಲಿ ಮಹತ್ತರವಾದ ಸಾಧನೆ ಮಾಡುವುದು ವಿರಾಟ್ ಕೊಹ್ಲಿಯ ಪ್ರಮುಖ ಗುರಿಯಾಗಿತ್ತು. ಟೆಸ್ಟ್ ಕ್ರಿಕೆಟ್‌ನ ಮೇಲೆ ವಿರಾಟ್ ಕೊಹ್ಲಿಗೆ ಇದ್ಧ ಬದ್ಧತೆ ಅವರಲ್ಲಿ ಸ್ಪಷ್ಟವಾಗಿ ವ್ಯಕ್ತವಾಗಿದೆ. ಈ ಮಾದರಿಯಲ್ಲಿ ತನ್ನ ತಂಡವನ್ನು ವಿರಾಟ್ ಕೊಹ್ಲಿ ಕಠಿಣ ಸ್ಪರ್ಧೆಗೆ ಒಡ್ಡಿದ್ದರು ಎಂಬುದರಲ್ಲಿ ಅನುಮಾನವಿಲ್ಲ. ಆದ ಕಾರಣದಿಂದಾಗಿ ಅವರು ಅದರಲ್ಲಿ ಯಶಸ್ಸನ್ನು ಕೂಡ ಸಾಧಿಸಿದ್ದಾರೆ." ಎಂದು ಇಯಾನ್ ಚಾಪೆಲ್ ಇಎಸ್‌ಪಿಎನ್ ಕ್ರಿಕ್ ಇನ್ಫೋಗೆ ಬರೆದ ಲೇಖನದಲ್ಲಿ ಅಭಿಪ್ರಾಯ ದಾಖಲಿಸಿದ್ದಾರೆ.

ಕೊಹ್ಲಿಯ ಆ ನಿರ್ಧಾರವೇ ಮಾಸ್ಟರ್‌ಸ್ಟ್ರೋಕ್
ವಿರಾಟ್ ಕೊಹ್ಲಿಯ ಸಾಧನೆಯನ್ನು ಪ್ರಶಂಸಿಸುತ್ತಾ ಇಯಾನ್ ಮಾರ್ಗನ್ ಕೊಹ್ಲಿ ಸಾಧನೆಯ ಬಗ್ಗೆ ಯಾವುದೇ ಪಂದ್ಯದ ಗೆಲುವನ್ನಾಗಲಿ ಅಥವಾ ಯಾವುದೇ ಸರಣಿ ಗೆಲುವನ್ನಾಗಲೀ ಉಲ್ಲೇಖಿಸಲಿಲ್ಲ. ಆದರೆ ತಂಡದ ಓರ್ವ ಆಟಗಾರನ ಬೆನ್ನಿಗೆ ನಿಲ್ಲುವ ನಿರ್ಧಾರವನ್ನು ವಿರಾಟ್ ಕೊಹ್ಲಿ ತೆಗೆದುಕೊಂಡಿದ್ದು ಮಾಸ್ಟರ್‌ಸ್ಟ್ರೋಕ್ ಎಂದಿದ್ದಾರೆ.
ಇಯಾನ್ ಮಾರ್ಗನ್ ಹೀಗೆ ಹೇಳಿದ್ದು ಭಾರತದ ಯುವ ಆಟಗಾರ ರಿಷಭ್ ಪಂತ್ ಬಗ್ಗೆ. ರಿಷಬ್ ಪಂತ್ ಅವರ ಸಾಮರ್ಥ್ಯವನ್ನು ಅರಿತು ಆತನಿಗೆ ಬೆಂಬಲವಾಗಿ ನಿಲ್ಲುವ ನಿರ್ಧಾರನ್ನು ವಿರಾಟ್ ಕೊಹ್ಲಿ ತೆಗೆದುಕೊಂಡಿದ್ದು ಅತ್ಯಂತ ಮಹತ್ವದ ನಿರ್ಧಾರ ಎಂಬ ಮಾತನ್ನು ಇಯಾನ್ ಚಾಪೆಲ್ ಹೇಳಿದ್ದಾರೆ. ರಿಷಬ್ ಪಂತ್ ಅವರ ಬೆಳವಣಿಗೆ ವಿರಾಟ್ ಕೊಹ್ಲಿಯ ಮಹತ್ವದ ಕೊಡುಗೆ ಎಂದಿದ್ದಾರೆ ಚಾಪೆಲ್.

ಪಂತ್ ಬೆಳವಣಿಗೆಯೇ ಮಹತ್ತರ ಸಾಧನೆ
"ವಿರಾಟ್ ಕೊಹ್ಲಿ ತಮ್ಮ ನಾಯಕತ್ವದಲ್ಲಿ ಅನೇಕ ಸಾಧನೆಯನ್ನು ಮಾಡಿದ್ದಾರೆ. ಆದರೆ ಎಲ್ಲಾ ಸಾಧನೆಗಳಿಗಿಂತಲೂ ರಿಷಭ್ ಪಂತ್ ಬ್ಯಾಟರ್ ಆಗಿ ಹಾಗೂ ವಿಕೆಟ್ ಕೀಪರ್ ಆಗಿ ಮಾಡಿದ ಕಂಡ ಬೆಳವಣಿಗೆ ಅದ್ಭುತ ಸಾಧನೆಯಾಗಿದೆ" ಎಂದಿದ್ದಾರೆ ಇಯಾನ್ ಚಾಪೆಲ್. "ಆಯ್ಕೆಯ ವಿಚಾರವಾಗಿ ವಿರಾಟ್ ಕೊಹ್ಲಿ ತಮ್ಮ ನಿರ್ಧಾರಗಳ ಮೇಲೆ ಹೆಚ್ಚಿನ ಒಲವು ಹೊಂದಿದ್ದರು. ಈ ವಿಚಾರವಾಗಿ ಕೊಹ್ಲಿಯ ಕೆಲ ನಿರ್ಧಾರಗಳು ಪ್ರಶ್ನಾರ್ಹವಾಗಿದ್ದವು. ಆದರೆ ಪಂತ್ ಅವರ ಬೆಂಬಲಕ್ಕೆ ನಿಂತ ನಿರ್ಧಾರ ಮಾತ್ರ ಮಾಸ್ಟರ್ ಸ್ಟ್ರೋಕ್ ಆಗಿದೆ" ಎಂದಿದ್ದಾರೆ ಇಯಾನ್ ಚಾಪೆಲ್.

ರಿಷಭ್ ಪಂತ್ ಸಾಧನೆ
ರಿಷಭ್ ಪಂತ್ 2018ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಮೊದಲ ಬಾರಿಗೆ ಟೆಸ್ಟ್ ಮಾದರಿಗೆ ಪದಾರ್ಪಣೆ ಮಾಡಿದರು. ಅಲ್ಲಿಂದ ಈವರೆಗೆ 24 ಪಂದ್ಯಗಳನ್ನು ಆಡಿರುವ ಪಂತ್ 1444 ರನ್‌ಗಳಿಸಿದ್ದಾರೆ. ಇದರಲ್ಲಿ ನಾಲ್ಕು ಶತಕಗಳು ದಾಖಲಾಗಿದೆ. ವಿರಾಟ್ ಕೊಹ್ಲಿ ಸಿಡಿಸಿದ ಈ ಶತಕಗಳ ಪೈಕಿ ನಾಲ್ಕು ವಿದೇಶದಲ್ಲಿ ಸಿಡಿದಿದೆ ಎಂಬುದು ಗಮನಾರ್ಹ. 2018ರಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ಮೊದಲ ಶತಕ ಗಳಿಸಿದ್ದರೆ 2019ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಹಾಗೂ ದಕ್ಷಿಣ ಆಫ್ರಿಕಾದಲ್ಲಿ 2022ರ ಸರಣಿಯಲ್ಲಿ ಶತಕ ಸಿಡಿಸಿದ್ದಾರೆ.


Click it and Unblock the Notifications
