ಕೋಹ್ಲಿ ಅವರನ್ನು ಟಾರ್ಗೆಟ್ ಮಾಡಬೇಡಿ: ಅನುರಾಗ್ ಠಾಕೂರ್
ನವದೆಹಲಿ, ಮಾರ್ಚ್ 24: ಟೀಂ ಇಂಡಿಯಾ ನಾಯಕ ವಿರಾಟ್ ಕೋಹ್ಲಿ ಅವರನ್ನು ಆಸ್ಟ್ರೇಲಿಯ ಕ್ರಿಕೆಟ್ ಮಂಡಳಿ ಟಾರ್ಗೆಟ್ ಮಾಡುತ್ತಿರುವುದು ನಿಜಕ್ಕೂ ದುರಹಂಕಾರದ ನಡೆ, ಇದು ಕ್ರಿಕೆಟ್ ನ ಭವಿಷ್ಯದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ ಎಂದು ಬಿಸಿಸಿಐ ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ಹೇಳಿದ್ದಾರೆ.
ಬಿಸಿಸಿಐ ಬಗ್ಗೆಯೂ ತಮ್ಮ ಅಸಮಾಧಾನ ವ್ಯಕ್ತಪಡಿಸಿದ ಠಾಕೂರ್, ಈ ವಿವಾದಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಸಂಪೂರ್ಣವಾಗಿ ಟೀಂ ಇಂಡಿಯಾ ಆಟಗಾರರ ಪರವಾಗಿ ನಿಲ್ಲುತ್ತಿಲ್ಲ, ತಂಡದ ಒಗ್ಗಟ್ಟು ಮತ್ತು ಸಮಗ್ರತೆಯ ವಿಷಯದಲ್ಲಿ ಬಿಸಿಸಿಐ ರಾಜಿ ಮಾಡಿಕೊಳ್ಳುತ್ತಿದೆ ಎಂದಿದ್ದಾರೆ. [ಕೊಹ್ಲಿ, ವಿಶ್ವ ಕ್ರೀಡಾರಂಗದ ಡೊನಾಲ್ಡ್ ಟ್ರಂಪ್: ಆಸೀಸ್ ಮಾಧ್ಯಮಗಳ ಟೀಕೆ]

ಆಸ್ಟ್ರೇಲಿಯಾ ಮಾಧ್ಯಮದ ನಡೆ ಆಕ್ಷೇಪಾರ್ಹ
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿಯ 2 ನೇ ಪಂದ್ಯದ ಸಂದರ್ಭದಲ್ಲಿ ಎದ್ದ ಡಿ ಆರ್ ಎಸ್ (ಡಿಸಿಶನ್ ರಿವ್ಯೂ ಸಿಸ್ಟೆಮ್) ವಿವಾದದ ಕುರಿತು ಮಾತನಾಡಿದ ಅವರು 'ಆಸ್ಟ್ರೇಲಿಯಾದ ಮಾಧ್ಯಮಗಳೂ ಟೀಂ ಇಂಡಿಯಾದ ಸ್ಟಾರ್ ಆಟಗಾರ ಕೋಹ್ಲಿ ಅವರನ್ನು ವಿಲನ್ ಎಂಬಂತೆ ಚಿತ್ರಿಸುತ್ತಿರುವುದು ತಪ್ಪು. ಅದರ ನಡೆ ಆಕ್ಷೇಪಾರ್ಹ ಎಂದು ಠಾಕೂರ್ ಹೇಳಿದ್ದಾರೆ.[ಭಾರತೀಯ ಕ್ರಿಕೆಟ್ ಆಟಗಾರರ ಸಂಭಾವನೆ ದ್ವಿಗುಣ]

ಆಸ್ಟ್ರೇಲಿಯಾದ್ದು ನಿರಂಕುಶ ಪ್ರವೃತ್ತಿ
ಕ್ರಿಕೆಟ್ ಯಾವಾಗಲೂ ತನ್ನ ನಿಯಂತ್ರಣದಲ್ಲೇ ಇರಬೇಕು ಎಂಬಂಥ ಕ್ರಿಕೆಟ್ ಆಸ್ಟ್ರೇಲಿಯಾ ನಡೆಯನ್ನು ನಾನು ಒಪ್ಪುವುದಿಲ್ಲ, ಆಸ್ಟ್ರೇಲಿಯಾ ಮಾಧ್ಯಮದ ನಡೆಯನ್ನು ಬಿಸಿಸಿ ಐ ಆದಿಯಾಗಿ ಎಲ್ಲರೂ ವಿರೋಧಿಸಬೇಕಿದೆ ಎಂದು ಠಾಕೂರ್ ತಮ್ಮ ಕಳಕಳಿ ವ್ಯಕ್ತಪಡಿಸಿದರು.[ಚಿತ್ರಗಳಲ್ಲಿ: ಐಸಿಸಿ ಶ್ರೇಯಾಂಕದ ಟಾಪ್ 5 ಬೌಲರ್ಸ್]

ಕೋಹ್ಲಿಗೆ sorry ಅನ್ನೋಕೆ ಬರಲ್ಲ
ಇತ್ತೀಚೆಗೆ ಕ್ರಿಕೆಟ್ ಆಸ್ಟ್ರೇಲಿಯದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೇಮ್ಸ್ ಸುದರ್ ಲ್ಯಾಂಡ್, ಡಿ ಆರ್ ಎಸ್ ವಿವಾದಕ್ಕೆ ಸಂಬಂಧಿಸಿದಂತೆ 'ಕೋಹ್ಲಿ ಅವರಿಗೆ sorry ಎಂಬ ಪದವನ್ನು ಉಚ್ಛರಿಸುವುದಕ್ಕೆ ಬರುತ್ತದೋ ಇಲ್ಲವೋ ಎಂಬುದು ನನಗೆ ಅನುಮಾನ' ಎಂದಿದ್ದನ್ನು ಠಾಕೂರ್ ನೆನಪಿಸಿಕೊಂಡರು.[ಬಿಸಿಸಿಐ ಗುತ್ತಿಗೆಯಿಂದ ರೈನಾ ಔಟಾಗಿದ್ದರ ರಹಸ್ಯ ಬಯಲು!]

ಕೋಹ್ಲಿಗೆ ಟ್ರಂಪ್ ರೊಡನೆ ಹೋಲಿಕೆ
ಕೋಹ್ಲಿ ಅವರನ್ನು ವಿವಾದಾತ್ಮಕ ನಡೆಯಿಂದಲೇ ಖ್ಯಾತರಾದ ಅಮೆರಿಕ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಹೋಲಿಸುವ ಉದ್ಧಟತನವನ್ನು ಆಸ್ಟ್ರೇಲಿಯಾ ಮಾಧ್ಯಮಗಳು ತೋರಿದ್ದವು.

ಕಳೆದ ವರ್ಷ ಪದಚ್ಯತಿಗೊಂಡಿದ್ದ ಠಾಕೂರ್
ಬಿಸಿಸಿ ಐ ಅಧ್ಯಕ್ಷರಾಗಿದ್ದ ಠಾಕೂರ್ ಲೋಧಾ ಸಮಿತಿ ಶಿಫಾರಸ್ಸಿನ ಆಧಾರದ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಿಂದಾಗಿ ಪದಚ್ಯುತಿಗೊಂಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications