Ind vs Aus Test: ಕಾರು ಅಪಘಾತಕ್ಕೀಡಾದಂತಿತ್ತು! ಆಸ್ಟ್ರೇಲಿಯಾ ಇನ್ನಿಂಗ್ಸ್ ಬಗ್ಗೆ ಸ್ಟೀವ್ ಸ್ಮಿತ್ ಪ್ರತಿಕ್ರಿಯೆ

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಎರಡನೇ ಟೆಸ್ಟ್ ಪಂದ್ಯದಲ್ಲಿ ಕೂಡ ಕಾಂಗರೂ ಪಡೆ ಹೀನಾಯ ಸೋಲನುಭವಿಸಿತು. ಎರಡನೇ ಇನ್ನಿಂಗ್ಸ್‌ನಲ್ಲಿ 61 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿದ್ದ ಆಸ್ಟ್ರೇಲಿಯಾ ನಂತರ 113 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಶಾಕ್‌ಗೆ ಒಳಗಾಗಿತ್ತು.
ಆಸ್ಟ್ರೇಲಿಯಾದ ಈ ದಿಢೀರ್ ಕುಸಿತದ ಬಗ್ಗೆ ಬ್ಯಾಟರ್ ಸ್ಟೀವ್ ಸ್ಮಿತ್ ಸಾಕಷ್ಟು ನಿರಾಶರಾಗಿದ್ದರು ಎನ್ನುವ ವಿಚಾರವನ್ನು ತಂಡದ ಬ್ಯಾಟಿಂಗ್ ಕೋಚ್ ಮೈಕೆಲ್ ಡಿ ವೆನುಟೊ ಬಹಿರಂಗಪಡಿಸಿದ್ದಾರೆ.
ಆಸ್ಟ್ರೇಲಿಯಾ ದಿಢೀರ್ ಕುಸಿತ ಕಂಡಾಗ ಡ್ರೆಸ್ಸಿಂಗ್ ರೂಂನ ಪರಿಸ್ಥಿತಿ ಹೇಗಿತ್ತು ಎನ್ನುವುದರ ಬಗ್ಗೆ ಮಾತನಾಡಿದ್ದಾರೆ. ಔಟಾಗಿ ಬಂದ ನಂತರ ಸ್ಟೀವ್ ಸ್ಮಿತ್ ಸಾಕಷ್ಟು ನಿರಾಶೆಗೊಂಡಿದ್ದರು. ನಾನು ಕಳಪೆ ಶಾಟ್ ಆಡಿದೆ ಎಂದು ಅವರು ಹೇಳಿದರು. ಇದನ್ನು ಇತರೆ ಆಟಗಾರರು ಕೇಳಿಸಿಕೊಂಡರು ಆದರೂ, ಅವರು ಕೂಡ ಸ್ವೀಪ್ ಶಾಟ್ ಆಡಲು ಹೋಗಿ ಔಟ್ ಆದರು ಎಂದು ಮೈಕೆಲ್ ಡಿ ವೆನುಟೊ ಹೇಳಿದರು.
ಮ್ಯಾಥ್ಯೂ ರೆನ್‌ಶಾ, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮ್ಮಿನ್ಸ್ ಮತ್ತು 11 ನೇ ಶ್ರೇಯಾಂಕದ ಮ್ಯಾಥ್ಯೂ ಕುಹ್ನೆಮನ್ ಸ್ವೀಪ್ ಶಾಟ್ ಆಡಲು ಹೋಗಿ ಔಟಾಗಿದ್ದರು.

ಕಾರು ಅಪಘಾತಕ್ಕೀಡಾದಂತಿತ್ತು!
ಕೇವಲ 90 ನಿಮಿಷಗಳಲ್ಲಿ ಆಸ್ಟ್ರೇಲಿಯಾ ತಂಡ 9 ವಿಕೆಟ್ ಕಳೆದುಕೊಂಡಿತ್ತು. 115 ರನ್‌ಗಳ ಸುಲಭ ಗುರಿಯನ್ನು 4 ವಿಕೆಟ್ ಕಳೆದುಕೊಂಡು ಬೆನ್ನತ್ತಿದ ಭಾರತ ತಂಡ 6 ವಿಕೆಟ್‌ಗಳ ಜಯ ಸಾಧಿಸಿತ್ತು.
ನಿಧಾನವಾಗಿ ಚಲಿಸುವಾಗ ಕಾರು ಅಪಘಾತಕ್ಕೆ ಗುರಿಯಾದಂತಿತ್ತು ಎಂದು ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾ ಇನ್ನಿಂಗ್ಸ್ ಅನ್ನು ಬಣ್ಣಿಸಿದ್ದರು. ಡ್ರೆಸ್ಸಿಂಗ್ ರೂಂನಲ್ಲಿ ಸ್ಮಿತ್ ಕೋಪಗೊಂಡಿದ್ದರು, ತಾವು ಔಟಾದ ರೀತಿ ಬಗ್ಗೆ ಅವರಿಗೆ ಸಾಕಷ್ಟು ನಿರಾಶರಾಗಿದ್ದರು ಎಂದು ಬ್ಯಾಟಿಂಗ್ ಕೋಚ್ ಹೇಳಿದ್ದಾರೆ. ಡ್ರೆಸ್ಸಿಂಗ್ ರೂಂನಲ್ಲಿ ಸ್ಟೀವ್ ಸ್ಮಿತ್ ಕೋಪಗೊಂಡಿದ್ದರ ದೃಶ್ಯಗಳನ್ನು ಅಮೆಜಾನ್‌ನ ಸಾಕ್ಷ್ಯಚಿತ್ರ ಸರಣಿ ದಿ ಟೆಸ್ಟ್‌ನಲ್ಲಿಯೂ ಸಹ ನೋಡಬಹುದಾಗಿದೆ.
ಎರಡನೇ ಟೆಸ್ಟ್‌ನಲ್ಲಿ ಸೋತ ಬಳಿಕ ಆಸ್ಟ್ರೇಲಿಯಾದ ಹಲವು ಆಟಗಾರರು ವಾಪಸ್ ಆಸ್ಟ್ರೇಲಿಯಾಗೆ ಮರಳಿದ್ದಾರೆ. ನಾಯಕ ಪ್ಯಾಟ್ ಕಮಿನ್ಸ್ ವೈಯಕ್ತಿಕ ಕೆಲಸದ ಕಾರಣ ಆಸ್ಟ್ರೇಲಿಯಾಗೆ ತೆರಳಿದ್ದು, 2ನೇ ಟೆಸ್ಟ್ ವೇಳೆ ಗಾಯಗೊಂಡಿದ್ದ ವಾರ್ನರ್ ಕೂಡ ತವರಿಗೆ ಮರಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications