Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಸಿಸಿ ಟೂರ್ನಿಗಳನ್ನು ಆಯೋಜಿಸುವುದರಿಂದ ಏನು ಲಾಭ? ಇಲ್ಲಿದೆ ಮಾಹಿತಿ

ಮುಂದಿನ ವರ್ಷದಲ್ಲಿ ಪಾಕಿಸ್ತಾನ ಹೈಬ್ರಿಡ್ ಮಾದರಿಯಲ್ಲಿ ಚಾಂಪಿಯನ್ಸ್‌ ಟ್ರೋಫಿಯನ್ನು ಆಯೋಜಿಸಲಿದೆ. ಈ ವೇಳೆ ಹಲವು ದೇಶಗಳು ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಆಯೋಜಿಸುವ ಟ್ರೋಫಿಗೆ ಆತಿಥ್ಯ ನೀಡುವ ಕನಸನ್ನು ಹೊಂದಿರುತ್ತವೆ. ಅಂದಹಾಗಿ ಈ ಮೆಗಾ ಈವೆಂಟ್‌ಗಳನ್ನು ಆಯೋಜನೆ ಮಾಡುವುದರಿಂದ ದೇಶಕ್ಕೆ ಆಗುವ ಏನು ಲಾಭ ಎಂಬ ಪ್ರಶ್ನೆಗಳು ಅಭಿಮಾನಿಗಳ ಮನದಲ್ಲಿ ಓಡಾಡುತ್ತಲೇ ಇರುತ್ತವೆ. ಅದಕ್ಕೆ ಉತ್ತರ ಇಲ್ಲಿದೆ.

ಐಸಿಸಿ ಹಲವು ಟೂರ್ನಿಗಳನ್ನು ಆಯೋಜಿಸುತ್ತದೆ. ಅದರಲ್ಲಿ ಐಸಿಸಿ ಪುರಷರ ಹಾಗೂ ಮಹಿಳೆಯ ಏಕದಿನ ವಿಶ್ವಕಪ್‌ ಹಾಗೂ ಟಿ20 ವಿಶ್ವಕಪ್‌ ಸೇರಿವೆ. ಅಲ್ಲದೆ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್ ಹಾಗೂ ಚಾಂಪಿಯನ್ಸ್‌ ಟ್ರೋಫಿಗಳು ಸೇರಿವೆ. ಈ ವರ್ಷ ಚಾಂಪಿಯನ್ಸ್ ಟ್ರೋಫಿಯನ್ನು ಪಾಕಿಸ್ತಾನ ಆಯೋಜಿಸಲಿದೆ. ಬಹು ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಐಸಿಸಿ ಈವೆಂಟ್‌ ಆಯೋಜಿಸುವ ಹಕ್ಕು ಸಿಕ್ಕಿದೆ. ಆದರೆ ಭಾರತದ ಪಂದ್ಯಗಳು ದುಬೈನಲ್ಲಿ ನಡೆಯಲಿವೆ. ಐಸಿಸಿ ಟೂರ್ನಿಯನ್ನು ಆಯೋಜಿಸುವುದರಿಂದ ಏನು ಲಾಭ ಎಂಬ ಪ್ರಶ್ನೆಗಳು ನಿಶ್ಚಿತವಾಗಿ ಅಭಿಮಾನಿಗಳ ಮನಸ್ಸಿನಲ್ಲಿ ಮೂಡುತ್ತದೆ.

The Benefits of Hosting ICC Tournaments Insights from Pakistan s Champions Trophy 2025

ಐಸಿಸಿ ಮೆಗಾ ಟೂರ್ನಿಗಳನ್ನು ಆಯೋಜಿಸುವುದರಿಂದ ಅನೇಕ ಉದ್ಯೋಗ ಅವಕಾಶ ಸೃಷ್ಟಿಯಾಗುತ್ತವೆ. ಹಲವು ಕ್ಷೇತ್ರಗಳಲ್ಲಿ ಕಾರ್ಮಿಕರ ಬೇಡಿಕೆ ವೃದ್ಧಿಸುತ್ತದೆ. ಇಂತಹ ದೊಡ್ಡ ಟೂರ್ನಿಗಳಲ್ಲಿ ಕೆಲಸ ಮಾಡುವುದುರಿಂದ ಉದ್ಯೋಗಿಗಳ ಕೌಶಲ್ಯ ಸುಧಾರಣೆ ಆಗುತ್ತದೆ.

ಮಿಶ್ವ ಮಟ್ಟದಲ್ಲಿ ಮನ್ನಣೆ

ಐಸಿಸಿಯ ಮೆಗಾ ಟೂರ್ನಿಗಳನ್ನು ಆಯೋಜನೆ ಮಾಡುವುದರಿಂದ ವಿಶ್ವ ಮಟ್ಟದಲ್ಲಿ ಮನ್ನಣೆ ಸಿಗುತ್ತದೆ. ಆತಿಥ್ಯ ವಹಿಸುವ ಸಂಸ್ಕೃತಿ ಹಾಗೂ ಪರಂಪರೆ ವಿಶ್ವದ ಮುಂದೆ ಅನಾವರಣವಾಗುತ್ತದೆ. ಇನ್ನು ಪಂದ್ಯಗಳ ನೇರಪ್ರಾಸರದ ಹಕ್ಕು, ಜಾಹೀರಾತು ವೇದಿಕೆಗಳಲ್ಲಿ ದೇಶಕ್ಕೆ ಹೊಸ ಗುರುತು ನೀಡುತ್ತದೆ. ಇದರಿಂದ ಬೇರೆ ದೇಶಗಳ ಬಂಡವಾಳ ಶಾಹಿಗಳನ್ನು ಆಕರ್ಷಿಸಲು ನೆರವಾಗುತ್ತದೆ.

ಐಸಿಸಿ ಟ್ರೋಫಿಗಳನ್ನು ಆಯೋಜನೆ ಮಾಡುವದರಿಂದ ಆಯೋಜಿಸುವ ನಗರಗಳಲ್ಲಿ ಮೂಲಕ ಸೌಕರ್ಯಗಳು ಸುಧಾರಣೆ ಆಗುತ್ತದೆ. ಹೊಸ ಕ್ರೀಡಾಂಗಣಗಳು ತಲೆ ಎತ್ತ ಬಹುದು. ಇಲ್ಲವೇ ಹಳೆಯ ಕ್ರೀಡಾಂಗಣಕ್ಕೆ ಹೊಸ ರೂಪ ನೀಡಲಾಗುತ್ತದೆ.

ಪ್ರವಾಸೋದ್ಯಮ ಬೆಳವಣಿಗೆ

ಐಸಿಸಿ ಟೂರ್ನಿಗೆ ಒಂದು ದೇಶ ಆತಿಥ್ಯ ವಹಿಸುತ್ತದೆ ಎಂದರೆ ಆ ದೇಶಕ್ಕೆ ಪ್ರವಾಸಿಗರ ಸಂಖ್ಯೆ ಏರಿಕೆ ಆಗುತ್ತದೆ. ಟೂರ್ನಿಯಲ್ಲಿ ಭಾಗವಹಿಸುವ ತಂಡಗಳ ಅಭಿಮಾನಿಗಳು ತಮ್ಮ ತಂಡವನ್ನು ಹುರಿದುಂಬಿಸಲು ಆಯಾ ದೇಶಗಳಿಗೆ ಪ್ರವಾಸ ಮಾಡುತ್ತಾರೆ. ಇದರಿಂದ ಆಯೋಜಿಸುವ ನಗರಗಳಲ್ಲಿ ಹಲವು ವ್ಯಾಪರಿಗಳಿಗೆ ಅನುಕೂಲವಾಗುತ್ತದೆ. ಈ ಸ್ಥಳಕ್ಕೆ ಬೇಟಿ ನೀಡಿದಾಗ ಪ್ರವಾಸಿಗಳು ಇಲ್ಲಿನ ಸುತ್ತಮುತ್ತಲಿನ ಐತಿಹಾಸಿಕ ಸ್ಥಳಕ್ಕೆ ಬೇಟಿ ನೀಡುತ್ತಾರೆ. ಇದರಿಂದ ಪ್ರವಾಸೋದ್ಯಮ ಬೆಳೆಯುತ್ತದೆ.

The Benefits of Hosting ICC Tournaments Insights from Pakistan s Champions Trophy 2025

ಭಾರತ ಸಹ ಮುಂದಿನ ವರ್ಷಗಳಲ್ಲಿ ಎರಡು ಐಸಿಸಿ ಟೂರ್ನಿಯನ್ನು ಆಯೋಜಿಸಲಿದೆ. ಇದರಲ್ಲಿ ಪುರಷರ ಹಾಗೂ ಮಹಿಳೆಯರ ಪಂದ್ಯಗಳು ಸೇರಿವೆ. ಪಾಕಿಸ್ತಾನದಲ್ಲಿ ಚಾಂಪಿಯನ್ಸ್‌ ಟ್ರೋಫಿ ಆಯೋಜಿಸಲಾಗುತ್ತಿದೆ. ಆದರೆ ಭಾರತ ಭದ್ರತೆಯ ಕಾರಣದಿಂದ ಈ ಟೂರ್ನಿಯಲ್ಲಿ ಭಾಗವಹಿಸಲು ಭಾರತ ನಿರಾಕರಿಸಿದೆ. ಹೀಗಾಗಿ ಭಾರತದ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಡಿಸಲಾಗುತ್ತದೆ. ಭಾರತದಲ್ಲಿ ಆಯೋಜಿಸಲಾಗುವ ಐಸಿಸಿ ಈವೆಂಟ್‌ಗಳಲ್ಲೂ ಪಾಕ್‌ ಇನ್ನು ಮುಂದೆ ತನ್ನ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಡಲಿದೆ.

Story first published: Friday, December 20, 2024, 20:45 [IST]
Other articles published on Dec 20, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+