For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್ 2021: ಭಾರತದ ವಿರುದ್ಧ ಅಭ್ಯಾಸ ಪಂದ್ಯವಾಡುವ ಕೌಂಟಿ XI ತಂಡ ಪ್ರಕಟ

The ECB has announced 14-man County XI to face India next week

ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಐದು ಒಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ ಭಾರತ ತಂಡ ಅಭ್ಯಾಸ ಪಂದ್ಯವನ್ನು ಎದುರಿಸಲಿದೆ. ಜುಲೈ 20ರಿಂದ ಆರಂಭವಾಗುವ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ತಂಡವನ್ನು ಎದುರಿಸುವ ತಂಡವನ್ನು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಇಂದು ಪ್ರಕಟಿಸಿದೆ.

ಕೌಂಟಿ ಸೆಲೆಕ್ಟ್ XI ತಂಡವನ್ನು ಭಾರತ ಎದುರಿಸಲಿದ್ದು ಈ ತಂಡದ ನಾಯಕನಾಗಿ ವಾರ್ವಿಕ್‌ಶೈರ್ ನಾಯಕ ವಿಲ್ ರೋಡ್ಸ್ ಮುನ್ನಡೆಸಲಿದ್ದಾರೆ. ಈ ತಂಡದಲ್ಲಿ ಇತ್ತೀಚೆಗಷ್ಟೇ ಟೆಸ್ಟ್‌ಗೆ ಪದಾರ್ಪಣೆ ಮಾಡಿ ಖ್ಯಾತರಾದ ಜೇಮ್ಸ್ ಬ್ರೇಸಿ ಹಾಗೂ 2016ರಲ್ಲಿ ಭಾರತದ ವಿರುದ್ಧ ತನ್ನ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ ಹಸೀಬ್ ಅಹ್ಮದ್ ಕೂಡ ಇದ್ದಾರೆ.

ವಾರ್ವಿಕ್‌ಶೈರ್‌ನ ರಾಬ್ ಯಾಟ್ಸ್, ಮಿಡ್ಲ್‌ಸೆಕ್ಸ್ ತಂಡದ ಈಥನ್ ಬ್ಯಾಂಬರ್ ಕೂಡ ಈ ತಂಡದಲ್ಲಿ ಅವಕಾಶವನ್ನು ಪಡೆದುಕೊಂಡಿದ್ದು ಭರವಸೆಯ ಆಟಗಾರರು ಎನಿಸಿದ್ದಾರೆ. ಮೂರು ದಿನಗಳ ಪಂದ್ಯ ಇದಾಗಿದ್ದು ಡರ್ಹಾಮ್‌ನ ರಿವರ್‌ಸೈಡ್ ಮೈದಾನದಲ್ಲಿ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೆ ಪ್ರೇಕ್ಷಕರಿಗೆ ಅವಕಾಶವಿಲ್ಲ. ಆದರೆ ಡರ್ಹಾಮ್ ಕ್ರಿಕೆಟ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ನೇರಪ್ರಸಾರವಾಗಲಿದೆ.

ಇನ್ನು ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಆರಂಭಕ್ಕೂ ಮುನ್ನ ಭಾರತ ತಂಡದ ರಿಷಭ್ ಪಂತ್ ಕೊರೊನಾವೈರಸ್‌ಗೆ ತುತ್ತಾಗಿರುವುದು ಬೆಳಕಿಗೆ ಬಂದಿದೆ. ಆದರೆ ತಂಡದ ಆಟಗಾರರು ಪ್ರತ್ಯೇಕವಾಗಿರುವಾಗಲೇ ಈ ಪ್ರಕರಣ ಬೆಳಕಿಗೆ ಬಂದಿದ್ದು ಈಗಾಗಲೇ 8 ದಿನಗಳ ಕ್ವಾರಂಟೈನ್ ಮುಗಿಸಿದ್ದಾರೆ. ಪಂತ್ ಯಾವುದೇ ರೋಗಲಕ್ಷಣಗಳನ್ನು ಹೊಂದಿಲ್ಲ ಹಾಗೂ ಅವರ ಆರೋಗ್ಯ ಉತ್ತಮವಾಗಿದೆ ಎಂದು ಬಿಸಿಸಿಐ ಮಾಹಿತಿಯನ್ನು ನೀಡಿದೆ.

ಕೌಂಟಿ ಸೆಲೆಕ್ಟ್ ಇಲೆವೆನ್ ಸ್ಕ್ವಾಡ್: ವಿಲ್ ರೋಡ್ಸ್ (ನಾಯಕ), ರೆಹನ್ ಅಹ್ಮದ್, ಟಾಮ್ ಆಸ್ಪಿನ್ವೆಲ್, ಎಥಾನ್ ಬಾಂಬರ್, ಜೇಮ್ಸ್ ಬ್ರೇಸಿ, ಜ್ಯಾಕ್ ಕಾರ್ಸನ್, ಜ್ಯಾಕ್ ಚಾಪೆಲ್, ಹಸೀಬ್ ಹಮೀದ್, ಲಿಂಡನ್ ಜೇಮ್ಸ್, ಜೇಕ್ ಲಿಬ್ಬಿ, ಕ್ರೇಗ್ ಮೈಲ್ಸ್, ಲಿಯಾಮ್ ಪ್ಯಾಟರ್ಸನ್-ವೈಟ್, ಜೇಮ್ಸ್ ರೆವ್, ರಾಬ್ ಯೇಟ್ಸ್

ಪಂತ್ ಸಹಾಯಕ್ಕೆ ಬಂದ ಗಂಗೂಲಿ | Rishab Pant | Oneindia Kannada

Story first published: Thursday, July 15, 2021, 20:46 [IST]
Other articles published on Jul 15, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+