IND vs ENG: ಪ್ರವಾಸಕ್ಕೂ ಮುನ್ನವೇ ಇಂಗ್ಲೆಂಡ್‌ಗೆ ಶುರುವಾಗಿದೆ ಸ್ಪಿನ್ ಭಯ
ಅಫ್ಘಾನಿಸ್ತಾನದ ನಂತರ ಭಾರತ ತಂಡವು ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ಆತಿಥ್ಯ ನೀಡಲಿದೆ. ಉಭಯ ತಂಡಗಳ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿ ಜನವರಿ 25 ರಿಂದ ಆರಂಭವಾಗಲಿದೆ. ಈ ಸರಣಿಯು ಮಾರ್ಚ್ 11 ರವರೆಗೆ ನಡೆಯಲಿದೆ. ಇಂಗ್ಲೆಂಡ್ ತಂಡ ಕೂಡ ಈ ಸರಣಿಗೆ ತನ್ನ ತಯಾರಿ ಆರಂಭಿಸಿದೆ. ಆದರೆ ಭಾರತಕ್ಕೆ ಬರುವ ಮುನ್ನವೇ ಇಂಗ್ಲೆಂಡ್ ಭಯಕ್ಕೆ ಬಿದ್ದಂತೆ ಕಾಣುತ್ತಿದೆ. ಹಾಗಿದ್ದರೆ ಇಂಗ್ಲೆಂಡ್ ಭಯಕ್ಕೆ ಕಾರಣವಾದ ಅಂಶಗಳು ಯಾವವು ಇಲ್ಲಿದೆ ವರದಿ.
ಐದು ಟೆಸ್ಟ್‌ಗಳ ಸರಣಿಯಲ್ಲಿ ಟರ್ನಿಂಗ್ ಪಿಚ್‌ಗಳನ್ನು ಸಿದ್ಧಪಡಿಸಬೇಡಿ ಎಂದು ಇಂಗ್ಲೆಂಡ್‌ನ ಮಾಜಿ ನಾಯಕ ನಾಸಿರ್ ಹುಸೇನ್ ಭಾರತಕ್ಕೆ ಸಲಹೆ ನೀಡಿದರು. ಮತ್ತು ಅಂತಹ ಪರಿಸ್ಥಿತಿಯಲ್ಲಿ ಪ್ರವಾಸಿ ತಂಡದ ಸ್ಪಿನ್ನರ್‌ಗಳು ಸಹ ಪರಿಣಾಮಕಾರಿ ಎಂದು ಸಾಬೀತುಪಡಿಸಬಹುದು ಎಂದು ಹೇಳಿದರು. ಭಾರತ ಪ್ರವಾಸಕ್ಕಾಗಿ ಇಂಗ್ಲೆಂಡ್ ತನ್ನ ತಂಡದಲ್ಲಿ ನಾಲ್ವರು ಸ್ಪಿನ್ನರ್‌ಗಳನ್ನು ಉಳಿಸಿಕೊಂಡಿದೆ, ಇದರಲ್ಲಿ ಜಾಕ್ ಲೀಚ್ ಮತ್ತು ರೆಹಾನ್ ಅಹ್ಮದ್ ಮತ್ತು ಇನ್ನೂ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡದ ಟಾಮ್ ಹಾರ್ಟ್ಲಿ ಮತ್ತು ಶೋಯೆಬ್ ಬಶೀರ್ ಇದ್ದಾರೆ.

ಭಾರತ ತಂಡದಲ್ಲಿ ನಾಲ್ವರು ಸ್ಪಿನ್ನರ್ಸ್
ಭಾರತವು ಇಂಗ್ಲೆಂಡ್ ವಿರುದ್ಧದ ಸರಣಿಯ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರ ರೂಪದಲ್ಲಿ ನಾಲ್ಕು ಸ್ಪಿನ್ನರ್‌ಗಳನ್ನು ತನ್ನ ತಂಡದಲ್ಲಿ ಸ್ಥಾನ ನೀಡಿದೆ.
ಸ್ಕೈ ಸ್ಪೋರ್ಟ್ಸ್ ಕ್ರಿಕೆಟ್ ಪಾಡ್‌ಕ್ಯಾಸ್ಟ್‌ನಲ್ಲಿ ಹುಸೇನ್ ಅವರು ಸ್ವಲ್ಪ ಸ್ಪಿನ್ನರ್‌ಗಳು ಮತ್ತು ಬ್ಯಾಟ್ಸ್‌ಮನ್‌ಗಳಿಗೆ ಸಮಾನ ಅವಕಾಶಗಳನ್ನು ನೀಡುವಂತಹ ಪಿಚ್‌ಗಳೇ ಇರುತ್ತವೆ. ಭಾರತ ತಂಡ ಉತ್ತಮ ಪಿಚ್‌ಗಳನ್ನು ಸಿದ್ಧಪಡಿಸಬೇಕಿದೆ ಎಂದು ನಾನು ನಂಬುತ್ತೇನೆ ಎಂದು ಹೇಳಿದರು.

ಭಾರತ ಹೆಚ್ಚು ಸ್ಪಿನ್ ಆಗುವ ಪಿಚ್ ಅನ್ನು ಸಿದ್ಧಪಡಿಸಿದರೆ ಅದರ ಲಾಭ ಎರಡೂ ತಂಡಗಳಿಗೆ ಸಿಗಲಿದೆ. ಇಂಗ್ಲೆಂಡ್ ತಂಡದಲ್ಲೂ ನಾಲ್ವರು ಸ್ಪಿನ್ ಬೌಲರ್‌ಗಳು ಇದ್ದು ಟೀಮ್ ಇಂಡಿಯಾಕ್ಕೆ ಕಾಡಬಹುದು. ಬೇಸ್ ಬಾಲ್ ಸ್ಟ್ರಾಟರ್ಜಿ ಇಲ್ಲಿ ವರ್ಕ್ ಆಗುವುದಿಲ್ಲ ಎಂದು ಅನಿಸುತ್ತದೆ ಎಂದು ತಿಳಿಸಿದ್ದಾರೆ.
2012-13ರಲ್ಲಿ ಸ್ಪಿನ್ ಪಿಚ್ ಸಿದ್ಧಪಡಿಸಿದ್ದ ಭಾರತಕ್ಕೆ ಹಿನ್ನಡೆ ಆಗಿತ್ತು. ಆ ಸಮಯದಲ್ಲಿ ಗ್ರೇಮ್ ಸ್ವಾನ್ ಮತ್ತು ಮಾಂಟಿ ಪನೇಸರ್ ಅವರು ಭಾರತದ ಬ್ಯಾಟ್ಸ್‌ಮನ್‌ಗಳನ್ನು ಬಲೆಗೆ ಬೀಳಿಸುವ ಮೂಲಕ ಇಂಗ್ಲೆಂಡ್‌ನ 2-1 ಸರಣಿಯನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಭಾರತ ತಂಡವು ಇಂಗ್ಲೆಂಡ್‌ನ ಬೇಸ್‌ಬಾಲ್ ತಂತ್ರವನ್ನು ಹೇಗೆ ವಿಫಲಗೊಳಿಸುತ್ತದೆ ಎಂಬುದನ್ನು ಭಾರತೀಯ ಅಭಿಮಾನಿಗಳು ಸಹ ಕುತೂಹಲದಿಂದ ನೋಡುತ್ತಾರೆ ಎಂದು ಹುಸೇನ್ ಹೇಳಿದರು. ಭಾರತೀಯ ಕ್ರಿಕೆಟ್ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಬೇಸ್ ಬಾಲ್ ಬಗ್ಗೆಯೂ ಸಾಕಷ್ಟು ಚರ್ಚೆ ನಡೆದಿದೆ ಎಂದರು. ವಿಶ್ವಕಪ್‌ಗೆ ಮುನ್ನ, ತಂಡವು ಬೇಸ್‌ಬಾಲ್‌ನಲ್ಲಿ ಹೇಗೆ ವಿಫಲಗೊಳ್ಳುತ್ತದೆ ಎಂಬುದನ್ನು ನೋಡಲು ಅನೇಕ ಭಾರತೀಯ ಅಭಿಮಾನಿಗಳು ಉತ್ಸುಕರಾಗಿದ್ದಾರೆ ಎಂದು ತಿಳಿದಿದ್ದೇನೆ ಎಂದಿದ್ದಾರೆ.
ಭಾರತ vs ಇಂಗ್ಲೆಂಡ್ ಟೆಸ್ಟ್ ಸರಣಿ
ಮೊದಲ ಟೆಸ್ಟ್ ಪಂದ್ಯ, 25-29 ಜನವರಿ, ಹೈದರಾಬಾದ್
ಎರಡನೇ ಟೆಸ್ಟ್ ಪಂದ್ಯ, ಫೆಬ್ರವರಿ 2-6, ವಿಶಾಖಪಟ್ಟಣ
ಮೂರನೇ ಟೆಸ್ಟ್ ಪಂದ್ಯ, 15-19 ಫೆಬ್ರವರಿ, ರಾಜ್‌ಕೋಟ್
ನಾಲ್ಕನೇ ಟೆಸ್ಟ್ ಪಂದ್ಯ, 23-27 ಫೆಬ್ರವರಿ, ರಾಂಚಿ
ಐದನೇ ಟೆಸ್ಟ್ ಪಂದ್ಯ, 7-11 ಮಾರ್ಚ್, ಧರ್ಮಶಾಲಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications