Turning Point: ರಾಜಸ್ಥಾನ ಗೆಲುವಿಗೆ ಕಾರಣವಾದ ಅಂಶ ಇದೆ..
ಗುವಾಹಟಿಯಲ್ಲಿ ನಡೆದ 18ನೇ ಆವೃತ್ತಿಯ 10ನೇ ಪಂದ್ಯವನ್ನು ರಾಜಸ್ಥಾನ ರಾಯಲ್ಸ್ ಗೆದ್ದು ಬೀಗಿದೆ. ಸ್ಪರ್ಧಾತ್ಮಕ ಮೊತ್ತವನ್ನು ಡಿಫೆಂಡ್ ಮಾಡಿಕೊಂಡ ರಾಯಲ್ಸ್ ಅಬ್ಬರಿಸಿದೆ. 6 ರನ್‌ಗಳಿಂದ ಪಂದ್ಯವನ್ನು ಸೋತ ಚೆನ್ನೈ ಸೂಪರ್ ಕಿಂಗ್ಸ್ ಸೋತಿದೆ. ಈ ಸಾಲಿನಲ್ಲಿ ಚೆನ್ನೈ ಕಂಡ ಬ್ಯಾಕ್ ಟು ಬ್ಯಾಕ್ ಎರಡನೇ ಸೋಲು ಇದಾಗಿದೆ. ಈ ಗೆಲುವಿನ ಹೀರೋ ನಿತೀಶ್ ರಾಣಾ. ಇವರು 36 ಎಸೆತಗಳಲ್ಲಿ 81 ರನ್ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.
ಜೋಫ್ರಾ ಆರ್ಚರ್ ಮಾಡಿದ ಮೊದಲ ಓವರ್‌ನಲ್ಲೇ ಸಿಎಸ್‌ಕೆ ಗೆಲುವಿನ ಆಸೆಗೆ ಪೆಟ್ಟು ನೀಡಿತು. ಭರವಸೆಯ ಆಟಗಾರ ರಚಿನ್ ರವೀಂದ್ರ ಅವರನ್ನು ಆರ್ಚರ್ ಸೊನ್ನಗೆ ಪೆವಿಲಿಯನ್‌ಗೆ ಕಳುಹಿಸಿದರು. ನಾಯಕ ರುತುರಾಜ್ ಗಾಯಕ್ವಾಡ್ ಸಹ ತಂಡಕ್ಕೆ ಗೆಲುವಿನ ಮಾಲೆ ತೊಡಿಸುವಲ್ಲಿ ವಿಫಲರಾದರು. ಇವರು ಅರ್ಧಶತಕ ಬಾರಿಸಿ ಮುನ್ನಗುತ್ತಿದ್ದಾಗ ವನಿಂದು ಹಸರಂಗ ತೋಡಿದ ಖೆಡ್ಡಾಗೆ ಬಲಿಯಾದರು.

ಚೆನ್ನೈ ಗೆಲುವಿಗೆ ಕೊನೆಯ 3 ಓವರ್‌ಗಳಲ್ಲಿ 45 ರನ್ ಅವಶ್ಯಕತೆ ಇದ್ದಾಗ, ಮಹೇಂದ್ರ ಸಿಂಗ್ ಧೋನಿ ಹಾಗೂ ರವೀಂದ್ರ ಜಡೇಜಾ ಕ್ರೀಸ್‌ನಲ್ಲಿದ್ದರು. ಇವರಿಬ್ಬರ ಕ್ಷಮತೆಯನ್ನು ನೋಡಿದರೆ ಈ ರನ್ ಸುಲಭವಾಗಿ ಮುಟ್ಟಬಹುದಾಗಿತ್ತು. ಆದರೆ ಸಿಎಸ್‌ಕೆ ಈ ಪಂದ್ಯವನ್ನು 6 ರನ್‌ಗಳಿಂದ ಸೋತಿತು.
ಪಂದ್ಯ ತಿರುವು ಯಾವುದು?
ರುತುರಾಜ್ ಗಾಯಕ್ವಾಡ್ ಯಾವಾಗ 44 ಎಸೆತಗಳಲ್ಲಿ 63 ರನ್ ಬಾರಿಸಿ ಪೆವೆಲಿಯನ್ ಸೇರಿದ್ರೊ ಆಗಲೆ, ಚೆನ್ನೈ ಕೈಯಿಂದ ಪಂದ್ಯ ಜಾರುತ್ತಿತ್ತು. ಇನ್ನು ತಂಡಕ್ಕೆ ಗೆಲುವಿನ ಹಾರವನ್ನು ತೊಡಿಸುವ ಜವಾಬ್ದಾರಿ ರವೀಂದ್ರ ಜಡೇಜಾ ಹಾಗೂ ಮಹೇಂದ್ರ ಸಿಂಗ್ ಧೋನಿ ಅವರದ್ದಾಗಿತ್ತು. ತುಷಾರ್ ದೇಶಪಾಂಡೆ ಎಸೆದ 19ನೇ ಓವರ್‌ನಲ್ಲಿ ಸಿಎಸ್‌ಕೆ 19 ರನ್ ಬಾರಿಸಿತ್ತು. ಕೊನೆಯ ಓವರ್‌ನಲ್ಲಿ 20 ರನ್ ಅವಶ್ಯಕತೆ ಇತ್ತು. ಕೊನೆಯ ಓವರ್ ಯಾರು ಮಾಡ್ತಾರೆ ಎಂಬ ಪ್ರಶ್ನೆ ಎಲ್ಲರ ಮನದಲ್ಲಿದ್ದಾಗ ಇನ್ನೊಂದು ತುದಿಯಿಂದ ಸಂದೀಪ್ ಶರ್ಮಾ ಚೆಂಡನ್ನು ಹಿಡಿದು ಬೌಲ್ ಮಾಡಲು ಬಂದರು.
ಕೊನೆಯ ಓವರ್
ಕೊನೆಯ ಓವರ್ ಸಂದೀಪ್ ಶರ್ಮಾ ಬೌಲ್ ಮಾಡಿದ್ದು ನಿಜಕ್ಕೂ ಎಲ್ಲರಿಗೂ ಚಕಿತ ಗೊಳಿಸಿತು. ಕಾರಣ ವೇಗಿ ಜೋಫ್ರಾ ಆರ್ಚರ್ ಅವರ ಇನ್ನು ಒಂದು ಓವರ್ ಬಾಕಿ ಇತ್ತು. ಈ ಓವರ್‌ನ ಮೊದಲ ಎಸೆತದಲ್ಲೇ ಧೋನಿ ಇಲ್ಲದ ಹೊಡೆತಕ್ಕೆ ಮುಂದಾಗಿ ಶಿಮ್ರೊನ್ ಹಿಟ್ಮೆಯರ್ ಹಿಡಿದ ಅದ್ಭುತ್ ಕ್ಯಾಚ್‌ಗೆ ಬಲಿಯಾದರು. ಜಡೇಜಾ ಕೊನೆಯ ಓವರ್‌ನಲ್ಲಿ 12 ರನ್ ಬಾರಿಸಿದರು. ಇದು ಜಯಕ್ಕೆ ಸಾಕಾಗಲಿಲ್ಲ.

ಆಡಿದ ಮೊದಲೆರಡು ಪಂದ್ಯಗಳಲ್ಲಿ ಸೋಲು ಕಂಡಿದ್ದ ರಾಜಸ್ಥಾನ ರಾಯಲ್ಸ್ ಹ್ಯಾಟ್ರಿಕ್ ಸೋಲಿನ ಭೀತಿಯಲ್ಲಿತ್ತು. ಆದರೆ ತವರಿನ ಅಂಗಳದಲ್ಲಿ ನೀಡಿದ ಸಂಘಟಿತ ಪ್ರದರ್ಶನ ತಂಡ ಗೆಲುವು ಸಾಧಿಸಲು ಸಾಧ್ಯವಾಯಿತು. ಈ ಮೂಲಕ ರಿಯಾನ್ ಪರಾಗ್ ತಾವು ತಂಡವನ್ನು ಮುನ್ನಡೆಸಿದ ವೇಳೆಗೆ ಮೊದಲ ಬಾರಿಗೆ ಗೆಲುವು ದಾಖಲಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications