For Quick Alerts
ALLOW NOTIFICATIONS  
For Daily Alerts
 

ಡೆಲ್ಲಿ ಪರ 'ಕರ್ನಾಟಕ'ದ ಪ್ರವೀಣ್ ದೂಬೆ ಐಪಿಎಲ್‌ಗೆ ಪಾದಾರ್ಪಣೆ

The legspinner Pravin Dubey making his IPL 2020 debut for Delhi Capitals

ದುಬೈ: ಕರ್ನಾಟಕ ತಂಡದಲ್ಲಿ ಆಡುವ ಲೆಗ್ ಸ್ಪಿನ್ನರ್ ಪ್ರವೀಣ್ ದೂಬೆ ಇಂಡಿಯನ್ ಪ್ರೀಮಿಯರ್ ಲೀಗ್ 2020ರಲ್ಲಿ ಪಾದಾರ್ಪಣೆ ಪಂದ್ಯ ಆಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಪರ, ಮುಂಬೈ ಇಂಡಿಯನ್ಸ್ ವಿರುದ್ಧ ದೂಬೆ ಈ ಸೀಸನ್‌ನ ಚೊಚ್ಚಲ ಪಂದ್ಯ ಆಡಿದ್ದಾರೆ. ಇದು ಐಪಿಎಲ್‌ನಲ್ಲಿ ಪ್ರವೀಣ್ ಆಡುತ್ತಿರುವ ಮೊದಲ ಪಂದ್ಯವೂ ಹೌದು.

ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಶನಿವಾರ (ಅಕ್ಟೋಬರ್ 31) ನಡೆದ ಐಪಿಎಲ್ 51ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ಕಣಕ್ಕಿಳಿದಿದ್ದವು. ಈ ವೇಳೆ ಡೆಲ್ಲಿ ಇನ್ನಿಂಗ್ಸ್‌ನಲ್ಲಿ ಪ್ರವೀಣ್ 9ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದರು.

ಕರ್ನಾಟಕ ತಂಡದಲ್ಲಿ ಆಡುವ ಪ್ರವೀಣ್ ದೂಬೆ ಮೂತಃ ಉತ್ತರ ಪ್ರದೇಶದ ಅಝಮ್‌ಗರ್‌ನವರು. ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಹುಬ್ಳಿ ಟೈಗರ್ಸ್ ಮತ್ತು ಬೆಳಗಾವಿ ಪ್ಯಾಂಥರ್ಸ್ ಪರ ಆಡಿದ್ದರು. ರಾಯಲ್ ಚಾಲೆಂಜರ್ಸ್ ಪರ ಒಮ್ಮೆ ಆಯ್ಕೆಯಾಗಿದ್ದರಾದರೂ ಒಂದೂ ಪಂದ್ಯ ಆಡಿರಲಿಲ್ಲ.

ಶನಿವಾರದ ಪಂದ್ಯದಲ್ಲಿ 13 ಎಸೆತಗಳಲ್ಲಿ ಪ್ರವೀಣ್ 7 ರನ್ ಗಳಿಸಿದ್ದರು. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಡೆಲ್ಲಿ ಕ್ಯಾಪಿಟಲ್ಸ್, ಪೃಥ್ವಿ ಶಾ 10, ಶ್ರೇಯಸ್ ಐಯ್ಯರ್ 25, ರಿಷಭ್ ಪಂತ್ 21, ಶಿಮ್ರನ್ ಹೆಟ್ಮೈಯರ್ 11, ಆರ್ ಅಶ್ವಿನ್ 12, ಕಾಗಿಸೊ ರಬಾಡ 12 ರನ್‌ನೊಂದಿಗೆ 20 ಓವರ್‌ಗೆ 9 ವಿಕೆಟ್ ಕಳೆದು 110 ರನ್ ಗಳಿಸಿತು.

Story first published: Saturday, October 31, 2020, 17:22 [IST]
Other articles published on Oct 31, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+