Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RCB ಫೈನಲ್‌ ತಲುಪಿದ್ದು ಹೇಗೆ? ಲೀಗ್‌ ಹಂತದಲ್ಲಿ ಬೆಂಗಳೂರು ತಂಡದ ಪ್ರದರ್ಶನ ಹೇಗಿತ್ತು?

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಪ್ರಸಕ್ತ ಐಪಿಎಲ್‌ ಲೀಗ್‌ಬಲ್ಲಿ ಅಮೋಘ ಪ್ರದರ್ಶನ ನೀಡಿದೆ. ಲೀಗ್‌ ಹಂತದಲ್ಲಿ ಕಮಾಲ್ ಪ್ರದರ್ಶನ ನೀಡಿರುವ ಆರ್‌ಸಿಬಿ, ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದೊಂದಿಗೆ ಕ್ವಾಲಿಫೈಯರ್‌ ಪಂದ್ಯ ಆಡಲು ಅರ್ಹತೆ ಪಡೆಯಿತು. ಈ ಪಂದ್ಯದಲ್ಲಿ ಆರ್‌ಸಿಬಿ ಪಂಜಾಬ್‌ ಕಿಂಗ್ಸ್ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದಿದೆ. ಜೂನ್ 3 ರಂದು ಬೆಂಗಳೂರು ನಾಲ್ಕನೇ ಬಾರಿಗೆ ಐಪಿಎಲ್‌ ಫೈನಲ್ ಪಂದ್ಯವನ್ನು ಆಡಲಿದೆ. ಈ ವೇಳೆ ಆರ್‌ಸಿಬಿ ತನ್ನ ಚೊಚ್ಚ ಪ್ರಶಸ್ತಿಯ ಹುಡುಕಾಟದಲ್ಲಿದೆ.

ಆರ್‌ಸಿಬಿ ಈ ಬಾರಿಯ ಲೀಗ್‌ನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದೆ. ಆರ್‌ಸಿಬಿ 18 ಆವೃರ್ತಿಯ ಐಪಿಎಲ್‌ನಲ್ಲಿ ಎರಡನೇ ಬಾರಿಗೆ 200ಕ್ಕೂ ಹೆಚ್ಚು ರನ್‌ ಚೇಸ್ ಮಾಡಿದ ದಾಖಲೆಯನ್ನು ನಿರ್ಮಿಸಿದೆ. ಅಲ್ಲದೆ ಎದುರಾಳಿಯ ತವರಿನಲ್ಲಿ ಸತತ 7 ಪಂದ್ಯಗಳನ್ನು ಗೆದ್ದು ಬೀಗಿದೆ. ಹೀಗೆ ಹಲವು ದಾಖಲೆಗಳನ್ನು ನಿರ್ಮಿಸುತ್ತಿರುವ ಆರ್‌ಸಿಬಿ ಈ ಬಾರಿ ಫೈನಲ್‌ಗೆ ಅರ್ಹತೆ ಪಡೆದಿದೆ. ಹಾಗಿದ್ರೆ ಆರ್‌ಸಿಬಿ ಫೈನಲ್‌ ವರೆಗೆ ನಡೆದು ಬಂದ ಹಾದಿ ಹೇಗಿತ್ತು ಇಲ್ಲಿದೆ ವರದಿ.

The Path to the Final How RCB Reached Their Fourth IPL Championship

ಆರ್‌ಸಿಬಿ 18ನೇ ಆವೃತ್ತಿಯ ಐಪಿಎಲ್‌ ಆಡಲು ಮೈದಾನಕ್ಕೆ ಇಳಿಯುವಾಗಲೇ ನಿರೀಕ್ಷೆಗಳ ಭಾರವನ್ನು ತನ್ನ ಮೇಲೆ ಹೊತ್ತುಕೊಂಡು ಇಳಿದಿತ್ತು. ಈ ಬಾರಿ ಆರ್‌ಸಿಬಿ ಶತಾಯ ಗತಾಯ ಟ್ರೋಫಿ ಗೆಲ್ಲಲೇ ಬೇಕು ಎಂಬ ಕನಸು ಕಾಣುತ್ತಿತ್ತು. ಅದಕ್ಕೆ ಪೂರಕ ಎಂಬಂತೆ ಉದ್ಘಾಟನಾ ಪಂದ್ಯದಲ್ಲಿ ಕೆಕೆಆರ್‌ ತಂಡವನ್ನು ಮಣಿಸಿ ಗೆಲುವಿನ ಆರಂಭವನ್ನು ಮಾಡಿತು.

ತವರಿನಲ್ಲಿ ಸತತ ಸೋಲು

ಆರ್‌ಸಿಬಿ ಚೆನ್ನೈನಲ್ಲಿ 17 ವರ್ಷಗಳ ಬಳಿಕ ಸಿಎಸ್‌ಕೆ ತಂಡವನ್ನು 50 ರನ್‌ಗಳಿಂದ ಮಣಿಸಿ ಅಬ್ಬರಿಸಿದೆ. ಆದರೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಪ್ರಸಕ್ತ ಲೀಗ್‌ನಲ್ಲಿ ಮೊದಲ ಸೋಲನ್ನು ತವರಿನಲ್ಲಿ ಎದುರಿಸಬೇಕಾಯಿತು. ತವರಿನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಆರ್‌ಸಿಬಿ 8 ವಿಕೆಟ್‌ಗಳಿಂದ ಗುಜರಾತ್‌ ಟೈಟಾನ್ಸ್‌ ವಿರುದ್ಧ ನಿರಾಸೆಯನ್ನು ಅನುಭವಿಸಿತು. ಇನ್ನು 10 ವರ್ಷಗಳ ಬಳಿಕ ಆರ್‌ಸಿಬಿ ಮುಂಬೈ ಇಂಡಿಯನ್ಸ್ ತಂಡವನ್ನು ತವರಿನಲ್ಲಿ ಮಣಿಸಿ ಅಬ್ಬರಿಸಿತು. ತವರಿನಲ್ಲಿ ಆರ್‌ಸಿಬಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಮತ್ತೊಂದು ಸೋಲನ್ನು ಎದುರಿಸಬೇಕಾಯಿತು. ಈ ಮೂಲಕ ಆರ್‌ಸಿಬಿ ಬೆಂಗಳೂರಿನಲ್ಲಿ ಸತತ ಎರಡು ಪಂದ್ಯಗಳಲ್ಲಿ ಆಘಾತ ಅನುಭವಿಸಿತು.

The Path to the Final How RCB Reached Their Fourth IPL Championship

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋತ ಆರ್‌ಸಿಬಿ ಮತ್ತೆ ಎದುರಾಳಿ ತವರಿನಲ್ಲಿ ಅಬ್ಬರಿಸಿತು. ಜೈಪುರದಲ್ಲಿ ನಡೆದ 28ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು 9 ವಿಕೆಟ್‌ಗಳಿಂದ ಸೋಲಿಸಿತು. ಈ ಗೆಲುವಿನ ಬಳಿಕ ಮತ್ತೆ ತವರಿಗೆ ಬಂದಾಗ ಮತ್ತೆ ಅದೇ ಸೋಲು ತಂಡವನ್ನು ಬಿಗಿಯಾಗಿ ಅಪ್ಪಿಕೊಂಡಿತು. ಪಂಜಾಬ್‌ ಕಿಂಗ್ಸ್‌ 5 ವಿಕೆಟ್‌ಗಳಿಂದ ಆರ್‌ಸಿಬಿ ತಂಡವನ್ನು ಮಣಿಸಿತು. ಈ ಪಂದ್ಯದ ಬಳಿಕ ಮತ್ತೆ ಆರ್‌ಸಿಬಿ ಪಂಜಾಬ್‌ ವಿರುದ್ಧ ಪಂದ್ಯವನ್ನು ಆಡಲು ಮಲ್ಲಾನಪುರ್‌ಕ್ಕೆ ಪ್ರಯಾಣ ಬೆಳೆಸಿತು. ಈ ವೇಳೆ 7 ವಿಕೆಟ್‌ಗಳಿಂದ ಗೆದ್ದು ಬೀಗಿತು. ಬಳಿಕ ಆರ್‌ಸಿಬಿ ತವರಿನಲ್ಲಿ ತನ್ನ ಮೊದಲ ಗೆಲುವು ದಾಖಲಿಸಿತು. ರಾಜಸ್ಥಾನ ರಾಯಲ್ಸ್‌ ವಿರುದ್ಧ ಬೆಂಗಳೂರು ತಂಡ ಸೋಲು ಪಂದ್ಯದಲ್ಲಿ ಗೆಲುವು ದಾಖಲಿಸಿತು.

ದಾಖಲೆಯ ಚೇಸ್‌

ಡೆಲ್ಲಿಯಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ 6 ವಿಕೆಟ್‌ಗಳಿಂದ ಕ್ಯಾಪಿಟಲ್ಸ್‌ ತಂಡವನ್ನು ಮಣಿಸಿತು. ಉಳಿದಂತೆ ಆರ್‌ಸಿಬಿ 2ರನ್‌ಗಳಿಂದ ಚೆನ್ನೈ ಸೂಪರ್‌ ಕಿಂಗ್ಸ್ ತಂಡವನ್ನು ಮಣಿಸಿತು. ಇನ್ನು ಒಂದು ವಾರ ಸ್ಥಗಿತ ಗೊಂಡ ಐಪಿಎಲ್‌ ಪುನರಾರಂಭ ಆದ ಕೆಕೆಆರ್‌ ಹಾಗೂ ಆರ್‌ಸಿಬಿ ಮೊದಲ ಪಂದ್ಯದಲ್ಲಿ ಕಾದಾಟ ನಡೆಸಿದವು. ಈ ಪಂದ್ಯ ಮಳೆಯ ರದ್ದಾಗಿತ್ತು. ಲೀಗ್‌ ಹಂತದ ಕೊನೆಯ ಎರಡನೇ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಆರ್‌ಸಿಬಿ 42 ರನ್‌ ಆಘಾತ ಕಂಡಿತು. ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಎಲ್‌ಎಸ್‌ಜಿ 228 ರನ್‌ಗಳ ಗುರಿಯನ್ನು ಚೇಸ್‌ ಮಾಡಿದ ಆರ್‌ಸಿಬಿ ದಾಖಲೆ ನಿರ್ಮಿಸಿತು.

ಕ್ವಾಲಿಫೈಯರ್‌ ಗೆಲುವು

ಲೀಗ್‌ ಹಂತದಲ್ಲಿ 9 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದ ಪಂಜಾಬ್‌ ಕಿಂಗ್ಸ್ ಹಾಗೂ ಆರ್‌ಸಿಬಿ 19 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೊದಲೆರೆಡು ಸ್ಥಾನಗಳಿಗೆ ಬಡ್ತಿ ಪಡೆದವು. ಉಭಯ ತಂಡಗಳು ಮೊದಲ ಕ್ವಾಲಿಫೈಯರ್‌ನಲ್ಲಿ ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಆರ್‌ಸಿಬಿ 101 ರನ್‌ಗಳಿಗೆ ಪಂಜಾಬ್‌ ಕಿಂಗ್ಸ್ ತಂಡವನ್ನು ಕಟ್ಟಿ ಹಾಕಿತು. ಈ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ 10 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು ಗುರಿಯನ್ನು ಮುಟ್ಟಿ ಫೈನಲ್‌ಗೆ ಅರ್ಹತೆ ಪಡೆಯಿತು.

Story first published: Sunday, June 1, 2025, 18:05 [IST]
Other articles published on Jun 1, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+