IPL ಬಿಡಿ, WPLನಲ್ಲಿ ಆರ್‌ಸಿಬಿಗೆ ಗೆದ್ದ ಮೊತ್ತಕ್ಕೂ ಸಮವಿಲ್ಲ PSL ವಿಜೇತರಿಗೆ ಸಿಕ್ಕ ಬಹುಮಾನ
ಭಾರತ ಹಾಗೂ ಪಾಕಿಸ್ತಾನ ನಡುವಣ ಬಿಕ್ಕಟ್ಟು ಇಂದು ನಿನ್ನೆಯದಲ್ಲ. ಉಭಯ ದೇಶಗಳು ಒಂದಿಲ್ಲಾ ಒಂದು ರೀತಿಯಿಂದ ಎದುರಾಳಿ ದೇಶದ ಕಾಲನ್ನು ಎಳೆಯುತ್ತಲೇ ಇರುತ್ತವೆ. ಭಾರತವನ್ನು ಕಂಡರೆ ಕೆಂಡ ಕಾರುವ ಪಾಕ್, ನಾವು ಮಾಡಿದನ್ನು ತಾನು ಮಾಡಿ ಕೈ ಸುಟ್ಟುಕೊಳ್ಳುತ್ತಲೇ ಬರುತ್ತಲೇ ಇದೆ. ಇದಕ್ಕೆ ಹಲವು ಉದಾಹರಣೆಗಳು ನಮ್ಮ ಕಣ್ಣು ಮುಂದೆ ಬರುತ್ತವೆ. ಅದರಲ್ಲಿ ಎದ್ದು ಕಾಣುವುದೇ ಹಣ..
ಭಾರತ ಸದ್ಯ ವಿಶ್ವದಲ್ಲಿ ಬೆಳೆಯುತ್ತಿರುವ ದೇಶದ ಪಟ್ಟಿಗಳಲ್ಲಿ ಸ್ಥಾನ ಪಡೆಯುವಲ್ಲಿ ಹಗಲಿರುಳು ಪ್ರಯತ್ನ ಪಡುತ್ತಿದೆ. ತನ್ನ ಜಿಡಿಪಿಯನ್ನು ದಿನದಿಂದ ದಿನಕ್ಕೆ ಉತ್ತಮ ಗೊಳಿಸಿಕೊಂಡು, ವಿದೇಶಿ ಹೂಡಿಕೆದಾರರನ್ನು ತನ್ನತ್ತ ಆಕರ್ಷಿಸುತ್ತಿದೆ. ಇನ್ನೊಂದು ಬದಿ ಪಾಕಿಸ್ತಾನ ತಾನು ಮಾಡಿದ ತಪ್ಪಿನಿಂದ ಹಳ್ಳವನ್ನು ಹಿಡಿದಿದೆ. ಅಲ್ಲದೆ ಪಾಕ್‌ನ ಆರ್ಥಿಕ ಪರಿಸ್ಥಿತಿಯ ಬಗ್ಗೆ ಹೇಳುವ ಅವಶ್ಯಕೆ ಇಲ್ಲವೇ ಇಲ್ಲ. ಆದರೆ ವಾಸ್ತವತೆಯನ್ನು ಅರ್ಥಮಾಡಿಕೊಳ್ಳುವ ಮನಸ್ಥಿತಿಯನ್ನು ಪಾಕಿಗರು ಬೆಳಸಿಕೊಳ್ಳಬೇಕಿದೆ. ಭಾರತ ಐಪಿಎಲ್‌ನ್ನು ಆರಂಭಿಸಿ ಯಶಸ್ಸು ಕಂಡಿತು. ಇದನ್ನು ನೋಡಿದ ಪಾಕ್ ಪಿಎಸ್‌ಎಲ್ ಆರಂಭಿಸಿತು.

ಐಪಿಎಲ್ ನೋಡಿ ಪಿಎಸ್‌ಎಲ್ ಆರಂಭ
ಪಾಕ್ ಪಿಎಸ್‌ಎಲ್ ಆರಂಭಿಸಿದರೆ ಏನೂ ಸಮಸ್ಸೆ ಇರಲೇ ಇಲ್ಲ. ಆದರೆ, ಐಪಿಎಲ್‌ಗಿಂತಲೂ, ಪಿಎಸ್‌ಎಲ್ ಶ್ರೇಷ್ಠ ಎಂದು ಹೇಳಿಕೊಳ್ಳುವ ಪಾಕ್ ವಾಸ್ತವವನ್ನು ಅರ್ಥ ಮಾಡಿಕೊಳ್ಳುವ ಅನಿವಾರ್ಯತೆ ಇದೆ. ಪಿಎಸ್‌ಎಲ್ ಅನ್ನು ಐಪಿಎಲ್‌ಗಿಂತ ಉತ್ತಮ ಎಂದು ಬಿಂಬಿಸಲು ಪಾಕಿಸ್ತಾನಿಗಳು ಯಾವಾಗಲೂ ಸ್ಪರ್ಧೆಯಲ್ಲಿರುತ್ತಾರೆ. ವೀಕ್ಷಕರ ಸಂಖ್ಯೆ, ಇದಕ್ಕೆ ಬಿಸಿಸಿಐ ಮಾಡಿಕೊಳ್ಳುವ ತಯಾರಿ, ಪ್ರೈಸ್ ಮನಿಯಲ್ಲವನ್ನೂ ಲೆಕ್ಕಾ ಹಾಕಿದಾಗ ಯಾವುದು ಗ್ರೇಟ್ ಎನ್ನುವುದು ತಿಳಿಯುತ್ತದೆ.

ಪಿಎಸ್‌ಎಲ್ ಗೆದ್ದ ತಂಡಕ್ಕೆ ಸಿಕ್ಕ ಹಣವೆಷ್ಟು?
PSL 2024 ರ ಫೈನಲ್ ಪಂದ್ಯವನ್ನು ಸೋಮವಾರ (ಮಾರ್ಚ್ 18) ತಡರಾತ್ರಿ ಆಡಲಾಯಿತು. ಅಂದಿನಿಂದ, ಲೀಗ್‌ನ ಬಹುಮಾನದ ಮೊತ್ತವು ಚರ್ಚೆಯ ವಿಷಯವಾಗಿ ಉಳಿದಿದೆ. ಫೈನಲ್‌ನಲ್ಲಿ ಶಾದಾಬ್ ಖಾನ್ ಅವರ ತಂಡ ಇಸ್ಲಾಮಾಬಾದ್ ಯುನೈಟೆಡ್ ಮತ್ತು ರಿಜ್ವಾನ್ ಅವರ ತಂಡ ಮುಲ್ತಾನ್ ಸುಲ್ತಾನ್ ನಡುವೆ ಕಾದಾಟ ನಡೆಯಿತು.
ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಇಸ್ಲಾಮಾಬಾದ್ ಕೊನೆಯ ಎಸೆತದಲ್ಲಿ ಮುಲ್ತಾನ್ ತಂಡವನ್ನು ಮೂರು ವಿಕೆಟ್‌ಗಳಿಂದ ಸೋಲಿಸಿತು. ಪಂದ್ಯದ ಕೊನೆಯ ಎಸೆತದಲ್ಲಿ ಇಸ್ಲಾಮಾಬಾದ್ 160 ರನ್‌ಗಳ ಗುರಿಯನ್ನು ಮುಟ್ಟಿ ಸಂಭ್ರಮಿಸಿತು. ಅಲ್ಲದೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಚಾಂಪಿಯನ್ ತಂಡಕ್ಕೆ ನೀಡಿರುವ ಹಣವೇ ಈಗ ಚರ್ಚಾ ವಸ್ತುವಾಗಿದೆ.

WPL ಚಾಂಪಿಯನ್‌ರಿಗೆ ಸಿಕ್ಕ ಹಣವೆಷ್ಟು?
ಪಿಎಸ್‌ಎಲ್ ಅನ್ನು ಐಪಿಎಲ್‌ನೊಂದಿಗೆ ಹೋಲಿಕೆಯನ್ನು ಆರಂಭದಿಂದಲೂ ಮಾಡಲಾಗುತ್ತದೆ. ಆದರೆ ಈ ಅಂಕಿ ಅಂಶವನ್ನು ಒಮ್ಮೆ ನೋಡಿದರೆ, ಪಿಎಸ್‌ಎಲ್, ಐಪಿಎಲ್ ಅಷ್ಟೇ ಅಲ್ಲಾ ಮಹಿಳಾ ಪ್ರೀಮಿಯರ್ ಲೀಗ್‌ಗಿಂತಲೂ ಹಿಂದಿದೆ ಎಂಬುದನ್ನು ಸಾಬೀತಾಗುತ್ತದೆ. ಪಿಎಸ್‌ಎಲ್ ಚಾಂಪಿಯನ್ ತಂಡಕ್ಕೆ ನೀಡುವ ಹಣವೂ, WPL ಫೈನಲ್‌ನಲ್ಲಿ ಆರ್‌ಸಿಬಿ ಪಡೆದ ಹಣಕ್ಕೂ ಸಾಕಷ್ಟು ವ್ಯತ್ಯಾಸ ಇರುವುದು ಕಂಡು ಬಂದಿದೆ.
ಇಸ್ಲಾಮಾಬಾದ್ ಯುನೈಟೆಡ್ ಪಿಎಸ್ಎಲ್ 2024 ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಚಾಂಪಿಯನ್ ತಂಡಕ್ಕೆ ಸುಮಾರು 4.13 ಕೋಟಿ ರೂ. ನೀಡಲಾಯಿತು. ಇದೇ ಭಾನುವಾರ WPL ಚಾಂಪಿಯನ್ ಆದ RCB ಮಹಿಳಾ ತಂಡ 6 ಕೋಟಿ ರೂ. ಪಡೆಯಿತು.
ಐಪಿಎಲ್ ವಿಜೇತರಿಗೆ ಸಿಗುವ ಹಣವೆಷ್ಟು?
ಕಳೆದ ವರ್ಷ ಐಪಿಎಲ್ 2023ರಲ್ಲಿ ಪ್ರಶಸ್ತಿ ಗೆದ್ದಿದ್ದ ಚೆನ್ನೈ ಸೂಪರ್ ಕಿಂಗ್ಸ್ 20 ಕೋಟಿ ರೂಪಾಯಿ ಬಹುಮಾನ ಪಡೆದಿತ್ತು. ಅಂದರೆ ಐಪಿಎಲ್‌ನ ಬಹುಮಾನದ ಮೊತ್ತವು ಪಿಎಸ್‌ಎಲ್‌ನ ಬಹುಮಾನದ ಮೊತ್ತಕ್ಕಿಂತ ಐದು ಪಟ್ಟು ಹೆಚ್ಚು.
ಪಿಎಸ್‌ಎಲ್ 2024 ರನ್ನರ್ ಅಪ್ ಮುಲ್ತಾನ್ ಸುಲ್ತಾನ್ಸ್‌ಗೆ ಸುಮಾರು 1.65 ಕೋಟಿ ರೂ. ನೀಡಲಾಗಿದೆ. ಐಪಿಎಲ್ 2023 ರನ್ನರ್ ಅಪ್ ಗುಜರಾತ್ ಟೈಟಾನ್ಸ್‌ಗೆ 12.5 ಕೋಟಿ ರೂ. ನೀಡಲಾಗಿದ್ದು, WPL ಫೈನಲ್‌ನಲ್ಲಿ ಸೋತ ದೆಹಲಿ ಕ್ಯಾಪಿಟಲ್ಸ್ ತಂಡಕ್ಕೆ 3 ಕೋಟಿ ರೂ. ನೀಡಲಾಗಿದೆ. ಈ ಅಂಕಿ ಅಂಶಗಳನ್ನು ನೋಡಿಯಾದರೂ ಪಾಕ್ ಇನ್ನು ಸುಮ್ಮನೆ ಕೆಣಕುವುದನ್ನು ಬಿಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications