Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಂಗ್ಲೆಂಡ್‌ ಲಯನ್ಸ್‌ ವಿರುದ್ಧ ಘರ್ಜಿಸಿದ ಆರ್‌ಸಿಬಿ ಪ್ಲೇಯರ್‌

ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ಭಾರತ 'ಎ' ಹಾಗೂ ಇಂಗ್ಲೆಂಡ್‌ ಲಯನ್ಸ್‌ ವಿರುದ್ಧದ ನಾಲ್ಕು ದಿನಗಳ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ತಂಡ ಇನ್ನಿಂಗ್ಸ್‌ ಹಿನ್ನಡೆಯ ಭೀತಿಯಲ್ಲಿದೆ. ಆದರೆ ಟೀಮ್ ಇಂಡಿಯಾ ಎ ಪರ ಆರ್‌ಸಿಬಿ ಆಟಗಾರ ಒಬ್ಬ ಅಬ್ಬರದ ಪ್ರದರ್ಶನ ನೀಡಿದ್ದಾರೆ.

ಗುರುವಾರ ಎರಡನೇ ದಿನದಾಟವನ್ನು ಮೂರು ವಿಕೆಟ್‌ಗೆ 382 ರನ್‌ಗಳಿಂದ ಮುಂದುವರಿಸಿ, 8 ವಿಕೆಟ್‌ ನಷ್ಟಕ್ಕೆ 553 ರನ್ ಸೇರಿಸಿ ಡಿಕ್ಲೇರ್ ಮಾಡಿಕೊಂಡಿತು. ಇಂಗ್ಲೆಂಡ್ ಲಯನ್ಸ್‌ ಜೋಶ್ ಬೊಹಾನನ್ 182 ಎಸೆತಗಳಲ್ಲಿ 14 ಬೌಂಡರಿ, 1 ಸಿಕ್ಸರ್ ಸಹಾಯದಿಂದ 125 ರನ್ ಬಾರಿಸಿ ಅಬ್ಬರಿಸಿದರು.

The Rcb Player Who Roared Against the England Lions

ಮಧ್ಯಮ ಕ್ರಮಾಂಕದಲ್ಲಿ ಡಾನ್ ಮೌಸ್ಲಿ ಸೊಗಸಾದ ಬ್ಯಾಟಿಂಗ್ ನಡೆಸಿದರು. ಇವರು 115 ಎಸೆತಗಳಲ್ಲಿ 6 ಬೌಂಡರಿ ಸಹಾಯದಿಂದ 68 ರನ್ ಬಾರಿಸಿ ಅಬ್ಬರಿಸಿದರು.

ಭಾರತದ ಪರ ಮಾನವ್ ಸುತಾರ್ 29 ಓವರ್‌ ಬೌಲಿಂಗ್ ನಡೆಸಿ 137 ರನ್ ನೀಡಿ 4 ವಿಕೆಟ್‌ ಪಡೆದರು. ಕರ್ನಾಟದ ವಿದ್ವತ್ ಕಾವೇರಪ್ಪ 2 ವಿಕೆಟ್ ಕಬಳಿಸಿದರು.

ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ಎ ತಂಡದ ಪರ ಯಾವೊಬ್ಬ ಬ್ಯಾಟರ್‌ ಕ್ರಿಸ್‌ನಲ್ಲಿ ನಿಂತು ಬ್ಯಾಟ್ ಮಾಡುವಲ್ಲಿ ವಿಫಲರಾದರು. ಟೀಮ್ ಇಂಡಿಯಾ ಎ ಪರ ರಜತ್‌ ಪಟೇದಾರ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು ಇಂಗ್ಲೆಂಡ್ ಲುಯನ್ಸ್‌ ತಂಡದ ಬೌಲರ್‌ಗಳನ್ನು ಕಾಡಿದರು.

The Rcb Player Who Roared Against the England Lions

ರಜತ್ ಪಟೇದಾರ 132 ಎಸೆತಗಳಲ್ಲಿ 18 ಬೌಂಡರಿ, 5 ಸಿಕ್ಸರ್ ಸಹಾಯದಿಂದ ಅಜೇಯ 140 ರನ್ ಬಾರಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಇಂಗ್ಲೆಂಡ್ ಲಯನ್ಸ್‌ ಪರ ಮ್ಯಾಥ್ಯೂ ಫಿಶರ್ ಸೊಗಸಾದ ದಾಳಿ ಸಂಘಟಿಸಿ 4 ವಿಕೆಟ್‌ ಪಡೆದರು. ಮ್ಯಾಥ್ಯೂ ಪಾಟ್ಸ್, ಕ್ಯಾಲಮ್ ಪಾರ್ಕಿನ್ಸನ್ ತಲಾ ಎರಡು ವಿಕೆಟ್‌ ಪಡೆದರು.

Story first published: Thursday, January 18, 2024, 18:31 [IST]
Other articles published on Jan 18, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+