Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2025: ಐಪಿಎಲ್‌ನಲ್ಲಿ ಈ ಐವರು ಮಾಡಿದ ದಾಖಲೆಗಳನ್ನು ಮುರಿಯುವುದಲ್ಲ, ಸರಿಗಟ್ಟುವುದು ಅಸಾಧ್ಯ!

ಐಪಿಎಲ್ 2025 ರಲ್ಲಿ, ಒಂದಕ್ಕಿಂತ ಹೆಚ್ಚು ದಾಖಲೆ ಮುರಿಯುವ ಇನ್ನಿಂಗ್ಸ್‌ಗಳನ್ನು ನೋಡಲಾಗುತ್ತಿದೆ. ಕೆಲವರು ಸಿಕ್ಸರ್‌ಗಳ ದಾಖಲೆಗಳನ್ನು ಮಾಡುತ್ತಿದ್ದರೆ, ಇನ್ನು ಕೆಲವರು ಶತಕಗಳನ್ನು ಬಾರಿಸುತ್ತಿದ್ದಾರೆ. ಆದರೆ ನಾವು ಐಪಿಎಲ್ ಇತಿಹಾಸವನ್ನು ಹಿಂತಿರುಗಿ ನೋಡಿದರೆ, ಕೆಲವು ದಾಖಲೆನ್ನು ಮುರಿಯುವುದು ಕಷ್ಟಕರವಾಗಿದೆ. ಐಪಿಎಲ್ 2025 ರಲ್ಲಿ ಈ ದಾಖಲೆಗಳನ್ನು ಮುರಿಯುವುದು ಮಾತ್ರವಲ್ಲ, ಅವುಗಳನ್ನು ಸರಿಗಟ್ಟುವುದು ಅಸಾಧ್ಯವಾಗಿದೆ. ಅಂತಹ 5 ಐಪಿಎಲ್‌ ದಾಖಲೆಗಳ ಬಗ್ಗೆ ಇಲ್ಲಿದೆ ಮಾಹಿತಿ ತಿಳಿಯಿರಿ.

ವಿರಾಟ್ ಕೊಹ್ಲಿ: ಟೀಮ್ ಇಂಡಿಯಾದ ಸ್ಟಾರ್ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಹಲವು ದೊಡ್ಡ ದಾಖಲೆಗಳನ್ನು ಹೊಂದಿದ್ದಾರೆ. ಐಪಿಎಲ್‌ ಟೂರ್ನಿಯಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ದಾಖಲೆ ಅವರ ಹೆಸರಿನಲ್ಲಿದೆ. ಇದಲ್ಲದೆ, ಕೊಹ್ಲಿ ಒಂದು ಸೀಸನ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನೂ ಹೊಂದಿದ್ದಾರೆ. 2016 ರ ಐಪಿಎಲ್‌ನಲ್ಲಿ ಅವರು 4 ಶತಕ ಮತ್ತು 7 ಅರ್ಧಶತಕಗಳೊಂದಿಗೆ 973 ರನ್ ಗಳಿಸಿದ್ದಾರೆ. ಈ ದಾಖಲೆಗಳನ್ನು ಮುರಿಯುವುದು ಸದ್ಯಕ್ಕೆ ಸರಿಗಟ್ಟುವುದು.

The records made by five players in the IPL are impossible to break

ಎಬಿ ಡಿವಿಲಿಯರ್ಸ್: ವಿರಾಟ್ ಕೊಹ್ಲಿಯ ಹೊರತಾಗಿ, ಆರ್‍‌ಸಿಬಿ ಮಾಜಿ ಸ್ಟಾರ್ ಬ್ಯಾಟರ್ ಎಬಿ ಡಿವಿಲಿಯರ್ಸ್ ಕೂಡ ಈ ಪಟ್ಟಿಯಲ್ಲಿದ್ದಾರೆ. ಐಪಿಎಲ್‌ 2016 ರಲ್ಲಿ ವಿರಾಟ್ ಕೊಹ್ಲಿ ಜೊತೆಗೂಡಿ ಡಿವಿಲಿಯರ್ಸ್ ಐಪಿಎಲ್‌ನಲ್ಲಿ ಅತಿ ದೊಡ್ಡ ಜೊತೆಯಾಟ ಆಡಿದ್ದರು. ಇಬ್ಬರು ಒಟ್ಟಾಗಿ ಶತಕಗಳನ್ನು ಬಾರಿಸಿ ಮಿಂಚಿದ್ದರು. ಕೊಹ್ಲಿ ಮತ್ತು ಡಿವಿಲಿಯರ್ಸ್ 229 ರನ್‌ಗಳ ಜೊತೆಯಾಟ ಆಡಿದ್ದರು. ಇಲ್ಲಿಯವರೆಗೆ ಈ ದಾಖಲೆಯ ಹತ್ತಿರವೂ ಯಾರೂ ಕಾಣಿಸಿಕೊಂಡಿಲ್ಲ.

ಕ್ರಿಸ್ ಗೇಲ್: ಐಪಿಎಲ್‌ನಲ್ಲಿ ಅತಿ ವೇಗದ ಶತಕ ಮತ್ತು ಅತಿ ವೇಗದ ಅರ್ಧಶತಕದ ವಿಷಯಕ್ಕೆ ಬಂದರೆ ಕ್ರಿಸ್ ಗೇಲ್ ಹೆಸರು ಮುಂಚೂಣಿಯಲ್ಲಿದೆ. ಐಪಿಎಲ್ 2013 ರಲ್ಲಿ ಕ್ರಿಸ್ ಗೇಲ್ ಕೇವಲ 30 ಎಸೆತಗಳಲ್ಲಿ ಶತಕ ಗಳಿಸಿದರು. ಈ ದಾಖಲೆ ಇಂದಿಗೂ ಯಾರಿಂದಲ್ಲೂ ಮುರಿಯಲು ಸಾಧ್ಯವಾಗಿಲ್ಲ. ಈ ಪಂದ್ಯದಲ್ಲಿ ಗೇಲ್ 175 ರನ್‌ಗಳ ದಾಖಲೆಯ ಇನ್ನಿಂಗ್ಸ್ ಆಡಿದ್ದರು.

ಯಶಸ್ವಿ ಜೈಸ್ವಾಲ್: ಟೀಮ್ ಇಂಡಿಯಾದ ಯುವ ಸ್ಟಾರ್ ಯಶಸ್ವಿ ಜೈಸ್ವಾಲ್ ಕೂಡ ಐಪಿಎಲ್ ದಾಖಲೆಗಳಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಐಪಿಎಲ್ 2023 ರಲ್ಲಿ ಕೇವಲ 13 ಎಸೆತಗಳಲ್ಲಿ ಅರ್ಧಶತಕ ಗಳಿಸುವ ಮೂಲಕ ಅವರು ದಾಖಲೆ ಸೃಷ್ಟಿಸಿದ್ದರು. ಪ್ರಸ್ತುತ ಅವರು ಐಪಿಎಲ್‌ನಲ್ಲಿ ಅತಿವೇಗದ ಅರ್ಧಶತಕ ಸಿಡಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇಲ್ಲಿವರೆಗೆ ಐಪಿಎಲ್‌ನಲ್ಲಿ ಯಾರೂ ಅವರನ್ನು ಸರಿಗಟ್ಟಲು ಸಾಧ್ಯವಾಗಿಲ್ಲ.

ಸುರೇಶ್ ರೈನಾ: ಭಾರತ ತಂಡ ಮಾಜಿ ಸ್ಟಾರ್ ಆಲ್‌ರೌಂಡರ್ ಸುರೇಶ್ ರೈನಾ ಕೂಡ ಪಟ್ಟಿಯಲ್ಲಿದ್ದಾರೆ. ಪವರ್ ಪ್ಲೇನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಅವರ ಹೆಸರಿನಲ್ಲಿದೆ. ಐಪಿಎಲ್ 2014 ರಲ್ಲಿ ಪಂಜಾಬ್ ವಿರುದ್ಧದ ಪವರ್‌ ಪ್ಲೇನಲ್ಲಿ ರೈನಾ 87 ರನ್ ಗಳಿಸಿದ್ದರು. ಅವರ ದಾಖಲೆಯನ್ನು ಇದುವರೆಗೆ ಯಾರೂ ಸರಿಗಟ್ಟಲು ಸಾಧ್ಯವಾಗಿಲ್ಲ.

Story first published: Monday, March 31, 2025, 18:25 [IST]
Other articles published on Mar 31, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+