ಈ ಬಾರಿಯ ಐಪಿಎಲ್ ಮುಂದುವರಿಯುವುದು ಅನುಮಾನ; ಪ್ರಮುಖ ಕಾರಣ ಬಿಚ್ಚಿಟ್ಟ ವೃದ್ಧಿಮಾನ್ ಸಾಹ

ಏಪ್ರಿಲ್ 9ರಂದು ಆರಂಭವಾಗಿದ್ದ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಯಾವುದೇ ಅಡಚಣೆಗಳಿಲ್ಲದೆ 29 ಪಂದ್ಯಗಳನ್ನು ಯಶಸ್ವಿಯಾಗಿ ಪೂರೈಸಿತು. ಆದರೆ ಐಪಿಎಲ್ ಬಯೋಬಬಲ್ ಒಳಗಡೆ ಕೊರೊನಾ ಪ್ರವೇಶಿಸಿ ವಿವಿಧ ತಂಡಗಳ ಕೆಲ ಆಟಗಾರರು ಮತ್ತು ತರಬೇತುದಾರರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಪ್ರಸ್ತುತ ಐಪಿಎಲ್ ಟೂರ್ನಿಯನ್ನು ಮುಂದೂಡಲಾಯಿತು.
ಸದ್ಯ ಸೆಪ್ಟೆಂಬರ್ ತಿಂಗಳಿನಲ್ಲಿ ಈ ಬಾರಿಯ ಐಪಿಎಲ್ ಟೂರ್ನಿಯನ್ನು ಮುಂದುವರಿಸುವ ಚಿಂತನೆಯನ್ನು ಬಿಸಿಸಿಐ ನಡೆಸುತ್ತಿದೆ. ಇಂಗ್ಲೆಂಡ್ ಅಥವಾ ಯುಎಇಯಲ್ಲಿ ಈ ಬಾರಿಯ ಐಪಿಎಲ್‌ನ ಉಳಿದಿರುವ 31 ಪಂದ್ಯಗಳನ್ನು ನಡೆಸಲಾಗುವುದು ಎಂಬ ಸುದ್ದಿಗಳು ಹೆಚ್ಚಾಗಿ ಹರಿದಾಡುತ್ತಿವೆ. ಆದರೆ ಈ ನಡುವೆ ವಿವಿಧ ದೇಶಗಳು ಅಂತಾರಾಷ್ಟ್ರೀಯ ಸರಣಿಗಳನ್ನು ಘೋಷಣೆ ಮಾಡುತ್ತಿದ್ದು ವಿದೇಶಿ ಆಟಗಾರರು ಐಪಿಎಲ್ ಆಡುವುದೇ ಅನುಮಾನವಾಗಿಬಿಟ್ಟಿದೆ. ಹೌದು ಇತ್ತೀಚೆಗೆ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡದ ಆಟಗಾರರು ಐಪಿಎಲ್ ಮುಂದುವರೆದರೂ ಸಹ ಆಡುವುದು ಬಹುತೇಕ ಅಸಾಧ್ಯ ಎಂಬ ಸುದ್ದಿ ಹರಿದಾಡಿತ್ತು. ಇದೀಗ ಅದಕ್ಕೆ ಪುಷ್ಟಿ ನೀಡುವಂತಹ ಹೇಳಿಕೆಯನ್ನು ವೃದ್ಧಿಮಾನ್ ಸಾಹ ನೀಡಿದ್ದಾರೆ.
ಪ್ರಸ್ತುತ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಆಟಗಾರನಾಗಿರುವ ವೃದ್ಧಿಮಾನ್ ಸಾಹ ಕೂಡ ಕೊರೊನಾಸೋಂಕಿಗೆ ಒಳಗಾಗಿದ್ದರು. ಇತ್ತೀಚೆಗಷ್ಟೇ ಮಾತನಾಡಿರುವ ಸಾಹ 'ಐಪಿಎಲ್ ಆಡುವ ಬಹುತೇಕ ವಿದೇಶಿ ಆಟಗಾರರು ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ತಂಡಗಳ ಆಟಗಾರರಾಗಿದ್ದಾರೆ. ಈ ಆಟಗಾರರು ತಮ್ಮ ಅಂತಾರಾಷ್ಟ್ರೀಯ ತಂಡಗಳ ಪರ ಸರಣಿಗಳಲ್ಲಿ ಭಾಗವಹಿಸುವುದರಿಂದ ಮುಂದುವರಿಯಲಿರುವ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸುವುದು ಕಷ್ಟ, ಹೀಗಾಗಿ ಪ್ರಸ್ತುತ ಐಪಿಎಲ್ ಟೂರ್ನಿ ನಡೆಯುವುದು ಅನುಮಾನ ಎನಿಸುತ್ತಿದೆ. ವಿದೇಶಿ ಆಟಗಾರರಿಲ್ಲದ ಐಪಿಎಲ್ ಟೂರ್ನಿ ವೃದ್ಧಿಸಲ್ಪಟ್ಟ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಇದ್ದಂತೆ' ಎಂದು ಹೇಳಿಕೆ ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications