For Quick Alerts
ALLOW NOTIFICATIONS  
For Daily Alerts
 

SRH ತಂಡದ ಚಿಂತೆ ಹೆಚ್ಚಿಸಿದ RCB ಮಾಜಿ ಸ್ಪಿನ್ ಬೌಲರ್‌; ತಂಡ ಸೇರುವುದು ಯಾವಾಗ?

ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಸದ್ಯ ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದೆ. ತಾನಾಡಿದ ಎರಡು ಪಂದ್ಯಗಳಲ್ಲಿ ಒಂದನ್ನು ಸೋತು, ಒಂದರಲ್ಲಿ ಇತಿಹಾಸ ಸೃಷ್ಟಿಸಿರುವ ಎಸ್‌ಆರ್‌ಎಚ್‌ ತಂಡಕ್ಕೆ ಕೆಟ್ಟ ಸುದ್ದಿಯಂದು ದೂರದ ದೇಶದಿಂದ ಬಂದಿದೆ. ಈ ಸುದ್ದಿ ನಿಜಕ್ಕೂ ಸನ್‌ ತಂಡದ ಮುಖದಲ್ಲಿ ಚಿಂತೆಯ ಗೆರೆಗಳು ಮೂಡುವಂತೆ ಮಾಡುತ್ತವೆ.

ಶ್ರೀಲಂಕಾದ ಸ್ಟಾರ್ ಸ್ಪಿನ್‌ ಬೌಲರ್‌ ವನಿಂದು ಹಸರಂಗ್ ಅವರನ್ನು ಎಸ್ಆರ್‌ಎಚ್‌ ತಂಡ ಹರಾಜಿನಲ್ಲಿ ತಂಡಕ್ಕೆ ಸೇರಿಸಿಕೊಂಡಿತ್ತು. ಆದರೆ ಈ ಪ್ಲೇಯರ್‌ ಆರಂಭಿಕ ಪಂದ್ಯಗಳಲ್ಲಿ ತಂಡದ ಭಾಗವಾಗಿರಲಿಲ್ಲ. ಲಂಕಾ ಹಾಗೂ ಬಾಂಗ್ಲಾದೇಶ ನಡುವಣ ಟೆಸ್ಟ್‌ ಪಂದ್ಯದಲ್ಲಿ ಇವರು ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದರು. ಆದರೆ ಈಗ ಇವರು ಎಸ್‌ಆರ್‌ಎಚ್‌ ತಂಡಕ್ಕೆ ಸೇರಿಕೊಳ್ಳುವುದು ಯಾವಗ ಎಂಬ ಬಗ್ಗೆ ಅನುಮಾನಗಳು ಆರಂಭವಾಗಿವೆ.

The spin bowler who increased the worries of the SRH team When to join the team

ಆಗಿದ್ದು ಏನು?

ಹಸರಂಗ ಅವರು ಪ್ರಸ್ತುತ ಪಾದದ ಗಾಯದಿಂದ ಬಳಲುತ್ತಿದ್ದು, ಈ ಕಾರಣದಿಂದಾಗಿ ಅವರು ಹೈದರಾಬಾದ್ ತಂಡವನ್ನು ಸೇರಲು ಸಾಧ್ಯವಾಗಲಿಲ್ಲ ಮತ್ತು ಅವರು ಇಡೀ ಪಂದ್ಯಾವಳಿಯಿಂದ ಹೊರಗುಳಿಯುವ ಸಾಧ್ಯತೆಯಿದೆ.

ವನಿಂದು ಹಸರಂಗ ಅವರ ವ್ಯವಸ್ಥಾಪಕರು ಕ್ರಿಕ್‌ಬಜ್‌ಗೆ ಹೇಳಿಕೆಯನ್ನು ನೀಡಿದ್ದಾರೆ. ಹಸರಾಂಗ ಗಾಯದ ಸಮಸ್ಯೆಯಿಂದ ದುಬೈಗೆ ತಪಾಸಣೆಗೆ ಹೊಗುವುದಾಗಿ ತಿಳಿಸಿದ್ದಾರೆ. ಇವರು ಟೆಸ್ಟ್‌ ತಂಡದ ಭಾಗವಾಗಿದ್ದು, ಸರಣಿ ಮುಗಿದ ಬಳಿಕವೇ ಐಪಿಎಲ್‌ನಲ್ಲಿ ಆಡಬಹುದು. ಆದರೆ ತಡವಾಗಿಯಾದರೂ ಸನ್‌ರೈಸರ್ಸ್ ಹೈದರಾಬಾದ್ ತಂಡದ ಭಾಗವಾಗುವುದು ಖಚಿತ ಎಂದು ಹಸರಂಗದ ಮ್ಯಾನೇಜರ್ ತಮ್ಮ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

The spin bowler who increased the worries of the SRH team When to join the team

ಹಸರಂಗಾ ಅವರನ್ನು ಎಸ್‌ಆರ್‌ಎಚ್‌ ಹರಾಜಿನಲ್ಲಿ 1 ಕೋಟಿ 50 ಲಕ್ಷ ರೂ ನೀಡಿ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಸ್ಥಾನ ನೀಡಿತ್ತು. ಆದರೆ ಹಿಂದಿನ ಎರಡು ಋತುಗಳಲ್ಲಿ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದರು. ಅವರು ಶೀಘ್ರದಲ್ಲೇ ತಂಡ ಸೇರಲಿದ್ದಾರೆ ಮತ್ತು ಅವರು ಖಂಡಿತವಾಗಿಯೂ ಐಪಿಎಲ್ ನಲ್ಲಿ ಆಡಲಿದ್ದಾರೆ ಎಂದು ತಿಳಿಸಿದ್ದಾರೆ.

ಸನ್ ರೈಸರ್ಸ್ ಹೈದರಾಬಾದ್ ಈ ಋತುವಿನಲ್ಲಿ ಇದುವರೆಗೆ 2 ಪಂದ್ಯಗಳನ್ನು ಆಡಿದ್ದು, ಸ್ಥಿರ ಪ್ರದರ್ಶನ ನೀಡುತ್ತಿದೆ. ಮುಂಬೈ ವಿರುದ್ಧದ ಪಂದ್ಯದಲ್ಲಿ, ತಂಡದಿಂದ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಕಂಡುಬಂದಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಹೈದರಾಬಾದ್ 20 ಓವರ್‌ಗಳಲ್ಲಿ 277 ರನ್ ಗಳಿಸಿತ್ತು. ಇದು ಐಪಿಎಲ್‌ ಇತಿಹಾಸದಲ್ಲಿ ದಾಖಲಾದ ಅಧಿಕ ರನ್‌. ಎಸ್‌ಆರ್‌ಎಚ್‌ ತಂಡ ಮುಂದಿನ ಪಂದ್ಯವನ್ನು ಮಾರ್ಚ್ 31 ರಂದು ಗುಜರಾತ್ ಟೈಟಾನ್ಸ್ ವಿರುದ್ಧ ತನ್ನ ಮೂರನೇ ಪಂದ್ಯವನ್ನು ಆಡಬೇಕಾಗಿದೆ.

Story first published: Saturday, March 30, 2024, 14:31 [IST]
Other articles published on Mar 30, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+