ಧರ್ಮಶಾಲಾ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಪಂದ್ಯ ಟೀಮ್ ಇಂಡಿಯಾದ ಆರ್.ಅಶ್ವಿನ್ ಹಾಗೂ ಇಂಗ್ಲೆಂಡ್ ತಂಡದ ಜಾನಿ ಬೇರ್ ಸ್ಟೋ ಅವರಿಗೆ ಮಹತ್ವದಾಗಿದೆ. ಈ ಪಂದ್ಯ ಉಭಯ ಆಟಗಾರರಿಗೆ 100ನೇ ಟೆಸ್ಟ್ ಪಂದ್ಯವಾಗಿದೆ.
ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯ 5ನೇ ಟೆಸ್ಟ್ ಪಂದ್ಯದಲ್ಲಿ ಇಬ್ಬರೂ ಕ್ರಿಕೆಟಿಗರು ಈ ಸಾಧನೆ ಮಾಡಬಹುದಾಗಿದೆ. ಅದರಲ್ಲೂ ಸುಮಾರು 150 ದಿನಗಳ ಹಿಂದೆ ಧರ್ಮಶಾಲಾ ಮೈದಾನದಲ್ಲಿ ತಮ್ಮ ಏಕದಿನ ವೃತ್ತಿಜೀವನದ ಮಹತ್ವದ ಸಾಧನೆಯನ್ನು ಸಹ ಇಂಗ್ಲೆಂಡ್ ಕ್ರಿಕೆಟಿಗ ಜಾನಿ ಬೈರ್‌ಸ್ಟೋವ್ ಮಾಡಿದ್ದರು.

34 ವರ್ಷದ ಜಾನಿ ಬೈರ್‌ಸ್ಟೋವ್ ವಿಕೆಟ್‌ಕೀಪರ್ ಆಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ತಮ್ಮ ಧಮಾಕೆದಾರ್ ಬ್ಯಾಟಿಂಗ್ ಪ್ರದರ್ಶನದ ಬಲದಿಂದ ಜಾನಿ ಬ್ಯಾಟ್ಸ್‌ಮನ್ ಆಗಿ ಸ್ಥಾನ ಪಡೆದರು. ಇದುವರೆಗೆ ಅವರು 99 ಟೆಸ್ಟ್ ಪಂದ್ಯಗಳಲ್ಲಿ 36.42 ಸರಾಸರಿಯಲ್ಲಿ 5974 ರನ್ ಗಳಿಸಿದ್ದಾರೆ. ಉತ್ತಮ ಪ್ರದರ್ಶನ ನೀಡಿದರೆ ಧರ್ಮಶಾಲಾದಲ್ಲಿ 6000 ರನ್ ಪೂರೈಸ ಬಹುದಾಗಿದೆ.
ಜಾನಿ ಬೈರ್‌ಸ್ಟೋವ್ ಕಳೆದ ವರ್ಷ ಅಕ್ಟೋಬರ್ 10 ರಂದು ಬಾಂಗ್ಲಾದೇಶ ವಿರುದ್ಧ ತಮ್ಮ 100ನೇ ODI ಪಂದ್ಯವನ್ನು ಇದೇ ಅಂಗಳದಲ್ಲಿ ಆಡಿದ್ದರು. ಈ ಪಂದ್ಯದಲ್ಲಿ ಅವರು 59 ಎಸೆತಗಳಲ್ಲಿ 52 ರನ್‌ಗಳ ಪ್ರಬಲ ಇನ್ನಿಂಗ್ಸ್ ಆಡಿದ್ದರು. 2023ರ ವಿಶ್ವಕಪ್‌ನ ಈ ಪಂದ್ಯವನ್ನು ಇಂಗ್ಲೆಂಡ್ 137 ರನ್‌ಗಳಿಂದ ಗೆದ್ದುಕೊಂಡಿತು.

ಜಾನಿ ಬೈರ್‌ಸ್ಟೋವ್ ತನ್ನ 100ನೇ ಟೆಸ್ಟ್ ಪಂದ್ಯವು ತನ್ನ 100ನೇ ODIನಂತೆಯೇ ಉತ್ತಮ ಮತ್ತು ಸ್ಮರಣೀಯವಾಗಿಸಲು ಬಯಸುವುದಾಗಿ ತಿಳಿಸಿದ್ದಾರೆ. ಈ ಬಾರಿ ಅವರಿಗೆ ದೊಡ್ಡ ಸವಾಲು ಎದುರಾಗಿದೆ. ಭಾರತ-ಇಂಗ್ಲೆಂಡ್ ಸರಣಿಯ ಮೊದಲ 4 ಪಂದ್ಯಗಳಲ್ಲಿ ಜಾನಿ ಬೈರ್‌ಸ್ಟೋವ್‌ಗೆ ಒಂದೇ ಒಂದು ಅರ್ಧಶತಕವನ್ನು ಗಳಿಸಲು ಸಾಧ್ಯವಾಗಲಿಲ್ಲ. ಈ ಕಾರಣಕ್ಕಾಗಿ, ತಂಡದ ಮ್ಯಾನೇಜ್‌ಮೆಂಟ್ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವರ ಬದಲಿಗೆ ಇತರ ಆಟಗಾರರಿಗೆ ಅವಕಾಶ ನೀಡಬಹುದು ಎಂಬ ಭಯ ಜಾನಿ ಬೈರ್‌ಸ್ಟೋವ್ ಅವರಿಗೆ ಕಾಡುತ್ತಿದೆ.