For Quick Alerts
ALLOW NOTIFICATIONS  
For Daily Alerts
 

ಕೊಹ್ಲಿಗೆ ಈ ವರ್ಷ ಬೆಸ್ಟ್‌, ರೆಕಾರ್ಡ್‌ ಬುಕ್‌ನಲ್ಲಿ ರಾರಾಜಿಸುತ್ತಿದ್ದಾರೆ ವಿರಾಟ್‌

ಬಹು ವರ್ಷಗಳ ಬಳಿಕ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಭರ್ಜರಿ ಫಾರ್ಮ್‌ ಹೊಂದಿದ್ದಾರೆ. ಅಲ್ಲದೆ ಈ ವರ್ಷ ತಮ್ಮ ಧಮಾಕೆದಾರ್ ಪ್ರದರ್ಶನದ ಬಲದಿಂದ ವಿಶ್ವ ಕ್ರಿಕೆಟ್‌ನಲ್ಲಿ ರಾಜನಂತೆ ಮೆರೆದಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿ ಅವರಿಗೆ ಈ ವರ್ಷ ಸ್ಮರಣೀಯವಾಗಿದೆ.

2023 ರಲ್ಲಿ, ವಿರಾಟ್ ಕೆಲವು ದಾಖಲೆಗಳನ್ನು ರಚಿಸಿದ್ದಾರೆ. ವಿರಾಟ್ ಬರೆದಿರುವ ದಾಖಲೆ ಬೇರೆ ಬ್ಯಾಟರ್‌ಗಳಿಗೆ ಮುರಿಯುವುದು ಕಬ್ಬಿಣದ ಕಡಲೇ ಅಂತೆ ಪರಿಣಮಿಸುತ್ತದೆ. ವಿರಾಟ್ ಕೊಹ್ಲಿ ಈ ವರ್ಷ ಏಕದಿನ ಕ್ರಿಕೆಟ್‌ನಲ್ಲಿ 50ನೇ ಶತಕ ದಾಖಲಿಸಿದರು. ಇಲ್ಲಿಯವರೆಗೂ ಈ ಮಾದರಿಯಲ್ಲಿ ಶತಕಗಳ ಈ ಸಂಖ್ಯೆಯನ್ನು ತಲುಪಲು ಯಾವುದೇ ಆಟಗಾರನಿಗೆ ಸಾಧ್ಯವಾಗಿಲ್ಲ.

The year 2023 was very special for Virat Kohli

ದೀರ್ಘಕಾಲದವರೆಗೆ ಸಚಿನ್ ತೆಂಡೂಲ್ಕರ್ ಏಕದಿನದಲ್ಲಿ ಅತಿ ಹೆಚ್ಚು ಶತಕ (49) ಗಳಿಸಿದ ಆಟಗಾರನಾಗಿದ್ದರು, ಆದರೆ ಈ ಬಾರಿ ವಿರಾಟ್ ತಮ್ಮ ಗುರುವಿನ ದಾಖಲೆಯನ್ನು ಮುರಿದರು. ವಿರಾಟ್ ಕೊಹ್ಲಿ ಈ ವರ್ಷದ ವಿಶ್ವಕಪ್‌ನ 11 ಪಂದ್ಯಗಳಲ್ಲಿ 95.62 ಸರಾಸರಿಯಲ್ಲಿ 765 ರನ್ ಗಳಿಸಿದ್ದಾರೆ. ಇಲ್ಲಿಯವರೆಗೆ ನಡೆದ ಎಲ್ಲಾ ವಿಶ್ವಕಪ್‌ಗಳಲ್ಲಿ ಯಾವುದೇ ಬ್ಯಾಟ್ಸ್‌ಮನ್ 700ರ ಗಡಿ ದಾಟಿರಲಿಲ್ಲ. ವಿರಾಟ್ ಈ ವಿಷಯದಲ್ಲಿ ಇಂತಹದೊಂದು ದಾಖಲೆಯನ್ನು ಸೃಷ್ಟಿಸಿದ್ದು, ಇದು ಇತರ ಬ್ಯಾಟ್ಸ್‌ಮನ್‌ಗಳಿಗೆ ನಿಲುಕದಂತಿದೆ.

ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್-5 ಪಟ್ಟಿಯಿಂದ ಹೊರಗುಳಿದಿದ್ದರು. ಆದರೆ ಈ ವರ್ಷ ಅವರು ಬ್ಯಾಟ್ ಅಬ್ಬರಿಸಿದ್ದರಿಂದ, ಈ ಪಟ್ಟಿಯಲ್ಲೂ ಸ್ಥಾನ ಲಭಿಸಿದೆ. ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ವಿರಾಟ್‌ಗೆ ಮೂರನೇ ಸ್ಥಾನ.. ಈ ಪಟ್ಟಿಯಲ್ಲಿ ಅವರು ಅನುಭವಿಗಳಾದ ರಿಕಿ ಪಾಂಟಿಂಗ್, ಸನತ್ ಜಯಸೂರ್ಯ ಮತ್ತು ಮಹೇಲಾ ಜಯವರ್ಧನೆ ಅವರನ್ನು ಬಿಟ್ಟಿದ್ದಾರೆ.

ವಿರಾಟ್ ಕೊಹ್ಲಿ ಈ ವರ್ಷ 27 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅವರು 72.47 ರ ಪ್ರಬಲ ಬ್ಯಾಟಿಂಗ್ ಸರಾಸರಿ ಮತ್ತು 99 ರ ಸ್ಟ್ರೈಕ್ ರೇಟ್‌ನೊಂದಿಗೆ 1377 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು 6 ಶತಕಗಳನ್ನು ಸಿಡಿಸಿದ್ದಾರೆ. ಈ ವರ್ಷ ಅವರು ತಮ್ಮ ವೃತ್ತಿಜೀವನದ ಗರಿಷ್ಠ ಸ್ಕೋರ್ ಗಳಿಸಿದ ಹಿಂದಿನ ದಾಖಲೆಯನ್ನು ಮುರಿದರು. ವಿರಾಟ್ ಈ ವರ್ಷ 166 ರನ್‌ಗಳ ಅಜೇಯ ಇನ್ನಿಂಗ್ಸ್ ಕಟ್ಟಿದ್ದರು. ಇದಕ್ಕೂ ಮುನ್ನ ಅವರ ಗರಿಷ್ಠ ಸ್ಕೋರ್ 160 ರನ್ ಆಗಿತ್ತು.

The year 2023 was very special for Virat Kohli

ಟೆಸ್ಟ್‌ನಲ್ಲಿಯೂ ವಿರಾಟ್ ಬೆಸ್ಟ್‌

ಟೆಸ್ಟ್ ಕ್ರಿಕೆಟ್‌ನಲ್ಲಿಯೂ ವಿರಾಟ್ ಸಾಕಷ್ಟು ಬ್ಯಾಟ್ ಬೀಸಿದ್ದರು. ಅವರು ಈ ವರ್ಷ 7 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ ಮತ್ತು 55.70 ರ ಬ್ಯಾಟಿಂಗ್ ಸರಾಸರಿಯಲ್ಲಿ 557 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು ಎರಡು ಶತಕಗಳನ್ನೂ ಬಾರಿಸಿದ್ದಾರೆ. ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 8676 ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ ಈ ವರ್ಷ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಒಮ್ಮೆಯೂ ಕಾಣಿಸಿಕೊಂಡಿಲಿಲ್ಲ. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ನಂತರ ವಿರಾಟ್, ಒಂದೇ ಒಂದು ಅಂತಾರಾಷ್ಟ್ರೀಯ ಟಿ20 ಪಂದ್ಯ ಆಡಿಲ್ಲ.

Story first published: Tuesday, December 12, 2023, 13:40 [IST]
Other articles published on Dec 12, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+