'ಮೂರ್ಖರಿಗೆ ತಲೆಕೆಡಿಸಿಕೊಳ್ಳಬೇಡಿ'; ಭಾರತದ ವಿರುದ್ಧ ಸರಣಿ ಸೋತ ನಂತರ ಕಿಡಿಕಾರಿದ ಶ್ರೀಲಂಕಾ ಕೋಚ್!

ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ತಂಡ ಸೋತ ಬಳಿಕ ತಂಡದ ಕೋಚ್ ಮಿಕ್ಕಿ ಆರ್ಥರ್ ಮತ್ತು ಶ್ರೀಲಂಕಾ ತಂಡದ ನಾಯಕ ದಸುನ್ ಶನಕ ಇಬ್ಬರೂ ಸಹ ಮೈದಾನದಲ್ಲಿ ಕಿತ್ತಾಡಿಕೊಂಡಿದ್ದನ್ನು ನೀವೆಲ್ಲ ಗಮನಿಸಿರುತ್ತೀರಿ.
ಹೀಗೆ ಪಂದ್ಯ ಸೋತ ಬಳಿಕ ತಂಡದ ಮಿಕ್ಕಿ ಆರ್ಥರ್ ತನ್ನ ತಂಡದ ನಾಯಕ ದಸುನ್ ಶನಕಾ ಜೊತೆ ನಡೆದುಕೊಂಡ ರೀತಿಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗಿತ್ತು. ಇದಾದ ಬೆನ್ನಲ್ಲೇ ಮೂರನೇ ಏಕದಿನ ಪಂದ್ಯದಲ್ಲಿಯೂ ಶ್ರೀಲಂಕಾ ಆಟಗಾರರು ಡಿ ಆರ್ ಎಸ್ ನಿಯಮವನ್ನು ಸರಿಯಾಗಿ ಬಳಸದೆ ಇದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿತ್ತು.
ಹೀಗೆ ಮೂರನೇ ಪಂದ್ಯ ಮುಗಿದ ಬಳಿಕ ಶ್ರೀಲಂಕಾ ತಂಡದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ರೋಲ್ ಮತ್ತು ಟೀಕೆಗಳು ವ್ಯಕ್ತವಾಗತೊಡಗಿದವು. ಈ ಕುರಿತು ಮಾತನಾಡಿದ ಶ್ರೀಲಂಕಾ ತಂಡದ ಕೋಚ್ ಮಿಕ್ಕಿ ಆರ್ಥರ್ 'ಸಾಮಾಜಿಕ ಜಾಲತಾಣದಲ್ಲಿ ಎಲ್ಲವನ್ನೂ ಬಲ್ಲೆ ಎಂಬ ಮೂರ್ಖರು ಇರುತ್ತಾರೆ, ಅಂಥವರ ಮಾತಿಗೆ ತಲೆ ಕೆಡಿಸಿಕೊಳ್ಳಬೇಡಿ' ಎಂದು ಶ್ರೀಲಂಕಾ ಆಟಗಾರರಿಗೆ ಹೇಳಿದ್ದಾರೆ.

ಲಂಕಾ ಆಟಗಾರರಿಗೆ ಆರ್ಥರ್ ಸಲಹೆ
ಸಾಮಾಜಿಕ ಜಾಲತಾಣದಲ್ಲಿ ಕೆಲ ಮೂರ್ಖರು ಏನೂ ತಿಳಿಯದಿದ್ದರೂ ತಿಳಿದವರ ರೀತಿ ಕಾಲೆಳೆಯುತ್ತಿರುತ್ತಾರೆ, ಅಂತಹ ಮೂರ್ಖರ ಮಾತುಗಳಿಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಲಂಕಾ ಆಟಗಾರರಿಗೆ ಮಿಕಿ ಆರ್ಥರ್ ಸಲಹೆ ನೀಡಿದ್ದಾರೆ. ಆದಷ್ಟು ಸಾಮಾಜಿಕ ಜಾಲತಾಣಗಳಿಂದ ದೂರವಿರಿ ಎಂದು ಲಂಕಾ ಆಟಗಾರರಿಗೆ ಮಿಕಿ ಆರ್ಥರ್ ಹೇಳಿದ್ದಾರೆ.

ಭಾರತ ವಿರುದ್ಧದ ಸೋಲು ಕಂಗೆಡಿಸಿರುವುದಂತೂ ನಿಜ
ಲಂಕಾ ತಂಡ ಟೀಮ್ ಇಂಡಿಯಾ ವಿರುದ್ಧ ಸೋಲನ್ನು ಅನುಭವಿಸಿರುವುದು ಕೋಚ್ ಮಿಕಿ ಅರ್ಥರ್ ಅವರನ್ನು ಕಂಗೆಡಿಸಿರುವುದಂತೂ ನಿಜ. ಎರಡನೇ ಪಂದ್ಯದ ಸಮಯದಲ್ಲಿ ಲಂಕಾ ತಂಡದ ನಾಯಕ ದಸುನ್ ಶನಕ ಜೊತೆ ಕೋಚ್ ಮಿಕ್ಕಿ ಆರ್ಥರ್ ನಡೆದುಕೊಂಡ ರೀತಿಯೇ ಅವರು ಯಾವ ಮಟ್ಟಿಗೆ ಕಂಗೆಟ್ಟಿದ್ದಾರೆ ಎಂಬುದನ್ನು ತೋರಿಸುತ್ತದೆ.

ಟಿ ಟ್ವೆಂಟಿ ಮೂಲಕ ಸೇಡು ತೀರಿಸಿಕೊಳ್ಳುವತ್ತ ಲಂಕಾ ಚಿತ್ತ
ಭಾರತದ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯನ್ನು ಶ್ರೀಲಂಕಾ ಸೋತ ಬಳಿಕ ಮುಂಬರುವ ಟಿ ಟ್ವೆಂಟಿ ಸರಣಿಯತ್ತ ಗಮನ ಹರಿಸಿದೆ. ಏಕದಿನ ಸರಣಿಯಲ್ಲಿ ಸೋತ ನೋವನ್ನು ಟಿ ಟ್ವೆಂಟಿ ಸರಣಿಯನ್ನು ಕೈವಶ ಮಾಡಿಕೊಳ್ಳುವ ಮೂಲಕ ನೀಗಿಸಲು ಶ್ರೀಲಂಕಾ ತಂಡ ಹಾತೊರೆಯುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications