ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಕುಟುಂಬದ ವಾತಾವರಣವಿದೆ: ಕ್ರಿಸ್ ವೋಕ್ಸ್

ಡೆಲ್ಲಿ ಕ್ಯಾಪಿಟಲ್ಸ್ ತಂಡದ ವೇಗಿ ಇಂಗ್ಲೆಂಡ್‌ನ ಕ್ರಿಸ್ ವೋಕ್ಸ್ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಡೆಲ್ಲಿ ಪರವಾಗಿ ಪದಾರ್ಪಣೆ ಮಾಡಿದರು. ಈ ಪಂದ್ಯದ ಬಳಿಕ ಮಾತನಾಡಿದ ಕ್ರಿಸ್ ವೋಕ್ಸ್ ತಂಡದ ಒಳಗಿನ ಸಕಾರಾತ್ಮಕ ವಾತಾವರಣಕ್ಕೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ಕ್ರಿಸ್ ವೋಕ್ಸ್ 2020ರ ಐಪಿಎಲ್‌ಗೆ ನಡೆದ ಹರಾಜಿನಲ್ಲಿ ಡೆಲ್ಲಿ ತಂಡಕ್ಕೆ ಮಾರಾಟವಾಗಿದ್ದರು. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ಅನ್ನು ದೃಷ್ಟಿಯಲ್ಲಿಟ್ಟುಕೊಂಡು ಕಳೆದ ಬಾರಿಯ ಐಪಿಎಲ್‌ನಿಂದಇಂಗ್ಲೆಂಡ್ ವೇಗಿ ಹಿಂದಕ್ಕೆ ಸರಿದಿದ್ದರು. ಬಳಿಕ ಈ ಬಾರಿಯ ಆವೃತ್ತಿಗೆ ಇಂಗ್ಲೆಂಡ್ ವೇಗಿಯ ಮೇಲೆ ಭರವಸೆಯಿಟ್ಟು ಡೆಲ್ಲಿ ಫ್ರಾಂಚೈಸಿ ರೀಟೈನ್ ಮಾಡಿಕೊಂಡಿತ್ತು.
"ಹೊಸ ತಂಡದ ಪರವಾಗಿ ಆಡಲು ನಾನು ಯಾವಾಗಲೂ ಸಂತಸಪಡುತ್ತೇನೆ. ಖಂಡಿತಾ ನಾನು ಕೆಲ ಐಪಿಎಲ್ ತಂಡಗಳ ಪರವಾಗಿ ಆಡಿದ ಅನುಭವ ಹೊಂದಿದ್ದೇನೆ. ಆದರೆ ಈ ತಂಡದಲ್ಲಿ ನಿಜಕ್ಕೂ ಉತ್ತಮ ವಾತಾವರಣವನ್ನು ಕಾಣುತ್ತಿದ್ದೇನೆ. ಈ ತಂಡದಲ್ಲಿ ಕುಟುಂಬದ ವಾತಾವರಣವಿದೆ" ಎಂದು ಕ್ರಿಸ್ ವೋಕ್ಸ್ ಹೇಳಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಿದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸರ್ವಾಂಗೀಣ ಪ್ರದರ್ಶನ ನೀಡಿ 7 ವಿಕೆಟ್‌ಗಳ ಗೆಲುವು ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ವೋಕ್ಸ್ ಆರಂಭಿಕ ಪಂದ್ಯದಲ್ಲಿ ಗೆಲುವು ಸಾಧಿಸಿರುವುದು ನಿಜಕ್ಕೂ ತಂಡದ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಮತ್ತೊಂದು ಗೆಲುವು ಸಾಧಿಸಲು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications