For Quick Alerts
ALLOW NOTIFICATIONS  
For Daily Alerts
 

ವಿರಾಟ್‌ ಕೊಹ್ಲಿ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಬ್ರಿಯಾನ್‌ ಲಾರಾ!

There is a huge gap between Virat Kohli and rest of the world: Brian Lara

ಮುಂಬೈ, ಜುಲೈ 04: ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಅವರನ್ನು ರನ್‌ ಮಷೀನ್‌ಗೆ ಹೋಲಿಸಿರುವ ವೆಸ್ಟ್‌ ಇಂಡೀಸ್‌ ತಂಡದ ಮಾಜಿ ನಾಯಕ ಬ್ರಿಯಾನ್‌ ಲಾರ, ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ವಿಶ್ವದ ಎಲ್ಲಾ ಆಟಗಾರರಿಗಿಂತಲೂ ವಿರಾಟ್‌ ಬಹಳಷ್ಟು ಮುಂಚೂಣಿಯಲ್ಲಿದ್ದಾರೆ ಎಂದು ಗುಣಗಾನ ಮಾಡಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಭಾರತದ ಬ್ಯಾಟಿಂಗ್‌ ದಂತಕತೆ ಸಚಿನ್‌ ತೆಂಡೂಲ್ಕರ್‌ ಸಾರ್ವಕಾಲಿಕ ಅಚ್ಚುಮೆಚ್ಚಿನ ಆಟಗಾರ ಎಂದು ಹೇಳಿರುವ ಲಾರಾ, ಸದಯಕ್ಕೆ ಕೊಹ್ಲಿ ಅವರದ್ದೇ ಜಮಾನ, ಅವರೇ ಸರ್ವ ಶ್ರೇಷ್ಠ ಆಟಗಾರ ಎಂದು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

"ವಿರಾಟ್‌ ರನ್‌ ಮಷೀನ್‌. ಆದರೆ, ಕ್ಷಮೆಯಿರಲಿ. ಏಕೆಂದರೆ ನನ್ನ ಪಾಲಿಗೆ ಸಚಿನ್‌ ತೆಂಡೂಲ್ಕರ್‌ ಸಾರ್ವಕಾಲಿಕ ಶ್ರೇಷ್ಠ ಆಟಗಾರ. ಆದರೂ ಸದ್ಯದ ಪರಿಸ್ಥಿತಿಯಲ್ಲಿ ವಿರಾಟ್‌ ಕೊಹ್ಲಿ ಮತ್ತು ವಿಶ್ವದ ಉಳಿದ ಆಟಗಾರರ ನಡುವೆ ಭಾರಿ ಅಂತರವಿದೆ. ರೋಹಿತ್‌ ಶರ್ಮಾ ಈ ವಿಶ್ವಕಪ್‌ನಲ್ಲಿ ನಾಲ್ಕು ಶತಕಗಳನ್ನು ಬಾರಿಸಿರಬಹುದು. ಆದರೆ, ಟಿ20, ಟಿ10, 100 ಎಸೆತಗಳ ಕ್ರಿಕೆಟ್‌ ಅಥವಾ ಟೆಸ್ಟ್‌ ಕ್ರಿಕೆಟ್‌ ಆಗಲಿ ಎಲ್ಲಾ ಮಾದರಿಯಲ್ಲೂ ಮಿಂಚಬಲ್ಲ ಅಪ್ರತಿಮ ಆಟಗಾರ ವಿರಾಟ್‌," ಎಂದು ಕಿಂಗ್‌ ಕೊಹ್ಲಿ ಸಾಮರ್ಥ್ಯವನ್ನು ಬ್ರಿಯಾನ್‌ ಲಾರಾ ಕೊಂಡಾಡಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ನ ಇನಿಂಗ್ಸ್‌ ಒಂದರಲ್ಲಿ ಗರಿಷ್ಠ ಸ್ಕೋರ್‌ (400*) ದಾಖಲಿಸಿದ ವಿಶ್ವ ದಾಖಲೆ ಹೊಂದಿರುವ ಬ್ರಿಯಾನ್‌ ಲಾರಾ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 22358 ರನ್‌ (ಏಕದಿನದಲ್ಲಿ 11953 ರನ್‌) ದಾಖಲಿಸಿದ್ದಾರೆ.

"ಸಚಿನ್‌ ತೆಂಡೂಲ್ಕರ್‌ ಕ್ರಿಕೆಟ್‌ ಕ್ರೀಡೆಯ ಮೇಲೆ ನಂಬಲು ಸಾಧ್ಯವಾಗದ ರೀತಿಯಲ್ಲಿ ಛಾಪನ್ನು ಮೂಡಿಸಿದ್ದಾರೆ. ಏಕೆಂದರೆ ಅಂದೆಲ್ಲಾ ಭಾರತೀಯ ಕ್ರಿಕೆಟಿಗರು ಕೇವಲ ತವರು ನೆಲದಲ್ಲಷ್ಟೇ ಆಡಬಲ್ಲರು ಎಂಬ ಸ್ಥಿತಿಯಿತ್ತು. ಆದರೆ, ಸಚಿನ್‌ ಮಾತ್ರವೇ ಯಾವುದೇ ನೆಲದಲ್ಲೂ ರನ್‌ ಗಳಿಸಬಲ್ಲೆ ಎಂಬುದನ್ನು ತೋರಿಸಿಕೊಟ್ಟರು. ಈಗಿನ ಕ್ರಿಕೆಟಿಗರು ಸಚಿನ್‌ ಅವರ ಹಾದಿಯನ್ನು ಹಿಂಬಾಲಿಸುತ್ತಿದ್ದಾರೆ ಅಷ್ಟೇ," ಎಂದು ಲಾರಾ ಹೇಳಿದ್ದಾರೆ.

Story first published: Thursday, July 4, 2019, 21:33 [IST]
Other articles published on Jul 4, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+