ಈ ಯುವ ಆಟಗಾರನಿಗೆ ಟಿ20 ತಂಡದಲ್ಲಿ ಯಾರಿಂದಲೂ ಪ್ರತಿಸ್ಪರ್ಧೆಯಿಲ್ಲ ಎಂದ ಮಾಜಿ ಕ್ರಿಕೆಟಿಗ

ಟಿ20 ವಿಶ್ವಕಪ್‌ಗೆ ದಿನಗಣನೆ ಆರಂಭವಾಗಿದ್ದು ಈ ಪ್ರತಿಷ್ಠಿತ ಟೂರ್ನಿಯಲ್ಲಿ ಯಾವೆಲ್ಲಾ ಆಟಗಾರರು ಸ್ಥಾನವನ್ನು ಪಡೆದುಕೊಳ್ಳಬಹುದು ಎಂಬುದು ಕುತೂಹಲ ಮೂಡಿಸಿದೆ. ಈಗಾಗಲೇ ಏಷ್ಯಾಕಪ್ ಟೂರ್ನಿಗೆ ತಂಡವನ್ನು ಆಯ್ಕೆ ಮಾಡಲಾಗಿದ್ದು ಈ ತಂಡದಲ್ಲಿ ಸ್ಥಾನ ಪಡೆದಿರುವ ಬಹುತೇಕ ಆಟಗಾರರು ಅವಕಾಶ ಗಿಟ್ಟಿಸಿಕೊಳ್ಳುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ಚಂದು ಬೋರ್ಡೆ ಪ್ರತಿಕ್ರಿಯಿಸಿದ್ದು ಭಾರತದ ಯುವ ಆಟಗಾರ ರಿಷಬ್ ಪಂತ್ ನಿಸ್ಸಂಶಯವಾಗಿ ವಿಶ್ವಕಪ್‌ಗೆ ಆಯ್ಕೆಯಾಗಲಿದ್ದಾರೆ ಎಂದಿದ್ದಾರೆ.
ಯುವ ಕ್ರಿಕೆಟಿಗ ರಿಷಭ್ ಪಂತ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿಕೊಂಡು ಬರುತ್ತಿದ್ದರೂ ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ದೊಡ್ಡ ಮಟ್ಟದ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಹಾಗಿದ್ದರೂ ರಿಷಬ್ ಪಂತ್ ಸಾಮರ್ಥ್ಯದ ಬಗ್ಗೆ ಚಂದು ಬೊರ್ಡೆ ವಿಶ್ವಾಸವನ್ನು ವ್ಯಕ್ತಪಡಿಸಿದ್ದು ಅವರ ಸ್ಥಾನಕ್ಕೆ ಯಾವುದೇ ಪ್ರತಿಸ್ಪರ್ಧೆಯಿಲ್ಲ ಎಂದಿದ್ದಾರೆ.

ಏಕಾಂಗಿಯಾಗಿ ತಂಡವನ್ನು ಗೆಲ್ಲಿಸಬಲ್ಲ ಆಟಗಾರ
ರಿಷಭ್ ಪಂತ್ ಬಗ್ಗೆ ಚಂದು ಬೋರ್ಡೆ ತಮ್ಮ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಯಾವುದೇ ಹಂತದಿಂದಲೂ ತಂಡವನ್ನು ಸೋಲಿನಿಂದ ರಕ್ಷಿಸಿ ಗೆಲುವು ತಂದುಕೊಡಬಲ್ಲ ಸಾಮರ್ಥ್ಯವಿರುವ ಆಟಗಾರ ರಿಷಭ್ ಪಂತ್. ಆತ ಕೇವಲ ಫಿನಿಷರ್ ಮಾತ್ರವಲ್ಲ, ಯಾವ ಕ್ರಮಾಂಕದಲ್ಲಿ ಕಣಕ್ಕಿಳಿದರೂ ತಂಡಕ್ಕೆ ನೆರವಾಗಬಲ್ಲರು. ಪಂದ್ಯದ ಫಲಿತಾಂಶವನ್ನು ಕ್ಷಣಾರ್ಧದಲ್ಲಿ ಬದಲಾಯಿಸುವ ಸಾಮರ್ಥ್ಯವನ್ನು ಅವರು ಹೊಂದಿದ್ದಾರೆ" ಎಂದಿದ್ದಾರೆ ಚಂದು ಬೋರ್ಡೆ.

ವಿಕೆಟ್ ಕೀಪರ್ ಬ್ಯಾಟರ್‌ಗಳ ಸಾಲು
ಇತ್ತೀಚಿನ ದಿನಗಳಲ್ಲಿ ಭಾರತ ಕ್ರಿಕೆಟ್ ತಂಡದ ಚುಟುಕು ಮಾದರಿಯಲ್ಲಿ ವಿಕೆಟ್ ಕೀಪರ್ ಬ್ಯಾಟರ್‌ಗಳ ದೊಡ್ಡ ದಂಡೇ ಇದೆ. ಸಂಜು ಸ್ಯಾಮ್ಸನ್, ಇಶಾನ್ ಕಿಶನ್ ಮತ್ತು ದಿನೇಶ್ ಕಾರ್ತಿಕ್ ಇತ್ತೀಚಿನ ದಿನಗಳಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದು ಶ್ರೇಯಾಂಕದಲ್ಲಿಯೂ ಪ್ರಗತಿ ಸಾಧಿಸುತ್ತಿದ್ದಾರೆ. ಈ ಮೂಲಕ ರಿಷಭ್ ಪಂತ್ ಟಿ20 ವಿಶ್ವಕಪ್ ನಡೆಯುತ್ತಿರುವ ಈ ವರ್ಷದಲ್ಲಿ ತಮ್ಮ ಸ್ಥಾನಕ್ಕಾಗಿ ಸಾಕಷ್ಟು ಪೈಪೋಟಿಯನ್ನು ಎದುರಿಸುತ್ತಿರುವುದು ಸುಳ್ಳಲ್ಲ. ಹೀಗಾಗಿ ಮಹತ್ವದ ಟೂರ್ನಿಗೆ ಯಾವ ಆಟಗಾರರು ಆಯ್ಕೆಯಾಗಲಿದ್ದಾರೆ ಎಂಬುದು ಸಾಕಷ್ಟು ಕುತೂಹಲ ಮೂಡಿಸಿದೆ.
IND vs PAK ಪಂದ್ಯಕ್ಕೆ ಭರ್ಜರಿ ತಯಾರಿ; ಆಮ್ಲಾರ ಮತ್ತೊಂದು ODI ದಾಖಲೆ ಮುರಿದ ಬಾಬರ್ ಅಜಂ

ತಂಡದೊಳಗೆ ಭಾರೀ ಪೈಪೋಟಿ
ಇನ್ನು ಈ ಸಂದರ್ಭದಲ್ಲಿ ತಂಡದಲ್ಲಿ ಸ್ಥಾನ ಪಡೆಯಲು ಇರುವ ಪೈಪೋಟಿಗೆ ಚಂದು ಬೋರ್ಡೆ ಹರ್ಷ ವ್ಯಕ್ತಪಡಿಸಿದ್ದಾರೆ. "ತಂಡದಲ್ಲಿರುವ ಈ ಸ್ಪರ್ಧೆ ನಿಜಕ್ಕೂ ಶ್ರೇಷ್ಠ ಸಂಗತಿಯಾಗಿದೆ. ಇದರಲ್ಲಿ ಯಾರಾದರೂ ತಮಡದ ಭಾಗವಾಗಬಹುದು. ಹಾಗಿದ್ದರೂ ರಿಷಬ್ ಪಂತ್‌ಗೆ ಇವರ್ಯಾರಿಂದಲೂ ಸ್ಪರ್ಧೆಯಿದೆ ಎಂದು ನನಗೆ ಅನಿಸುತ್ತಿಲ್ಲ. ಆತ ತಂಡಕ್ಕೆ ಸ್ವಾಭಾವಿಕ ಆಯ್ಕೆಯಾಗಿದ್ದು ತಂಡದ ಪ್ರಮುಖ ಭಾಗವಾಗಿದ್ದಾರೆ. ಯಾವುದೇ ಕ್ಷಣದಲ್ಲಾದರೂ ಪಂದ್ಯದ ಗತಿಯನ್ನು ಬದಲಿಸಬಲ್ಲ ಸಾಮರ್ಥ್ಯವಿರುವ ಆಟಗಾರ ಆತ" ಎಂದಿದ್ದಾರೆ ಚಂದು ಬೋರ್ಡೆ.

ಏಷ್ಯಾಕಪ್‌ಗೆ ಆಯ್ಕೆಯಾಗಿದ್ದಾರೆ ಪಂತ್, ಡಿಕೆ
ಇನ್ನು ಈ ತಿಂಗಳಾಂತ್ಯದಲ್ಲಿ ಯುಎಇನಲ್ಲಿ ಏಷ್ಯಾ ಕಪ್ ಟೂರ್ನಿ ಆರಂಭವಾಗಲಿದೆ. ಈ ಟೂರ್ನಿಗೆ ಈಗಾಗಲೇ ತಂಡ ಘೋಷಣೆಯಾಗಿದ್ದು ಈ ತಂಡದಲ್ಲಿ ರಿಷಭ್ ಪಂತ್ ಸ್ಥಾನ ಪಡೆದುಕೊಂಡಿದ್ದಾರೆ. ಮಾತ್ರವಲ್ಲದೆ ದಿನೇಶ್ ಕಾರ್ತಿಕ್ ಕೂಡ ಈ ತಂಡದಲ್ಲಿ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಸಿಕ್ಕ ಅವಕಾಶದಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಸಂಜು ಸ್ಯಾಮ್ಸನ್ ಹಾಗೂ ಇಶಾನ್ ಕಿಶನ್‌ಗೆ ಈ ತಮಡದಲ್ಲಿ ಸ್ಥಾನ ದೊರೆತಿಲ್ಲ. ಹೀಗಾಗಿ ವಿಶ್ವಕಪ್‌ನಲ್ಲಿ ಯಾವ ರೀತಿಯಾದ ಆಯ್ಕೆ ನಡೆಯಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications