
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿನ ಸೋಲಿನ ಬಳಿಕ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಐಸಿಸಿಯ ಹೊಸ ಮಾನದಂಡದ ವಿಚಾರವಾಗಿ ಮತ್ತೊಂದು ಬಾರಿ ವಿರಾಟ್ ಕೊಹ್ಲಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
"ಲಾಕ್‌ಡೌನ್‌ನ ಸಂದರ್ಭದಲ್ಲಿ ಇದ್ದಕ್ಕಿಂತೆಯೇ ನಿಯಮಗಳು ಬದಲಾದರೆ, ಯಾವುದು ಕೂಡ ನಿಮ್ಮ ನಿಯಂತ್ರಣದಲ್ಲಿಲ್ಲ" ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಸೋಲು ಕಂಡ ಬಳಿಕ ಈ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.
"ನಮ್ಮಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆದರೆ ನೀವು ಲಾಕ್‌ಡೌನ್‌ನಲ್ಲಿದ್ದಾಗ ಇದ್ದಕ್ಕಿದ್ದಂತೆಯೇ ನಿಯಮಗಳು ಬದಲಾದರೆ ನಿಮ್ಮ ನಿಯಂತ್ರಣದಲ್ಲಿ ಯಾವುದು ಕೂಡ ಇರಲಾರದು. ನೀವು ಅಂಗಳದಲ್ಲಿ ಏನು ಮಾಡಬಲ್ಲಿರು ಎಂಬುವುದಷ್ಟೇ ನಿಮ್ಮ ನಿಯಂತ್ರಣದಲ್ಲಿ ಇರುತ್ತದೆ" ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
"ಅಂಕಪಟ್ಟಿ ಸೇರಿದಂತೆ ಹೊರಗೆ ನಡೆಯುತ್ತಿರುವ ಯಾವ ವಿಚಾರಗಳ ಬಗ್ಗೆಯೂ ನಾವು ತಲೆಕೆಡಿಸಿಕೊಂಡಿಲ್ಲ. ಕೆಲ ವಿಚಾರಗಳಿಗೆ ಯಾವುದೇ ತರ್ಕಗಳು ಇರುವುದಿಲ್ಲ" ಎನ್ನುವ ಮೂಲಕ ಅಂಕಪಟ್ಟಿಯಲ್ಲಿನ ಹೊಸ ಮಾನದಂಡದ ಬಗ್ಗೆ ತಮ್ಮ ಅಸಮಾಧಾನವನ್ನು ವಿರಾಟ್ ಕೊಹ್ಲಿ ವ್ಯಕ್ತಪಡಿಸಿದ್ದಾರೆ.
ಈ ಟೆಸ್ಟ್ ಪಂದ್ಯದ ಆರಂಭಕ್ಕೆ ಮುನ್ನ ನಾವು ಇಂಗ್ಲೆಂಡ್‌ಗೆ ಇರುವ ಸಾಧ್ಯತೆಗಳ ಬಗ್ಗೆ ಆಲೋಚನೆಯನ್ನೂ ಮಾಡಿರಲಿಲ್ಲ. ಆದರೆ ಈಗ ಇದ್ದಕ್ಕಿಂತೆ ನಾವು ಅವರು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದೇವೆ. ಈ ಬದಲಾವಣೆಗಳು ನಿರಂತರವಾಗಿ ನಡೆಯುತ್ತಿದೆ. ಈ ವಿಚಾರವಾಗಿ ನೀವು ಆಡಿ ಆಡದಿರಿ, ನಮ್ಮ ಚಿತ್ತ ಕಠಿಣ ಪರಿಶ್ರಮವನ್ನು ಪಡುವುದಾಗಿದೆ, ನಾವು ಅದನ್ನು ಮಾಡುತ್ತೇವೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.