ಸುಳ್ಳು ಹೇಳಿದರಾ ಬಿಸಿಸಿಐ ಅಧ್ಯಕ್ಷ ಗಂಗೂಲಿ?: ಅನುಮಾನ ಮೂಡಿಸಿದೆ ಕೊಹ್ಲಿ ಆಡಿದ ಈ ಮಾತು!

ಟೀಮ್ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಏಕದಿನ ತಂಡದ ನಾಯಕ ರೋಹಿತ್ ಶರ್ಮಾ ಮರ್ಧಯೆ ಎಲ್ಲವೂ ಸರಿಯಿಲ್ಲ ಎಂಬ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಇತ್ತೀಚೆಗೆ ನಡೆದ ಬೆಳವಣಿಗೆ ಈ ಊಹಾಪೋಹಗಳಿಗೆ ಪುಷ್ಟಿ ನೀಡುವಂತಿತ್ತು. ಆದರೆ ಈ ಬಗ್ಗೆ ಸ್ವತಃ ವಿರಾಟ್ ಕೊಹ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ತಾನು ಮುಂದಿನ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಏಕದಿನ ಸರಣಿಯಲ್ಲಿ ಭಾಗಿಯಾವುದುದಾಗಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ರೋಹಿತ್ ಶರ್ಮಾ ಜೊತೆಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂಬುದನ್ನು ಕೂಡ ವಿರಾಟ್ ಕೊಹ್ಲಿ ನೇರವಾಗಿ ಹೇಳಿದ್ದಾರೆ.
ಆದರೆ ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿಗೆ ಬಿಸಿಸಿಐ ಮೇಲೆ ಅಸಮಾಧಾನ ಇರುವುದು ಸ್ಪಷ್ಟವಾಗಿದೆ. ಅದರಲ್ಲೂ ಏಕದಿನ ನಾಯಕತ್ವ ತ್ಯಜಿಸುವ ವಿಚಾರವಾಗಿ ಬಿಸಿಸಿಐ ನಡೆಸಿಕೊಂಡ ರೀತಿಯ ಬಗ್ಗೆ ವಿರಾಟ್ ಕೊಹ್ಲಿ ವಿವರಗಳನ್ನು ನೀಡುತ್ತಾ ಯಾರ ವಿರುದ್ಧ ನೇರವಾದ ಅಸಮಾಧಾನ ವ್ಯಕ್ತಪಡಿಸಿದೆಯೇ ಒಂದಷ್ಟು ಅಂಶಗಳನ್ನು ಮಾಧ್ಯಮಗಳ ಮುಂದಿಟ್ಟಿದ್ದಾರೆ.

ಯಾವುದೇ ಪೂರ್ವ ಮಾಹಿತಿ ಇರಲಿಲ್ಲ
ಇನ್ನು ಏಕದಿನ ನಾಯಕತ್ವದ ಬದಲಾವಣೆ ಬಗ್ಗೆ ಯಾವುದೇ ಪೂರ್ವ ಮಾಹಿತಿಗಳು ಕೂಡ ತನಗೆ ಇರಲಿಲ್ಲ ಎಂಬ ಸಂಗತಿಯನ್ನು ವಿರಾಟ್ ಕೊಹ್ಲಿ ಈ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ. "ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ತಂಡದ ಆಯ್ಕೆಯ ಬಗ್ಗೆ ಆಯ್ಕೆಗಾರರ ಜೊತೆಗೆ ಒಂದೂವರೆ ಗಂಟೆಗಳ ಕಾಲ ಮೀಟಿಂಗ್ ನಡೆದಿತ್ತು. ಈ ಮೀಟಿಂಗ್‌ನ ಅಂತ್ಯದಲ್ಲಿ ಏಕದಿನ ಮಾದರಿಗೆ ಮುಂದೆ ತಾನು ನಾಯಕನಾಗಿ ಮುಂದುವರಿಯುವುದಿಲ್ಲ ಎಂದು ತಿಳಿಸಿದ್ದರು. ಅದಕ್ಕೆ ನಾನು ಒಕೆ ಎಂದಿದ್ದೆ. ಅದಕ್ಕೂ ಮುನ್ನ ಈ ವಿಚಾರವಾಗಿ ಯಾವುದೇ ಚರ್ಚೆಗಳು ನಡೆದಿರಲಿಲ್ಲ" ಎಂದಿದ್ದಾರೆ ವಿರಾಟ್ ಕೊಹ್ಲಿ.

ಕೊನೆಯ ಕ್ಷಣದಲ್ಲಿ ಏಕದಿನ ನಾಯಕತ್ವದ ಬಗ್ಗೆ ತಿಳಿಯಿತು
"ನಾನು ಟಿ20 ನಾಯಕತ್ವವನ್ನು ತೊರೆದ ನಂತರ ಡಿಸೆಂಬರ್ 8ರ ವರೆಗೆ ಯಾವುದೇ ನಾಯಕತ್ವದ ಬಗ್ಗೆ ಚರ್ಚೆಗಳು ನಡೆದಿಲ್ಲ. ಆ ಸಭೆಯಲ್ಲಿ ಮುಖ್ಯ ಆಯ್ಕೆಗಾರರು ಟೆಸ್ಟ್ ತಂಡದ ಬಗ್ಗೆ ಚರ್ಚೆಯನ್ನು ನಡೆಸಿ ಒಪ್ಪಿಗೆಗೆ ಬರಲಾಗಿತ್ತು. ಆದರೆ ಈ ಸಂವಹನ ಮುಕ್ತಾಯಗೊಳ್ಳುವುದಕ್ಕೆ ಮುನ್ನ ಐವರು ಆಯ್ಕೆಗಾರರು ಮುಂದಿನ ಏಕದಿನ ಸರಣಿಯಿಂದ ಏಕದಿನ ಮಾದರಿಗೆ ನಾನು ನಾಯಕನಾಗಿ ಮುಂದುವರಿಯುವುದಿಲ್ಲ ಎಂದು ತಿಳಿಸಿದರು. ಅದಕ್ಕೆ ನಾನು ಸರಿ ಎಂದಿದ್ದೆ" ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ಟಿ20 ನಾಯಕತ್ವವನ್ನು ಸಲೀಸಾಗಿ ಸ್ವೀಕರಿಸಿದ್ದರು
ಇನ್ನು ಇದೇ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ತಾನು ಟಿ20 ನಾಯಕತ್ವಕ್ಕೆ ರಾಜೀನಾಮೆ ನೀಡಿದಾಗ ಬಿಸಿಸಿಐ ಸಲೀಸಾಗಿ ಸ್ವೀಕರಿಸಿತ್ತು ಎಂದಿದ್ದಾರೆ. ಆದರೆ ಬಿಸಿಸಿಐ ನನ್ನಲ್ಲಿ ಟಿ20 ನಾಯಕತ್ವ ತ್ಯಜಿಸುವ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಯಾರೂ ಕೂಡ ಹೇಳಿಲ್ಲ ಎಂದು ಕೂಡ ತಿಳಿಸಿದ್ದಾರೆ. ವಿರಾಟ್ ಕೊಹ್ಲಿಯ ಈ ಮಾತುಗಳು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ತಿರುಗೇಟು ನೀಡುವಂತಿತ್ತು.

ಟಿ20 ನಾಯಕತ್ವದ ಬಗ್ಗೆ ಗಂಗೂಲಿ ಹೇಳಿದ್ದಿಷ್ಟು
ಇನ್ನು ಏಕದಿನ ನಾಯಕತ್ವದಿಂದ ವಿರಾಟ್ ಕೊಹ್ಲಿಯನ್ನು ಕೆಳಕ್ಕಿಳಿಸಿದ ಬಳಿಕ ಉಂಟಾದ ವಿವಾದದ ಬಳಿಕ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಾಧ್ಯಮಗಳಲ್ಲಿ ಪ್ರತಿಕ್ರಿಯೆ ನೀಡಿದ್ದರು. ಈ ಸಂದರ್ಭದಲ್ಲಿ ಸೌರವ್ ಗಂಗೂಲಿ ವಿರಾಟ್ ಕೊಹ್ಲಿ ಬಳಿ ಟಿ20 ನಾಯಕತ್ವ ತ್ಯಜಿಸುವ ನಿರ್ಧಾರವನ್ನು ಮತ್ತೊಮ್ಮೆ ಪರಿಗಣಿಸುವಂತೆ ಕೇಳಿಕೊಂಡಿದ್ದೆವು. ಆದರೆ ಅವರು ಅದನ್ನು ನಿರಾಕರಿಸಿದ್ದಾರೆ. ಹೀಗಾಗಿ ವೈಟ್‌ಬಾಲ್ ಮಾದರಿಗೆ ಇಬ್ಬರು ಪ್ರತ್ಯೇಕ ನಾಯಕರನ್ನು ಹೊಂದುವುದು ಅಸಾಧ್ಯ ಹೀಗಾಗಿ ಈ ಬದಲಾವಣೆ ಮಾಡಲಾಗಿದೆ ಎಂದಿದ್ದರು. ಸೌರವ್ ಗಂಗೂಲಿ ಆಡಿದ ಈ ಮಾತುಗಳು ಈಗ ಪ್ರಶ್ನಿಸುವಂತಿದೆ.

ಕೊಹ್ಲಿ vs ರೋಹಿತ್ ಇದ್ದಿದ್ದು ಕೊಹ್ಲಿ vs ಬಿಸಿಸಿಐ ಆಯಿತಾ?
ಇನ್ನು ವಿರಾಟ್ ಕೊಹ್ಲಿ ಈ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡುವ ಕ್ಷಣದವರೆಗೂ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಈ ಗೊಂದಲಗಳು ಉಂಟಾಗುತ್ತಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿತ್ತು. ಆದರೆ ವಿರಾಟ್ ಕೊಹ್ಲಿ ಈ ಮಾಧ್ಯಮಗೋಷ್ಠಿಯಲ್ಲಿ ಆಡಿದ ಕೆಲ ಮಾತುಗಳು ಈ ಸಂಘರ್ಷ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಮರ್ಧಯೆ ನಡೆಯುತ್ತಿಲ್ಲ ಎಂದು ಸ್ಪಷ್ಟವಾಗಿದೆ. ಆದರೆ ಇದು ವಿರಾಟ್ ಕೊಹ್ಲಿ ಹಾಗೂ ಬಿಸಿಸಿಐ ಅಥವಾ ಸೌರವ್ ಗಂಗೂಲಿ ನಡುವಿನ ಸಂಘರ್ಷ ಎಂದು ಮನವರಿಜೆಯಾಗುತ್ತಿದೆ. ಆದರೆ ಇದು ಮುಂದೆ ಯಾವ ರೂಪವನ್ನು ಪಡೆದುಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ. ವಿರಾಟ್ ಕೊಹ್ಲಿ ಆಡಿದ ಮಾತುಗಳಿಗೆ ಬಿಸಿಸಿಐ ಅಥವಾ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯಿಂದ ಯಾವ ರೀತೊಇಯ ಪ್ರತಿಕ್ರಿಯೆ ಬರಬಹುದು ಎಂಬುದು ಕೂಡ ಕುತೂಹಲಕಾರಿ ಸಂಗತಿಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications