For Quick Alerts
ALLOW NOTIFICATIONS  
For Daily Alerts
 

IPL 2025: ಮುಂಬೈ ಪ್ಲೇ ಆಸೆ ಜೀವಂತ; ಪಾಯಿಂಟ್ ಟೇಬಲ್ ಹೀಗಿದೆ..

ಐಪಿಎಲ್ 2025 ರಲ್ಲಿ ಭಾನುವಾರದಂದು ಡಬಲ್ ಹೆಡರ್ ಪಂದ್ಯಗಳು ನಡೆದವು. ಮೊದಲ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಣಿಸಿತು. ಎರಡನೇ ಪಂದ್ಯದಲ್ಲಿ ಸತತ ಗೆಲುವಿನೊಂದಿಗೆ ಮುನ್ನುಗುತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುಂಬೈ ಇಂಡಿಯನ್ಸ್ ಸೋಲಿಸಿತು. ಈ ಎರಡು ಪಂದ್ಯಗಳು ಮುಕ್ತಾಯದ ಬಳಿಕ ಐಪಿಎಲ್ 2025 ರ ಪಾಯಿಂಟ್ ಟೇಬಲ್‌ನಲ್ಲಿ ಹಲವು ಬದಲಾವಣೆಗಳಾಗಿವೆ. ಈ ಬಗ್ಗೆ ಇಲ್ಲಿದೆ ಮಾಹಿತಿ.

ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2025 ರ 30ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 12 ರನ್‌ಗಳ ಜಯ ಸಾಧಿಸಿತು. ಈ ಮೂಲಕ ಐಪಿಎಲ್ 2025 ರಲ್ಲಿ ಮುಂಬೈ ತನ್ನ ಖಾತೆಗೆ ಎರಡು ಅಂಕಗಳನ್ನು ಸೇರಿಸಿಕೊಂಡಿತು. ಈ ಗೆಲುವು ಪಾಯಿಂಟ್ಸ್ ಟೇಬಲ್‌ನಲ್ಲಿ ಪ್ರಮುಖ ಬದಲಾವಣೆ ತಂದಿದೆ. ಅಲ್ಲದೆ, ಮುಂಬೈ ಇಂಡಿಯನ್ಸ್ ತಂಡದ ಪ್ಲೇ ಆಪ್ ಕನಸು ಕೂಡ ಜೀವಂತವಾಗಿದೆ.

There will be 30 matches in IPL 2025 know about the points table

ಐಪಿಎಲ್ 2025 ರ ಸೀಸನ್ ಈಗ ಮುಂದುವರೆದಂತೆ ತೀವ್ರ ಪೈಪೋಟಿಗೆ ಸಿದ್ಧವಾಗುತ್ತಿದೆ. ಮುಂಬೈ ವಿರುದ್ಧದ ಈ ಸೋಲಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ 5 ಪಂದ್ಯಗಳಿಂದ 8 ಅಂಕಗಳೊಂದಿಗೆ ಪಾಯಿಂಟ್ ಟೇಬಲ್‌ನಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದೆ. ಅಕ್ಸರ್ ಪಟೇಲ್ ನೇತೃತ್ವದ ಮುಂಬೈ ತಂಡವು +0.899 ರ ನಿವ್ವಳ ರನ್ ರೇಟ್ ಹೊಂದಿದೆ.

ಶುಭಮನ್ ಗಿಲ್ ಮುನ್ನಡೆಸುತ್ತಿರುವ ಗುಜರಾತ್ ಟೈಟಾನ್ಸ್ ತಂಡ ಇಲ್ಲಿವರೆಗೆ 6 ಪಂದ್ಯಗಳನ್ನು ಆಡಿದ್ದು, 4 ಗೆಲುವುಗಳು ಮತ್ತು 2 ಸೋಲನ್ನು ಎದುರಿಸಿದೆ. ಜಿಟಿ 8 ಅಂಕಗಳೊಂದಿಗೆ ಪಾಯಿಂಟ್ ಟೇಬಲ್‌ನಲ್ಲಿ ಅಗ್ರಸ್ಥಾನದಲ್ಲಿದ್ದು, +1.081 ರ ಉತ್ತಮ ನಿವ್ವಳ ರನ್ ರೇಟ್ ಹೊಂದಿದೆ. ಗುಜರಾತ್ ಟೈಟಾನ್ಸ್ ಇಲ್ಲಿಯವರೆಗೆ ಉತ್ತಮ ಫಾರ್ಮ್ ನಲ್ಲಿದ್ದು, ಉಳಿದ ತಂಡಗಳಿಗಿಂತ ಸ್ವಲ್ಪ ಮುಂದಿದೆ.

ಐಪಿಎಲ್ 2025 ರಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿರುವ ಹೊಸ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುಜರಾತ್ ಮತ್ತು ಡೆಲ್ಲಿ ತಂಡಗಳೊಂದಿಗೆ ಸಮಬಲ ಸಾಧಿಸಿದ್ದು, ಆಡಿದ 6 ಪಂದ್ಯಗಳಲ್ಲಿ 4ರಲ್ಲಿ ಗೆದ್ದು, 2 ರಲ್ಲಿ ಸೋತಿದೆ. ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಮತ್ತು ಸುಧಾರಿತ ಬೌಲಿಂಗ್‌ನ ಬಲದಿಂದಾಗಿ +0.672 ನಿವ್ವಳ ರನ್ ರೇಟ್‌ನೊಂದಿಗೆ ಆರ್‌ಸಿಬಿ ಮೂರನೇ ಸ್ಥಾನದಲ್ಲಿದೆ.

ಲಕ್ನೋ ಸೂಪರ್ ಜೈಂಟ್ಸ್ ಕೂಡ ಐಪಿಎಲ್ 2025 ರಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದೆ. ಆಡಿರುವ 6 ಪಂದ್ಯಗಳಿಂದ 8 ಅಂಕಗಳೊಂದಿಗೆ ಪಾಯಿಂಟ್ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ರಿಷಭ್ ಪಂತ್ ನೇತೃತ್ವದ ಲಕ್ನೋ ತಂಡ +0.162 ನಿವ್ವಳ ರನ್ ರೇಟ್ ಹೊಂದಿದೆ.

ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ 18ನೇ ಸೀಸನ್‌ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುತ್ತಿಲ್ಲ. ಆಡಿರುವ 6 ಪಂದ್ಯಗಳಿಂದ 3 ಗೆಲುವು ಮತ್ತು 3 ಸೋಲುಗಳೊಂದಿಗೆ ಐದನೇ ಸ್ಥಾನವನ್ನು ಪಡೆದುಕೊಂಡಿದೆ. ಕೆಕೆಆರ್ +0.803 ನಿವ್ವಳ ರನ್ ರೇಟ್‌ ಹೊಂದಿದ್ದು, 6 ಅಂಕಗಳನ್ನು ಹೊಂದಿದ್ದರೂ ಪಂಜಾಬ್ ಕಿಂಗ್ಸ್‌ ತಂಡಕ್ಕಿಂತ ಪಾಯಿಂಟ್ ಟೇಬಲ್‌ನಲ್ಲಿ ಮೇಲಿದೆ.

ಪಂಜಾಬ್ ಕಿಂಗ್ಸ್ 5 ಪಂದ್ಯಗಳಿಂದ 6 ಅಂಕಗಳೊಂದಿಗೆ ಮತ್ತು +0.065 ನ ಸ್ವಲ್ಪ ಸಕಾರಾತ್ಮಕ ನಿವ್ವಳ ರನ್ ದರದೊಂದಿಗೆ ಆರನೇ ಸ್ಥಾನದಲ್ಲಿದೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಗೆಲುವಿನ ನಂತರ ಮುಂಬೈ ಇಂಡಿಯನ್ಸ್ ಈಗ 6 ಪಂದ್ಯಗಳಿಂದ 4 ಅಂಕಗಳನ್ನು ಹೊಂದಿದೆ. ಮುಂಬೈ +0.104 ನಿವ್ವಳ ರನ್ ರೇಟ್‌ನೊಂದಿಗೆ ಏಳನೇ ಸ್ಥಾನ ಪಡೆದಿದೆ. ಈ ಗೆಲುವು ಮುಂಬೈ ಇಂಡಿಯನ್ಸ್ ತಂಡಕ್ಕೆ ಐಪಿಎಲ್ 2025 ರ ಮಧ್ಯೆದಲ್ಲಿ ಪ್ಲೇ ಆಫ್ ತಲುಪುವ ಭರವಸೆ ನೀಡಿದೆ.

ರಾಜಸ್ಥಾನ್ ರಾಯಲ್ಸ್ ಕೂಡ 6 ಪಂದ್ಯಗಳಲ್ಲಿ 2 ರಲ್ಲಿ ಮಾತ್ರ ಗೆಲುವು ಕಂಡಿದ್ದು, 4 ರಲ್ಲಿ ಸೋತಿದೆ. ಈ ಮೂಲಕ
4 ಅಂಕಗಳನ್ನು ಗಳಿಸಿದೆ. ಆದರೆ ರಾಜಸ್ಥಾನ -0.838 ರ ಕಳಪೆ ನಿವ್ವಳ ರನ್ ರೇಟ್‌ನಿಂದಾಗಿ ಎಂಟನೇ ಸ್ಥಾನದಲ್ಲಿದೆ.

ಬಲಿಷ್ಠ ಸನ್‌ರೈಸರ್ಸ್ ಹೈದರಾಬಾದ್ ತಂಡ ಕೂಡ ಗೆಲುವಿನ ಹಾದಿ ಮರಳಿದೆ. ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ ನಂತರ ಹೈದರಾಬಾದ್ ಪಾಯಿಂಟ್ ಟೇಬಲ್‌ನಲ್ಲಿ ಬದಲಾವಣೆಗಳನ್ನು ಮಾಡುವ ಲೆಕ್ಕಚಾರದಲ್ಲಿದೆ. ಹೈದರಾಬಾದ್ ಆಡಿರುವ 6 ಪಂದ್ಯಗಳಲ್ಲಿ 2 ಗೆಲುವುಗಳು ಮತ್ತು 4 ಸೋಲುಗಳೊಂದಿಗೆ ಒಂಬತ್ತನೇ ಸ್ಥಾನದಲ್ಲಿದೆ. ಹೈದರಾಬಾದ್ ತಂಡಕ್ಕೆ -1.245 ರ ಕಳಪೆ ನಿವ್ವಳ ರನ್ ರೇಟ್ ತಲೆ ನೋವಾಗಿದೆ.

Story first published: Monday, April 14, 2025, 9:26 [IST]
Other articles published on Apr 14, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+