Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL Auction 2023: ಈ ಎಂಟು ಆಲ್‌ರೌಂಡರ್‌ಗಳ ಖರೀದಿಸಲು ನಡೆಯಲಿದೆ ಪೈಪೋಟಿ

ಇಂಡಿಯನ್ ಪ್ರೀಮಿಯರ್ ಲೀಗ್ 2024 ಹರಾಜು ಪ್ರಾರಂಭಕ್ಕೆ ದಿನಗಣನೆ ಆರಂಭವಾಗಿದೆ. ಸ್ಟಾರ್ ಆಟಗಾರರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಮಾಲೀಕರು ಲೆಕ್ಕಾಚಾರ ಆರಂಭಿಸಿದ್ದಾರೆ. ವಿಶ್ವ ಕ್ರಿಕೆಟ್‌ನಲ್ಲಿ ತಮ್ಮದೇ ಛಾಪು ಒತ್ತಿರುವ ಸ್ಟಾರ್ ಆಟಗಾರರಿಗೆ ಹಣದ ಹೊಳೆ ಹರಿಯುವ ಸಾಧ್ಯತೆ ಇದೆ.

ಇನ್ನು ಆಲ್‌ರೌಂಡರ್‌ಗಳಿಗೆ ಸ್ಟಾರ್‌ಗಿರಿ ಇಲ್ಲಿ ಲಭಿಸಬಹುದು. ಅಲ್ಲದೆ ಆಲ್‌ರೌಂಡರ್‌ಗಳು ಹೆಚ್ಚಿನ ಹಣವನ್ನು ತಮ್ಮ ಜೇಬಿಗ ಹಾಕಿಕೊಳ್ಳಬಹುದು. ಹರಾಜಿನಲ್ಲಿ ಮಾಲೀಕರ ಚಿತ್ತ ಕದ್ದ ಎಂಟು ಆಲ್‌ರೌಂಡರ್‌ಗಳ ವರದಿ ಇಲ್ಲಿದೆ.

 There will be competition for the purchase of these eight all-rounders

ಈ ಪಟ್ಟಿಯಲ್ಲಿ ಎದ್ದು ಕಾಣುವ ಮೊದಲ ಹೆಸರು ಟೀಮ್ ಇಂಡಿಯಾ ಶಾರ್ದೂಲ್ ಠಾಕೂರ್.. ಡೆಲ್ಲಿ ಕ್ಯಾಪಿಟಲ್ಸ್ ತಂಡ ಶಾರ್ದೂಲ್ ಠಾಕೂರ್ ಅವರನ್ನು ಬಿಡುಗಡೆ ಮಾಡಿದೆ. ಹರಾಜಿನಲ್ಲಿ ಶಾರ್ದೂಲ್ ಮೇಲೆ ಮಾಲೀಕರು ದೊಡ್ಡ ಮೊತ್ತವನ್ನು ಹೂಡುವ ಸಾಧ್ಯತೆ ಇದೆ.

ಶಾರ್ದೂಲ್ ಜೊತೆಗೆ, 8 ಆಲ್ ರೌಂಡರ್ ಆಟಗಾರರಿದ್ದು, ಅವರ ಮೇಲೆ ದೊಡ್ಡ ಬಿಡ್‌ಗಳನ್ನು ಮಾಡಬಹುದು. ಪ್ಯಾಟ್ ಕಮ್ಮಿನ್ಸ್ ಮತ್ತು ಹರ್ಷಲ್ ಪಟೇಲ್ ಕೂಡ ಈ ಪಟ್ಟಿಯಲ್ಲಿ ಸೇರಿದ್ದಾರೆ.

 There will be competition for the purchase of these eight all-rounders

ಶಾರ್ದೂಲ್ ಕಳೆದ ಋತುವಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದರು. ಇದುವರೆಗೆ ಆಡಿರುವ 86 ಐಪಿಎಲ್ ಪಂದ್ಯಗಳಲ್ಲಿ 89 ವಿಕೆಟ್ ಪಡೆದಿದ್ದಾರೆ. ಇದರೊಂದಿಗೆ 286 ರನ್ ಕೂಡ ಗಳಿಸಿದ್ದಾರೆ. ಶಾರ್ದೂಲ್ ಖಾತೆಯಲ್ಲಿ ಒಂದು ಅರ್ಧಶತಕ ಇದೆ. ತಂಡಗಳು ಇವರ ಮೇಲೆ ದೊಡ್ಡ ಬಿಡ್ ಮಾಡಬಹುದು.

ಹರ್ಷಲ್ ಕಳೆದ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದರು. ಐಪಿಎಲ್‌ನಲ್ಲಿ ಇದುವರೆಗೆ ಆಡಿರುವ 92 ಪಂದ್ಯಗಳಲ್ಲಿ 111 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದರೊಂದಿಗೆ 236 ರನ್ ಗಳಿಸಿದ್ದಾರೆ. ಹರಾಜಿನಲ್ಲಿ ಹರ್ಷಲ್ ಉತ್ತಮ ಮೊತ್ತವನ್ನೂ ಪಡೆಯಬಹುದು.

 There will be competition for the purchase of these eight all-rounders

ಆಸ್ಟ್ರೇಲಿಯನ್ ಆಟಗಾರರಾದ ಪ್ಯಾಟ್ ಕಮ್ಮಿನ್ಸ್ ಮತ್ತು ಸೀನ್ ಅಬಾಟ್ ಕೂಡ ಅಗ್ರ ಆಲ್ ರೌಂಡರ್‌ಗಳ ಪಟ್ಟಿಯಲ್ಲಿ ಸೇರಿದ್ದಾರೆ. ಅಬಾಟ್ ಒಬ್ಬ ಶ್ರೇಷ್ಠ ಆಟಗಾರ. ಆದರೆ ಅವರಿಗೆ ಇನ್ನೂ ಹೆಚ್ಚಿನ ಅವಕಾಶಗಳು ಸಿಕ್ಕಿಲ್ಲ. ಅಬಾಟ್ 2015 ರಲ್ಲಿ ಐಪಿಎಲ್‌ನಲ್ಲಿ ತಮ್ಮ ಚೊಚ್ಚಲ ಪಂದ್ಯವನ್ನು ಆಡಿದ್ದರು.

ಇದರ ನಂತರ ಕೊನೆಯ ಪಂದ್ಯವನ್ನು 2022 ರಲ್ಲಿ ಆಡಿದರು. ಅಬಾಟ್ 14 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 14 ವಿಕೆಟ್ ಪಡೆದರು.

ಆಸೀಸ್ ನ ಕಮಿನ್ಸ್ ಕೂಡ ಐಪಿಎಲ್‌ನಲ್ಲಿ 42 ಪಂದ್ಯಗಳನ್ನು ಆಡಿದ್ದು 45 ವಿಕೆಟ್ ಹಾಗೂ 379 ರನ್ ಗಳಿಸಿದ್ದಾರೆ. ಕಮ್ಮಿನ್ಸ್‌ಗೆ ಉತ್ತಮ ಮೊತ್ತವನ್ನು ಸಹ ಖರ್ಚು ಮಾಡಬಹುದು. ಕ್ರಿಸ್ ವೋಕ್ಸ್, ಡೇವಿಡ್ ವಿಲ್ಲಿ, ಜೆರಾಲ್ಡ್ ಕೊಟ್ಜೆ ಮತ್ತು ಜೇಮೀ ಓವರ್ಟನ್ ಕೂಡ ಈ ಪಟ್ಟಿಯಲ್ಲಿ ಸೇರಿದ್ದಾರೆ.

Story first published: Thursday, December 14, 2023, 20:26 [IST]
Other articles published on Dec 14, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+