ನಿವೃತ್ತಿ ವಾಪಸ್ ಪಡೆದ ಬಳಿಕ ಘೋರ ಅವಮಾನ!!: ಮುಖಭಂಗ ಅನುಭವಿಸಿದ ಇಬ್ಬರು ದಿಗ್ಗಜ ಕ್ರಿಕೆಟಿಗರು
ನಿವೃತ್ತಿ ವಾಪಸ್ ಪಡೆದು ಮತ್ತೆ ಆಡುವುದು ಇತ್ತೀಚೆಗೆ ಹೊಸ ಟ್ರೆಂಡ್ ಆಗುತ್ತಿದೆ. ನಿವೃತ್ತಿಯನ್ನು ಘೋಷಣೆ ಮಾಡಿ ಬಳಿಕ ಕೆಲ ಕಾಲದ ಬಳಿಕ ಅದನ್ನು ಹಿಂಪಡೆದು ಆಡುವ ನಿರ್ಧಾರವನ್ನು ಮಾಡುವುದು ಕ್ರಿಕೆಟ್‌ಲ್ಲಿ ಸಾಮಾನ್ಯವೆನ್ನುವಂತೆ ಆಗಿದೆ. ನಿವೃತ್ತಿ ಘೋಷಣೆ ಎನ್ನುವುದು ಕ್ರಿಕೆಟಿಗನಿಗೆ ಅತ್ಯಂತ ದೊಡ್ಡ ನಿರ್ಧಾರ. ಅದಕ್ಕೆ ಕಾರಣ ಒಮ್ಮೆ ಘೋಷಣೆ ಮಾಡಿದರೆ ಮತ್ತೆ ಅತ್ಯುನ್ನತ ಮಟ್ಟದಲ್ಲಿ ಕಣಕ್ಕಿಳಿಯುವುದಿಲ್ಲ. ಆದರೆ ಈಗ ಹಾಗಿಲ್ಲ.
ಕೆಲ ಸಂದರ್ಭಗಳಲ್ಲಿ ಕ್ರಿಕೆಟಿಗರು ಮಂಡಳಿಯ ಜೊತೆಗೆ ಕಲಹಗಳಾದಾಗ, ಅಥವಾ ಯಾವುದಾದರೂ ದೊಡ್ಡ ಸೋಲಿನ ಬಳಿಕ ದಿಢೀರ್ ಆಗಿ ನಿವೃತ್ತಿ ಘೋಷಿಸುತ್ತಾರೆ. ಅಂಥಾ ಸಂದರ್ಭದಲ್ಲಿ ಕೆಲ ವರ್ಷಗಳಲ್ಲಿ ಮತ್ತೆ ಆಡುವ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಹೀಗಾಗಿ ನಿವೃತ್ತಿಯ ನಿರ್ಧಾರವನ್ನು ವಾಪಸ್ ಪಡೆಯುವ ಘಟನೆಗಳು ಕ್ರಿಕೆಟ್‌ನಲ್ಲಿ ಆಗಾಗ ನಡೆಯುತ್ತಲೇ ಇದೆ.

ಆದರೆ ಎಲ್ಲಾ ಕಮ್‌ಬ್ಯಾಕ್‌ಗಳು ಕೂಡ ಸ್ಮರಣೀಯವಾಗಿರುವುದಿಲ್ಲ ಎನ್ನುವುದಕ್ಕೂ ಉದಾಹರಣೆಗಳಿವೆ. ಇಬ್ಬರು ದಿಗ್ಗಜ ಕ್ರಿಕೆಟಿಗರು ನಿವೃತ್ತಿಯನ್ನು ವಾಪಸ್ ಪಡೆದು ಮರಳುವ ನಿರ್ಧಾರವನ್ನು ತೆಗೆದುಕೊಂಡರೂ ಅದಾದ ಬಳಿಕ ಆಯ್ಕೆಗಾರರಿಂದ ಯಾವುದೇ ಗೌರವ ದೊರೆಯದೆ ತೀವ್ರ ಅವಮಾನ ಅನುಭವಿಸಿದ್ದಾರೆ. ಆ ಇಬ್ಬರು ಕ್ರಿಕೆಟಿಗರ ಬಗ್ಗೆ ಇಲ್ಲಿದೆ ಮಾಹಿತಿ. ಮುಂದೆ ಓದಿ..
ಕೆವಿನ್ ಪೀಟರ್ಸನ್‌ಗೆ ಆಗಿತ್ತು ಘೋರ ಅವಮಾನ
ಇಂಗ್ಲೆಂಡ್‌ನ ಮಾಜಿ ನಾಯಕ ದಿಗ್ಗಜ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ವಿದಾಯ ಘೋಷಣೆ ಮಾಡಿದಾಗ ಅಭಿಮಾನಿಗಳಿಗೆ ದಿಗ್ಭ್ರಮೆಯಾಗಿತ್ತು. 2012ರ ಐಸಿಸಿ ಟಿ20 ವಿಶ್ವಕಪ್‌ಗೆ ಕೇವಲ ನಾಲ್ಕು ತಿಂಗಳ ಮುನ್ನ ಈ ನಿರ್ಧಾರವನ್ನು ಪ್ರಕಟಿಸಿದ್ದರು ಪೀಟರ್ಸನ್. ಆದರೆ ಕೆಲವೇ ಸಮಯಗಳಲ್ಲಿ ಪೀಟರ್ಸನ್ ತಮ್ಮ ನಿರ್ಧಾರವನ್ನು ವಾಪಸ್ ಪಡೆದುಕೊಂಡಿದ್ದರು. ಆದರೆ ಅದಾದ ಬಳಿಕ ಕೆವಿನ್ ಪೀಟರ್ಸನ್ ಅವರು ಇಂಗ್ಲೆಂಡ್ ಪರವಾಗಿ ಕೇವಲ ಒಂದು ಟಿ20 ಪಂದ್ಯದಲ್ಲಿ ಮಾತ್ರವೇ ಆಡುವ ಅವಕಾಶ ಪಡೆದುಕೊಂಡಿದ್ದರು. ಅಲ್ಲಿಗೆ ಅವರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚುಟುಕು ಮಾದರಿಯ ವೃತ್ತಿಜೀವನ ಅಂತ್ಯಾಗುತ್ತು.
ಜೆರೋಮ್ ಟೇಲರ್‌ಗೂ ಆಗಿತ್ತು ಮುಖಭಂಗ
ವೆಸ್ಟ್ ಇಂಡೀಸ್‌ನ ಮಾಜಿ ವೇಗದ ಬೌಲರ್ ಜೆರೋಮ್ ಟೇಲರ್ ವೈಟ್‌ಬಾಲ್ ಮಾದರಿಯ ಮೇಲೆ ಗಮನಹರಿಸುವ ದೃಷ್ಟಿಯಿಂದಾಗಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ್ದರು. ಆದರೆ ಅದಾದ ಬಳಿಕ ವಿಂಡೀಸ್‌ನ ಈ ಅನುಭವಿ ವೇಗಿಗೆ ಆಗಿದ್ದು ಆಘಾತಕಾರಿ ಅನುಭವ. ಮುಂದಿನ 14 ತಿಂಗಳುಗಳ ಕಾಲ ವೆಸ್ಟ್ ಇಂಡಿಸ್ ತಂಡದ ಪರವಾಗಿ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶವೂ ಜೆರೋಮ್ ಟೇಲರ್‌ಗೆ ದೊರೆಯಲೇ ಇಲ್ಲ. ಅದಾದ ಬಳಿಕ ಟೆಸ್ಟ್ ನಿವೃತ್ತಿಯನ್ನು ಅವರು ವಾಪಸ್ ಪಡೆದುಕೊಂಡರು. ಆದರೂ ಅವರಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಮತ್ತೆ ಅವಕಾಶ ದೊರೆಯಲೇ ಇಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications