For Quick Alerts
ALLOW NOTIFICATIONS  
For Daily Alerts
 

MCL ಟಿ20 ಲೀಗ್‌: MI ನ್ಯೂಯಾರ್ಕ್ ತಂಡದಲ್ಲಿ ಮುಂಬೈ ಇಂಡಿಯನ್ಸ್‌ನ ಮೂವರು ಮಾಜಿ ಆಟಗಾರರು

UASಯ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿ ಈಗ ಎಲ್ಲರ ಗಮನಸೆಳೆಯುತ್ತಿರುವ ಹೊಚ್ಚ ಹೊಸ ಕ್ರಿಕೆಟ್ ಲೀಗ್. ಈ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಮಾಲೀಕತ್ವದ MI ನ್ಯೂಯಾರ್ಕ್ ತಂಡ ಕಣಕ್ಕಿಳಿಯಲಿದ್ದು ಈಗಾಗಲೇ ತಂಡದ ನಾಯಕ ಹಾಗೂ ಆಟಗಾರರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಸ್ಟಾರ್ ಆಟಗಾರರೇ ತುಂಬಿರುವ ಈ ತಂಡ ಬಲಿಷ್ಠವಾಗಿ ಗೋಚರಿಸುತ್ತಿದೆ.

ಜುಲೈ 13 ಆರಂಭವಾಗಿ 18ರವರೆಗೆ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂನಲ್ಲಿ ಲೀಗ್ ಹಂತದ ಪಂದ್ಯಗಳು ನಡೆಯುತ್ತದೆ. ನಂತರ ಚರ್ಚ್ ಸ್ಟ್ರೀಟ್ ಪಾರ್ಕ್‌ನಲ್ಲಿ ಉಳಿದ ಪಂದ್ಯಗಳು ಮುಂದುವರಿಯಲಿದೆ. ಪ್ಲೇಆಫ್ ಮತ್ತು ಫೈನಲ್‌ಗಳು ಜುಲೈ 27 ರಿಂದ 30 ರವರೆಗೆ ಡಲ್ಲಾಸ್‌ನಲ್ಲಿ ಆಯೋಜನೆಯಾಗಲಿದೆ. ಒಟ್ಟು ಆರು ತಂಡಗಳು ಭಾಗವಹಿಸಿರುವ ಈ ಟೂರ್ನಿಯಲ್ಲಿ ನಾಲ್ಕು ಫ್ರಾಂಚೈಸಿಗಳ ಮಾಲಿಕತ್ವವನ್ನು ಐಪಿಎಲ್ ತಂಡಗಳ ಮಾಲೀಕರೇ ಹೊಂದಿರುವುದು ವಿಶೇಷ.

These 3 former Mumbai Indians cricketers will play for MI New York in upcoming MLC T20

ಈಟೂರ್ನಿಯಲ್ಲಿ ಭಾಗವಹಿಸಲಿರುವ MI ನ್ಯೂಯಾರ್ಕ್ ತಂಡ ಮುಂಬೈ ಇಂಡಿಯನ್ಸ್ ಮಾಲಿಕತ್ವ ಹೊಂದಿರುವ ತಂಡ ಎಂಬುದು ಈಗಾಗಲೇ ತಿಳಿದಿದೆ. ಈ ತಂಡದಲ್ಲಿ ಐಪಿಎಲ್‌ನಲ್ಲಿ ಮುಂಬೈ ಇಮಡಿಯನ್ಸ್ ತಂಡದಲ್ಲಿ ಈ ಹಿಂದೆ ಆಡಿದ್ದ ಮೂವರು ಆಟಗಾರರು ಕೂಡ ಭಾಗವಹಿಸುತ್ತಿದ್ದಾರೆ. ಆ ಮೂವರು ಆಟಗಾರರ ಮಾಹಿತಿ ಇಲ್ಲಿದೆ. ಮುಂದೆ ಓದಿ..

MI ನ್ಯೂಯಾರ್ಕ್ ತಂಡದ ನಾಯಕ ಕಿರಾನ್ ಪೊಲಾರ್ಡ್

ವೆಸ್ಟ್ ಇಂಡಿಸ್‌ನ ಚುಟುಕು ಕ್ರಿಕೆಟ್ ದಿಗ್ಗಜ ಕೀರನ್ ಪೊಲಾರ್ಡ್ ಐಪಿಎಲ್‌ನಲ್ಲಿ 2010 ರಿಂದ 2022ರವರೆಗೆ ಮುಂಬೈ ಇಂಡಿಯನ್ಸ್ ತಮಡದ ಬೆನ್ನೆಲುಬಾಗಿದ್ದರು. ಮುಂಬೈ ಇಂಡಿಯನ್ಸ್ ತಂಡ ಐದು ಚಾಂಪಿಯನ್ ಆಗುವಲ್ಲಿ ಪೊಲಾರ್ಡ್ ಪಾತ್ರ ನಿರ್ಣಾಯಕವಾಗಿತ್ತು. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಪೊಲಾರ್ಡ್ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿಯೂ ತಂಡವನ್ನು ಮುನ್ನಡೆಸಿದ್ದರು. ಐಪಿಎಲ್‌ನಲ್ಲಿ ನಿವೃತ್ತಿ ಘೋಷಿಸಿರುವ ಪೊಲಾರ್ಡ್ ಈ ಬಾರಿ ಬ್ಯಾಟಿಂಗ್ ಕೋಚ್ ಆಗಿ ತಂಡಕ್ಕೆ ನೆರವಾಗಿದ್ದರು. ಆದರೆ MLCಯಲ್ಲಿ MI ನ್ಯೂಯಾರ್ಕ್ ತಂಡವನ್ನು ಪೊಲಾರ್ಡ್ ನಾಯಕನಾಗಿ ಮುನ್ನಡೆಸಲಿದ್ದಾರೆ.

ಕಿವೀಸ್ ವೇಗಿ ಟ್ರೆಂಟ್ ಬೋಲ್ಟ್

ನ್ಯೂಜಿಲೆಂಡ್ ವೇಗಿ ಟ್ರೆಂಟ್ ಬೋಲ್ಟ್ 2020 ರಿಂದ 2021ರವರೆಗೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡಿದ್ದಾರೆ. ಎಡಗೈ ವೇಗಿಯಾಗಿರುವ ಬೋಲ್ಟ್ ಐಪಿಎಲ್ 2020ರಲ್ಲಿ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಮಹತ್ವದ ಪಾತ್ರವಹಿಸಿದ್ದರು. ಬೋಲ್ಟ್ ಈಗ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಭಾಗವಾಗಿದ್ದಾರೆ. ಆದರೆ ಅವರು ಯುಎಸ್‌ಎ ಟಿ 20 ಲೀಗ್‌ನಲ್ಲಿ ಎಂಐ ಜೆರ್ಸಿಯನ್ನು ಧರಿಸುವುದು ನಿಶ್ಚಿತವಾಗಿದೆ.

ವಿಕೆಟ್ ಕೀಪರ್ ಬ್ಯಾಟರ್ ನಿಕೋಲಸ್ ಪೂರನ್

ವೆಸ್ಟ್ ಇಂಡೀಸ್‌ನ ಮಾಜಿ ನಾಯಕ ನಿಕೋಲಸ್ ಪೂರನ್ ಕೂಡ ಎಂಎಲ್‌ಸಿಯಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಗೆ ಸೇರಿಕೊಂಡಿದ್ದಾರೆ. ಪೂರನ್ 2017 ರಲ್ಲಿ ಮುಂಬೈ ಇಂಡಿಯನ್ಸ್ ಐಪಿಎಲ್ ತಂಡದ ಭಾಗವಾಗಿದ್ದು ಚಾಂಪಿಯನ್ ಪಟ್ಟವನ್ನು ಗೆದ್ದಿದ್ದರು. ಆದರೆ ಐಪಿಎಲ್‌ನಲ್ಲಿ ಅವರಿಗೆ ಫ್ರಾಂಚೈಸಿ ಪರ ಆಡುವ ಅವಕಾಶ ಸಿಕ್ಕಿರಲಿಲ್ಲ.

Story first published: Thursday, June 15, 2023, 19:14 [IST]
Other articles published on Jun 15, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+