For Quick Alerts
ALLOW NOTIFICATIONS  
For Daily Alerts
 

ದುರದೃಷ್ಟವಂತರು!: ಐಪಿಎಲ್ ಇತಿಹಾಸದ ನಾಲ್ವರು ನತದೃಷ್ಟ ಕ್ರಿಕೆಟಿಗರು ಇವರು!!

ಟಿ20 ಲೀಗ್‌ಗಳ ಅಬ್ಬರ ಹೆಚ್ಚಾಗುತ್ತಿರುವ ಈ ಕಾಲದಲ್ಲಿಯೂ ಐಪಿಎಲ್ ವಿಶ್ವದ ನಂಬರ್ ಒನ್ ಟಿ20 ಲೀಗ್ ಆಗಿಯೇ ಉಳಿದುಕೊಂಡಿದೆ. ಉಳಿದ ಯಾವ ಲೀಗ್ ಕೂಡ ಐಪಿಎಲ್‌ನ ಜನಪ್ರೊಯತೆಯ ಸನಿಹದಲ್ಲಿಯೂ ಇಲ್ಲ ಎಂಬುದು ಅತ್ಯಂತ ಸ್ಪಷ್ಟ. ವಿವಿಧ ದೇಶಗಳ ನೂರಾರು ಕ್ರಿಕೆಟಿಗರು ಈ ಟೂರ್ನಿಯ ಭಾಗವಾಗಿದ್ದು ಬಹುತೇಕ ಭರಪೂರ ಮನರಂಜನೆ ನೀಡುವ ಟೂರ್ನಿಯಾಗಿದೆ ಐಪಿಎಲ್. 2008 ರಲ್ಲಿ ಅಸ್ತಿತ್ವಕ್ಕೆ ಬಂದ ಐಪಿಎಲ್ ಭಾರತೀಯ ಯುವ ಆಟಗಾರರಿಗೆ ಮಾತ್ರವಲ್ಲದೆ ವಿದೇಶಗಳ ಆಟಗಾರರಿಗೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ದೊರೆತ ಅದ್ಭುತ ವೇದಿಕೆಯಾಗಿದೆ.

ಈಗಾಗಲೇ 16 ಆವೃತ್ತಿಗಳನ್ನು ಪೂರೈಸಿರುವ ಐಪಿಎಲ್ ಫ್ರಾಂಚೈಸಿ ಸಾಕಷ್ಟು ಪ್ರಮಾಣದಲ್ಲಿ ಯುವ ಪ್ರತಿಭೆಗಳಿಗೆ ಮತ್ತು ವಿಶ್ವ ಕ್ರಿಕೆಟ್‌ನ ಉದಯೋನ್ಮುಖ ತಾರೆಗಳಿಗೆ ಸೂಕ್ತವಾದ ಅವಕಾಶಗಳನ್ನು ನೀಡಲು ತಮ್ಮ ಅತ್ಯುತ್ತಮ ಪ್ರಯತ್ನವನ್ನು ಮಾಡಿದೆ. ಹಾಗಿದ್ದರೂ ಪ್ರತಿಯೊಬ್ಬ ಕ್ರಿಕೆಟಿಗರಿಗೂ ಸಮಾನ ಅವಕಾಶಗಳು ಸಿಗುವುದಿಲ್ಲ. ಹೀಗೆ ಪ್ರತಿಭೆಯಿದ್ದರೂ ಅವಕಾಶ ಪಡೆಯದ ಐಪಿಎಲ್ ಇತಿಹಾಸದ ನಾಲ್ವರು ದುರದೃಷ್ಟಕರ ಕ್ರಿಕೆಟಿಗರ ಮಾಹಿತಿ ಇಲ್ಲಿದೆ.

These 4 cricketers very talented but very unluckiest cricketers in IPL history

ಬಾಬಾ ಅಪರಾಜಿತ್ ಎಂಬ ದುರದೃಷ್ಟಕರ ಕ್ರಿಕೆಟಿಗ

ಒಬ್ಬ ಕ್ರಿಕೆಟಿಗ ಐದು ಸೀಸನ್‌ಗಳಲ್ಲಿ ಎಂಎಸ್ ಧೋನಿ ತಂಡದ ಭಾಗವಾಗಿರುವುದನ್ನು ಒಮ್ಮೆ ಊಹಿಸಿಕೊಳ್ಳಿ. ಅಂಥಾ ಆಟಗಾರ ವೃತ್ತಿ ಜೀವನದಲ್ಲಿ ಒಂದು ಹಂತಕ್ಕೆ ಸ್ಥಿರತೆನ್ನು ಹೊಂದಿರುತ್ತಾನೆ ಎಂದು ಎಲ್ಲರು ಊಹಿಸಬಹುದು. ಆದರೆ ಇದು ಬಾಬಾ ಅಪರಾಜಿತ್ ವಿಚಾರದಲ್ಲಿ ಸುಳ್ಳಾಗಿದೆ. ತಮಿಳುನಾಡು ಮೂಲದ ಆಟಗಾರ 2013 ರಿಂದ 2015 ರವರೆಗೆ ಸಿಎಸ್‌ಕೆ ತಂಡದಲ್ಲಿ ಮತ್ತು ನಂತರ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದಲ್ಲಿ 2016 ರಿಂದ 2017 ಸ್ಥಾನವನ್ನು ಪಡೆದುಕೊಂಡಿದ್ದರು. ಆದರೆ ಒಂದೇ ಒಂದು ಅವಕಾಶ ಬಾಬಾ ಅಪರಾಜಿತ್‌ಗೆ ದೊರತೆಯಲಿಲ್ಲ.

ಈಶ್ವರ್ ಪಾಂಡೆಯದ್ದೂ ಇದೇ ಕಥೆ

ವೇಗದ ಬೌಲರ್ ಈಶ್ವರ್ ಪಾಂಡೆ ಭಾರತೀಯ ಕ್ರಿಕೆಟ್‌ನಲ್ಲಿ ಭವಿಷ್ಯದ ಆಟಗಾರ ಎನಿಸಿಕೊಳ್ಳುವ ಎಲ್ಲಾ ಅರ್ಹತೆ ಹೊಂದಿದ್ದ ಕ್ರಿಕೆಟಿಗ. 2015ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಅವಕಾಶ ಪಡೆದು ಅದ್ಭುತ ಪ್ರದರ್ಶನ ನೀಡಿ ಗಮನಸೆಳೆದಿದ್ದರು. ಆದರೆ ಫ್ರ್ಯಾಂಚೈಸಿ ಎರಡು ವರ್ಷಗಳ ಅಮಾನತಿಗೆ ಒಳಗಾದ ಬಳಿಕ ಪಾಂಡೆ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡಕ್ಕೆ ಸೇರಿಕೊಂಡಿದ್ದರು. 2016 ಮತ್ತು 2017 ರಲ್ಲಿ ಆರ್‌ಪಿಎಸ್ ತಂಡದಲ್ಲಿ ಬೆಂಚ್ ಬಿಸಿ ಮಾಡಿದ ಈಶ್ವರ್‌ಗೆ ಐಪಿಎಲ್‌ನಲ್ಲಿ ಮತ್ತೆಂದೂ ಅವಕಾಶವೇ ದೊರೆಯಲಿಲ್ಲ.

ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಮೋರ್ನೆ ವ್ಯಾನ್ ವಿಕ್

ದಕ್ಷಿಣ ಆಫ್ರಿಕಾದ ಆಟಗಾರ ಮೋರ್ನೆ ವ್ಯಾನ್ ವಿಕ್ ಐಪಿಎಲ್ ವೃತ್ತಿಜೀವನದಲ್ಲಿ 55.67 ಸರಾಸರಿಯನ್ನು ಹೊಂದಿರುವ ಆಟಗಾರ. 2009ರ ಐಪಿಎಲ್‌ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಪರವಾಗಿ ಆಡಿದ್ದ ವ್ಯಾನ್ ವಿಕ್ ಐದು ಪಂದ್ಯಗಳಲ್ಲಿ 167 ರನ್ ಗಳಿಸಿದರು. ಸ್ಫೋಟಕ ವಿಕೆಟ್-ಕೀಪರ್ ಬ್ಯಾಟರ್ ಆಗಿದ್ದ ಅವರು 2009ರಲ್ಲಿ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಡಕ್ ಔಟ್‌ಗೆ ಬಲಿಯಾದ ಬಳಿಕ ಅವರಿಗೆ ಲೀಗ್‌ನಲ್ಲಿ ಮತ್ತೊಂದು ಅವಕಾಶ ಸಿಗಲೇ ಇಲ್ಲ!

ಡಗ್ ಬ್ರೇಸ್‌ವೆಲ್

ಡಗ್ ಬ್ರೇಸ್‌ವೆಲ್ 2012ರಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ಪರವಾಗಿ ಪದಾರ್ಪಣೆ ಮಾಡಿದ್ದು. ತಾವು ಆಡಿದ ಏಕೈಕ ಪಂದ್ಯವನ್ನು ಆರ್‌ಸಿಬಿ ವಿರುದ್ಧ ಆಡಿದ್ದ ಬ್ರೇಸ್‌ವೆಲ್ ಆ ಪಂದ್ಯದಲ್ಲಿ ವಿರಾಟ್ ಕೊಹ್ಲಿ ವಿಕೆಟ್ ಸೇರಿದಂತೆ ಸೇರಿದಂತೆ ಮೂರು ವಿಕೆಟ್‌ಗಳನ್ನು ಪಡೆದುಕೊಂಡಿದ್ದರು. ನಂತರ ಬ್ಯಾಟಿಂಗ್‌ನಲ್ಲಿಯೂ ಅವರು 9 ಎಸೆತಗಳಲ್ಲಿ 12 ರನ್ ಗಳಿಸಿದರು. ಆದರೆ ಆಘಾತಕಾರಿ ಎನ್ನುವಂತೆ ಬ್ರೇಸ್‌ವೆಲ್ ಮತ್ತೆ ಐಪಿಎಲ್‌ನಲ್ಲಿ ಆಡುವ ಅವಕಾಶ ದೊರೆಯಲಿಲ್ಲ.

Story first published: Friday, June 30, 2023, 20:45 [IST]
Other articles published on Jun 30, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+