Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಈ ಐವರು ಸ್ಟಾರ್ ಕ್ರಿಕೆಟಿಗರು ಮುಂದಿನ ಐಪಿಎಲ್‌ನಲ್ಲಿ ಆಡುವುದು ಅನುಮಾನ: ಈ ಕನ್ನಡಿಗನಿಗೂ ಅವಕಾಶ ಕಷ್ಟ!

ಇಂಡಿಯನ್ ಪ್ರೀಮಿಯರ್ ಲೀಗ್‌ನ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಯಾಗಿರುವ ಕಾರಣ ಮೀಸಲು ದಿನಕ್ಕೆ ಪಂದ್ಯ ನಿಗದಿಯಾಗಿದೆ. ಹೀಗಾಗಿ 2023ರ ಚಾಂಪಿಯನ್ ಯಾರು ಎಂಬ ಕುತೂಹಲ ಹಾಗೆಯೇ ಉಳಿದುಕೊಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಕಾದಾಟ ನಡೆಸುತ್ತಿವೆ. ಈ ಸಂದರ್ಭದಲ್ಲಿ ಉಳಿದ ತಂಡಗಳು ಈಗಾಗಲೇ ಮುಂದಿನ ಆವೃತ್ತಿಯ ಬಗ್ಗೆ ಲೆಕ್ಕಾಚಾರಗಳನ್ನು ಆರಂಭ ಮಾಡಿವೆ.

ಯಾವ ಆಟಗಾರರನ್ನು ಉಳಿಸಿಕೊಳ್ಳಬೇಕು? ಯಾವ ಆಟಗಾರರನ್ನು ತಂಡದಿಂದ ಗೇಟ್‌ಪಾಸ್ ನೀಡಬೇಕು ಎಂಬ ಲೆಕ್ಕಾಚಾರಗಳನ್ನು ಈ ಬಾರಿಯ ಪ್ರದರ್ಶನದ ಆಧಾರದಲ್ಲಿ ಫ್ರಾಂಚೈಸಿಗಳು ಮಾಡಿಕೊಳ್ಳತೊಡಗುವುದು ಸಾಮಾನ್ಯ. ಇನ್ನು 2024ರ ಐಪಿಎಲ್ ಆವೃತ್ತಿಯಲ್ಲಿ ಕೆಲ ಸ್ಟಾರ್ ಆಟಗಾರರು ಕಣಕ್ಕಿಳಿಯುವ ಸಾಧ್ಯತೆ ಬಹುತೇಕ ಕಡಿಮೆಯಿದೆ. ಇದಕ್ಕೆ ಕಾರಣಗಳು ಕೂಡ ಇದೆ. ಹಾಗಾಗಿ ಮುಂದಿನ ಆವೃತ್ತಿಯಲ್ಲಿ ಕಾಣಿಸಿಕೊಳ್ಳದಿರುವ ಸಾಧ್ಯತೆಯಿರುವ ಐವರು ಆಟಗಾರರ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ..

These 5 star cricketers might not play in next season ipl 2024

ಸಿಎಸ್‌ಕೆ ಬ್ಯಾಟರ್ ಅಂಬಾಟಿ ರಾಯುಡು

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅನುಭವಿ ಆಟಗಾರ ಅಂಬಾಟಿ ರಾಯುಡು ಈಗಾಗಲೇ ತಮ್ಮ ನಿವೃತ್ತಿಯನ್ನು ಘೋಷಣೆ ಮಾಡಿದ್ದಾರೆ. ಈ ಬಾರಿಯ ಐಪಿಎಲ್ ತನ್ನ ಕೊನೆಯ ಟೂರ್ನಿ ಎಂದಿರುವ ಅವರು ಗುಜರಾತ್ ಟೈಟನ್ಸ್ ವಿರುದ್ಧದ ಫೈನಲ್ ಪಂದ್ಯ ಅಂತಿಮ ಪಂದ್ಯವಾಗಿರಲಿದೆ ಎಂದಿದ್ದಾರೆ. 2022ರಲ್ಲಿ ನಿವೃತ್ತಿ ಘೋಷಿಸಿದ್ದರೂ ಬಳಿಕ ಯೂ ಟರ್ನ್ ತೆಗೆದುಕೊಂಡು ಮತ್ತೊಂದು ಆವೃತ್ತಿಯಲ್ಲಿ ಕಾಣಿಸಿಕೊಳ್ಳುವ ಮನಸ್ಸು ಮಾಡಿದ್ದರು. ಇದೀಗ ನಿವೃತ್ತಿಯನ್ನು ಖಚಿತಪಡಿಸಿದ್ದಾರೆ.

ಎಂಎಸ್ ಧೋನಿಗೂ ಇದು ಕಡೆಯ ಆವೃತ್ತಿ?

ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಇದು ತನ್ನ ಕೊನೆಯ ಐಪಿಎಲ್ ಆವೃತ್ತಿ ಎಂಬುದನ್ನು ಈವರೆಗೂ ಖಚಿತಪಡಿಸಿಲ್ಲ. ಆದರೆ ಅವರು ಈ ಆವೃತ್ತಿಯ ಬಳಿಕ ಆಟಗಾರನಾಗಿ ಮೈದಾನದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ತೀರಾ ಕಡಿಮೆಯಿದೆ. ಈ ಬಾರಿಯ ಐಪಿಎಲ್‌ನಲ್ಲಿ ಧೋನಿ ಬಹುತೇಕ ಮೊಣಕಾಲಿನ ಗಾಯದ ಮಧ್ಯೆಯೂ ಆಡಿದ್ದರು. ಇದು ಕೂಡ ಅವರ ಕೊನೆಯ ಆವೃತ್ತಿ ಎಂಬ ಸುಳಿವು ನೀಡುತ್ತಿದೆ.

ಕನ್ನಡಿಗ ಮನೀಶ್ ಪಾಂಡೆ ಈ ಬಾರಿಯ ಐಪಿಎಲ್‌ನಲ್ಲಿ ನೀಡಿರುವ ಪ್ರದರ್ಶನ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಆಡಿದ್ದ ಮನೀಶ್ ಪಾಂಡೆ ಸಿಕ್ಕ ಅವಕಾಶವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ವಿಫಲವಾಗಿದ್ದಾರೆ. ಕಳೆದ ಕೆಲ ಆವೃತ್ತಿಗಳಲ್ಲಿ ಮನೀಶ್ ಪಾಂಡೆ ಪ್ರದರ್ಶನ ಕೆಳಮುಖವಾಗುತ್ತಲೇ ಇರುವ ಕಾರಣ 2024ರ ಐಪಿಎಲ್‌ನಲ್ಲಿ ಮನೀಶ್ ಪಾಂಡೆಗೆ ಅವಕಾಶ ದೊರೆಯುವ ಸಾಧ್ಯತೆ ಕಷ್ಟ.

ಅನುಭವಿ ಆಟಗಾರ ಮಂದೀಪ್ ಸಿಂಗ್

ಈ ಬಾರಿಯ ಐಪಿಎಲ್‌ನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಳ್ಳಬಹುದಾದ ಮತ್ತೋರ್ವ ಅನುಭವಿ ಭಾರತೀಯ ಬ್ಯಾಟರ್ ಎಂದರೆ ಅದು ಮಂದೀಪ್ ಸಿಂಗ್. ಕೆಕೆಆರ್ ತಮಡದ ಈ ಸ್ಟಾರ್ ಆಟಗಾರ ಕಳೆದ ಕೆಲ ಆವೃತ್ತಿಗಳಿಂದ ಅತ್ಯಂತ ಕಳಪೆ ಪ್ರದರ್ಶನ ನಿಡುತ್ತಿದ್ದು ಫ್ರಾಂಚೈಸಿಗೆ ಅಕ್ಷರಶಃ ಹೊರೆಯಾಗುತ್ತಿದ್ದಾರೆ. ಮುಂದಿನ ಆವೃತ್ತಿಗೆ ಕಾಂಟ್ರಾಕ್ಟ್ ಪಡೆದುಕೊಳ್ಳುವುದು ಮಂದೀಪ್ ಸಿಂಗ್‌ಗೆ ಕಠಿಣವಾಗಲಿದೆ.

ಇಂಗ್ಲೆಂಡ್ ಸ್ಟಾರ್ ವೇಗಿ ಕ್ರಿಸ್ ಜೋರ್ಡನ್

ಇಂಗ್ಲೆಂಡ್ ತಂಡದ ಹಿರಿಯ ಆಲ್‌ರೌಂಡರ್ ಆಟಗಾರ ಕ್ರಿಸ್ ಜೋರ್ಡನ್ ಈ ಬಾರಿಯ ಐಪಿಎಲ್‌ನಲ್ಲಿ ಅಚ್ಚರಿಯೆನ್ನುವಂತೆ ಅವಕಾಶ ಗಿಟ್ಟಿಸಿಕೊಂಡರು.ಜೋಫ್ಆ ಆರ್ಚರ್ ಗಾಯದಿಂದ ಟೂರ್ನಿಯಿಂದ ಹೊರಗುಳಿದ ಕಾರಣದಿಂದಾಗಿ ಅವರ ಸ್ಥಾನಕ್ಕೆ ಜೋರ್ಡನ್ ಅವಕಾಶ ಗಿಟ್ಟಿಸಿಕೊಂಡರು. ಆದರೆ ಈ ಬಾರಿಯೂ ಜೋರ್ಡನ್ ಮತ್ತೊಮ್ಮೆ ಅಭಿಮಾನಿಗಳನ್ನು ನಿರಾಸೆಗೊಳಿಸಿದ್ದಾರೆ. ಮುಂಬೈ ಇಂಡಿಯನ್ಸ್ ತಮಡ ನಿರೀಕ್ಷಿಸಿದ್ದ ಮಟ್ಟದ ಪ್ರದರ್ಶನ ನೀಡುವಲ್ಲಿ ವಿಫೋಲವಾದರು ಇಂಗ್ಲೆಂಡ್‌ನ ಈ ಸ್ಟಾರ್ ಆಟಗಾರ. ಹೀಗಾಗಿ ಮತ್ತೊಮ್ಮೆ ಅವರಿಗೆ ಐಪಿಎಲ್‌ನಲ್ಲಿ ಅವಕಾಶ ಅಸಾಧ್ಯ!

Story first published: Monday, May 29, 2023, 10:17 [IST]
Other articles published on May 29, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+