ಟೀಮ್ ಇಂಡಿಯಾ ಮತ್ತೊಮ್ಮೆ ವಿಶ್ವಕಪ್ ಗೆಲ್ಲಬೇಕು ಎಂಬ ಹಠ ತೊಟ್ಟಿದೆ. ಈ ದೃಷ್ಟಿಯಲ್ಲಿ ಮ್ಯಾನೇಜ್‌ಮೆಂಟ್ ಹಲವು ಯೋಜನೆಗಳನ್ನು ರೂಪಿಸಿದೆ. ಈ ಪ್ಲ್ಯಾನ್ ಒಂದು ವೇಳೆ ವರ್ಕ್ ಔಟ್ ಆದಲ್ಲಿ, ಟೀಮ್ ಇಂಡಿಯಾದ ಆಲ್ ರೌಂಡರ್ ಸಮಸ್ಯೆ ಸ್ವಲ್ಪ ನಿವಾರಣೆ ಅದಂತೆ ಆಗುತ್ತದೆ. ಹಾಗಿದ್ದರೆ ತಂಡ ಹಾಕಿಕೊಂಡ ಮಾಸ್ಟರ್ ಪ್ಲ್ಯಾನ್ ಏನು ಎಂಬುದರ ಮಾಹಿತಿ ನೋಡೋಣ.
ಇತ್ತೀಚಿನ ದಿನಗಳಲ್ಲಿ ಟೀಮ್ ಇಂಡಿಯಾಕ್ಕೆ ಬಹುವಾಗಿ ಕಾಡುತ್ತಿರುವುದು ಉತ್ತಮ ಆಲ್‌ರೌಂಡರ್ ಗಳ ಕೊರತೆ. ಬ್ಯಾಟಿಂಗ್ ಹಾಗೂ ಸ್ಪಿನ್ನಿಂಗ್ ಆಲ್ ರೌಂಡರ್ ಕೊರತೆ ತಂಡಕ್ಕೆ ಕಾಡುತ್ತಿದೆ. 2007ರ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ನ್ನು ಭಾರತ ಗೆದ್ದು ಕೊಂಡಿತ್ತು. ಆಗ ತಂಡದಲ್ಲಿ ಯುವರಾಜ್ ಸಿಂಗ್ ಎಂಬ ಸ್ಟಾರ್ ಆಲ್ ರೌಂಡರ್ ಗಳು ಇದ್ದರು. ಯುವಿ ಸಮಯ ಸಂದರ್ಭಕ್ಕೆ ತಕ್ಕಂತೆ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ಉತ್ತಮ ಪ್ರದರ್ಶನ ನೀಡಿದ್ದರು. ಸಿಕ್ಸರ್ ಕಿಂಗ್ ನಿವೃತ್ತಿಯ ಬಳಿಕ ಈ ಸ್ಥಾನ ಖಾಲಿ ಉಳಿದಿದೆ. ಈ ಸ್ಥಾನವನ್ನು ತುಂಬಲು ರವೀಂದ್ರ ಜಡೇಜಾ ಶ್ರಮಿಸಿದರು. ಆದರೆ, ಬ್ಯಾಟಿಂಗ್‌ನಲ್ಲಿ ಸ್ಥಿರತೆ ಇಲ್ಲದಿರುವುದು ಸಮಸ್ಯೆಯಾಗಿದೆ. ಹೀಗಾಗಿ ಟೀಮ್ ಮ್ಯಾನೇಜ್ಮೆಂಟ್ ಯುವ ಆಟಗಾರರಿಗೆ ಮಣೆ ಹಾಕಲು ನಿರ್ಧರಿಸಿದೆ.

ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ಆಟಗಾರರಲ್ಲಿ ಸುರೇಶ್ ರೈನ್ ಸಹ ಒಬ್ಬರು. ಇವರು ಸಹ ಮಧ್ಯಮ ಕ್ರಮಾಂಕದಲ್ಲಿ ವೇಗವಾಗಿ ರನ್ ಗಳಿಸುತ್ತಿದ್ದರು, ಮಧ್ಯಮ ಕ್ರಮಾಂಕದಲ್ಲಿ ಬೌಲಿಂಗ್ ಮಾಡುತ್ತಿದ್ದರು. ಯುವಿ ಹಾಗೂ ರೈನಾ ನಿವೃತ್ತಿಯಾದ ಬಳಿಕ ನಿಜಕ್ಕೂ ಈ ಸ್ಥಾನವನ್ನು ತುಂಬ ಬಲ್ಲ ಆಟಗಾರರು ಯಾರು ಎಂಬ ಪ್ರಶ್ನೆ ಮ್ಯಾನೇಜ್‌ಮೆಂಟನ್ನು ಬಹುವಾಗಿ ಕಾಡಿತು. ಈ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನವನ್ನು ಮಾಡಿದೆ.
ಯುವರಾಜ್ ಸಿಂಗ್ ಹಾಗೂ ಸುರೇಶ್ ರೈನಾ ಎಡಗೈ ಬ್ಯಾಟರ್ ಗಳು. ಇವರ ಸ್ಥಾನವನ್ನು ಎಡಗೈ ಆಟಗಾರರೇ ತುಂಬಿದರೆ ಸೂಕ್ತ. ಹೀಗಾಗಿ ಟೀಮ್ ಮ್ಯಾನೇಜ್‌ಮೆಂಟ್ ಇಬ್ಬರು ಯುವ ಆಟಗಾರರ ಮೇಲೆ ದೃಷ್ಟಿ ನೆಟ್ಟಿದೆ. ಈ ಆಟಗಾರರು ತಮ್ಮ ಅತ್ಯುತ್ತಮ ಪ್ರದರ್ಶನದ ಬಲದಿಂದ ದೇಸೀಯ ಟೂರ್ನಿಗಳಲ್ಲಿ ಸದ್ದು ಮಾಡಿದ್ದು, ಈಗ ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿದ್ದಾರೆ. ಐಪಿಎಲ್‌ನಲ್ಲಿ ತಮ್ಮ ತಮ್ಮ ತಂಡದ ಪರ ಅಬ್ಬರಿಸಿದ್ದಾರೆ. ತಂಡಕ್ಕೆ ಅವಶ್ಯಕತೆ ಇದ್ದಾಗ ಬಿಗ್ ಹಿಟ್ ಮೂಲಕ ನೆರವಾಗಿದ್ದಾರೆ. ಈ ಆಟಗಾರರನ್ನೇ ಬಳಸಿಕೊಂಡ ಮ್ಯಾನೇಜ್‌ಮೆಂಟ್ ಫ್ಯುಚರ್ ಸ್ಟಾರ್ ಗಳನ್ನು ನಿರ್ಮಿಸುವ ಕನಸು ಕಂಡಿದೆ. ಅಷ್ಟಕ್ಕೂ ಈ ಆಟಗಾರರು ಬೇರೆ ಯಾರು ಅಲ್ಲ, ತಿಲಕ್ ವರ್ಮಾ ಹಾಗೂ ಯಶಸ್ವಿ ಜೈಸ್ವಾಲ್.
ಮುಂಬೈ ಇಂಡಿಯನ್ಸ್ ತಂಡದಲ್ಲಿ ಕಾಣಿಸಿಕೊಂಡಿರುವ ತಿಲಕ್ ವರ್ಮಾ ಸಿಕ್ಸರ್ ಗಳ ಮೂಲಕ ಹೆಸರುವಾಸಿ. ಇನ್ನು ಯಶಸ್ವಿ ಜೈಸಲ್ವಾ ಸಹ ಸ್ಟಾರ್ ಓಪನಿಂಗ್ ಬ್ಯಾಟರ್. ಬಿಗ್ ಇನ್ನಿಂಗ್ಸ್ ಕಟ್ಟುವಲ್ಲಿ ಈ ಇಬ್ಬರೂ ಆಟಗಾರರು ನಿಸ್ಸೀಮರು. ತಂಡಕ್ಕೆ ಅಗತ್ಯ ಬಿದ್ದಾಗ ಈ ಆಟಗಾರರು ಬೌಲಿಂಗ್ ಸಹ ಮಾಡಬಲ್ಲರು.
ಯಶಸ್ವಿ ಜೈಸ್ವಾಲ್ ಲಿಸ್ಟ್ ಎ ಕ್ರಿಕೆಟ್‌ನಲ್ಲಿ 32 ಪಂದ್ಯಗಳನ್ನು ಆಡಿದ್ದು, 7 ವಿಕೆಟ್ ಪಡೆದಿದ್ದಾರೆ. ಮತ್ತೊಂದೆಡೆ, ತಿಲಕ್ ವರ್ಮಾ ಅವರ ಲಿಸ್ಟ್ ಎ ನಲ್ಲಿ 25 ಪಂದ್ಯಗಳಲ್ಲಿ 8 ವಿಕೆಟ್ ಕಬಳಿಸಿದ್ದಾರೆ. ಅಂಡರ್-19 ಕ್ರಿಕೆಟ್‌ನಲ್ಲಿ ತಿಲಕ್ ಬೌಲಿಂಗ್‌ನಲ್ಲೂ ತಂಡಕ್ಕೆ ನೆರವಾಗಿದ್ದಾರೆ. ಯಶಸ್ವಿ 2018 ರಿಂದ 2020 ರವರೆಗೆ 27 ಪಂದ್ಯಗಳಲ್ಲಿ 12 ವಿಕೆಟ್ ಪಡೆದಿದ್ದಾರೆ. ಇನ್ನು ತಿಲಕ್ 2018 ರಿಂದ 2020 ರವರೆಗೆ 19 ವರ್ಷದೊಳಗಿನ ಕ್ರಿಕೆಟ್ ಪಂದ್ಯಗಳ 23 ಪಂದ್ಯಗಳಲ್ಲಿ 7 ವಿಕೆಟ್ ಪಡೆದಿದ್ದಾರೆ.
ಈ ಇಬ್ಬರೂ ಆಟಗಾರರಿಗೆ ಹೆಚ್ಚಿನ ಅವಕಾಶಗಳನ್ನು ನೀಡಿ ಬೌಲಿಂಗ್‌ನಲ್ಲೂ ಹೆಚ್ಚು ಅಭ್ಯಾಸ ಮಾಡಿಸಿ, ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಯಶಸ್ವು ಕಾಣುವ ಇರಾದೆ ಮ್ಯಾನೇಜ್‌ಮೆಂಟ್‌ನದ್ದಾಗಿದೆ.