Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2024: ಈ ಆಟಗಾರರಿಗೆ ಸಿಗಲಿದೆ ಕೋಟಿ ಕೋಟಿ ಹಣ : ಹರಾಜಿನಲ್ಲಿರುವ ಪ್ರಮುಖ ಆಟಗಾರರು ಇವರು

ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ ಹರಾಜಿಗೆ ದಿನಗಣನೆ ಆರಂಭವಾಗಿದೆ. ಸ್ಟಾರ್ ಆಟಗಾರರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಮಾಲೀಕರು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಆಟಗಾರರ ಸದ್ಯದ ಪ್ರದರ್ಶನದ ಆಧಾರದ ಮೇಲೆ ಅವರ ಬೆಲೆ ನಿರ್ಧಾರವಾಗಲಿದೆ. ಇನ್ನು ಭಾರತದಲ್ಲಿ ನಡೆದ ವಿಶ್ವಕಪ್ ನಲ್ಲಿ ಸ್ಥಿರ ಪ್ರದರ್ಶನ ನೀಡಿದ ಆಟಗಾರರಿಗೆ ಬಂಪರ್‌ ಹೊಡೆಯುವ ಸಾಧ್ಯತೆ ಹೆಚ್ಚಿದೆ.

ಈ ಆಟಗಾರರ ಪಟ್ಟಿಯಲ್ಲಿ ಹಲವು ಆಟಗಾರರು ಕಾಣಿಸಿಕೊಳ್ಳುತ್ತಾರೆ. ಅದರಲ್ಲಿ ಕಾಣಿಸಿಕೊಳ್ಳುವ ಪ್ರಮುಖ ಮುವರು ಆಟಗಾರರು ಬಿಡ್‌ ಅಂಗಳಕ್ಕೆ ಎಂಟ್ರಿ ನೀಡುತ್ತಿದ್ದಂತೆ ಮಾಲೀಕರು ಹಣದ ಹೊಳೆಯನ್ನು ಹರಿಸುವ ಸಾಧ್ಯತೆ ಇದೆ.

 These Players Could Be the Most Expensive in the IPL 2024 Auction

ವಿಶ್ವಕಪ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಸ್ಟಾರ್ ಆಟಗಾರರು ಜೇಬು ತುಂಬ ಹಣವನ್ನು ಇಳಿಸಿಕೊಳ್ಳುವ ಸಾಧ್ಯತೆ ಇದೆ. ಈ ಆಟಗಾರರ ಪಟ್ಟಿಯಲ್ಲಿ ಎದ್ದು ಕಾಣುವ ಮೂರು ಹೆಸರುಗಳು ನಿಜಕ್ಕೂ ಮಾಲೀಕರ ಚಿತ್ತ ಕದ್ದಿವೆ. ಈ ಮೂವರು ವಿದೇಶಿ ಆಟಗಾರರು ಎಂಬುದೇ ಪ್ರಮುಖ ಅಂಶ. ವಿಶ್ವಕಪ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ ಆಟಗಾರರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಫ್ರಾಂಚೈಸಿಗಳು ಯೋಜನೆ ರೂಪಿಸಿಕೊಂಡಿದ್ದಾರೆ.

ಡಿಸೆಂಬರ್‌ 19 ರಂದು ದುಬೈನಲ್ಲಿ ನಡೆಯುವ ಹರಾಜಿನಲ್ಲಿ ವಿಶ್ವ ವಿಜೇತ ತಂಡದ ಸದಸ್ಯ ಟ್ರಾವಿಸ್‌ ಹೆಡ್‌, ನ್ಯೂಜಿಲೆಂಡ್ ತಂಡದ ಯುವ ಆಟಗಾರ ರಚಿನ್ ರವೀಂದ್ರ, ದಕ್ಷಿಣ ಆಫ್ರಿಕಾದ ಜೆರಾಲ್ಡ್ ಕೊಯೆಟ್ಜಿ ಅವರ ಹೆಸರುಗಳು ಸೇರಿವೆ. ಈ ಮೂವರೂ ಈ ಬಾರಿಯ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು, ಐಪಿಎಲ್ ಹರಾಜಿನ ವೇಳೆ ಈ ಮಂದಿ ಕೇವಲ ಒಂದೇ ರಾತ್ರಿಯಲ್ಲಿ ಕೋಟ್ಯಂತರ ರೂಪಾಯಿಗಳ ಒಡೆಯರಾಗಬಹುದು.

ಟ್ರಾವಿಸ್ ಹೆಡ್‌

ವಿಶ್ವ ವಿಜೇತ ತಂಡದ ಸದಸ್ಯ ಟ್ರಾವಿಸ್‌ ಹೆಡ್‌, ತಮ್ಮ ಬಿರುಸಿನ ಬ್ಯಾಟಿಂಗ್ ಶೈಲಿಯಿಂದಲೇ ಎಲ್ಲರ ಗಮನ ಸೆಳೆದಿದ್ದಾರೆ. ಏಕದಿನ ವಿಶ್ವಕಪ್ ನಲ್ಲಿ ಆಡಿದ ಆರೇ ಪಂದ್ಯಗಳಲ್ಲಿ 54.83 ಸರಾಸರಿಯಲ್ಲಿ 329 ರನ್ ಸಿಡಿಸಿದ್ದಾರೆ. ಅಲ್ಲದೆ ಇವರ ಭರ್ಜರಿ ಪ್ರದರ್ಶನದಲ್ಲಿ ಎರಡು ಶತಕಗಳು ಹಾಗೂ ಒಂದು ಅರ್ಧಶತಕಗಳು ಸೇರಿವೆ.

ಟ್ರಾವಿಸ್‌ ಹೆಡ್‌ ಒಬ್ಬ ಬಿಗ್ ಮ್ಯಾಚ್ ಪ್ಲೇಯರ್‌ ಎಂಬುದನ್ನು ತಮ್ಮನ್ನು ತಾವೇ ಸಾಬೀತು ಮಾಡಿಕೊಂಡಿದ್ದಾರೆ. ವಿಶ್ವಕಪ್‌ ನ ಸೆಮಿಫೈನಲ್‌ ಹಾಗೂ ಫೈನಲ್‌ ನಲ್ಲಿ ಮನಮೋಹಕ ಬ್ಯಾಟಿಂಗ್ ನಡೆಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದ ಇವರು ಐಪಿಎಲ್‌ ನಲ್ಲಿ ಹಣದ ಮೂಟೆಯನ್ನೇ ತಮ್ಮ ಬ್ಯಾಂಕ್‌ ಖಾತೆಗೆ ಹಾಕಿಕೊಳ್ಳುವ ಸಾಧ್ಯತೆ ಇದೆ. ಇವರು ಎಂಟ್ರಿಯಿಂದ ತಂಡ ಬಲಿಷ್ಠ ಓಪನರ್ ಒಬ್ಬರನ್ನು ತಂಡಕ್ಕೆ ಸೇರಿಸಿಕೊಂಡಂತೆ ಆಗುತ್ತದೆ. ಹೆಡ್ ಬೌಲಿಂಗ್ ನಲ್ಲಿ ಕೂಡ ಪ್ರಮುಖ ಪಾತ್ರವನ್ನು ವಹಿಸಬಹುದು. ವಿಕೆಟ್ ಕಬಳಿಸಿ ತಂಡದ ಗೆಲುವಿನಲ್ಲಿ ಪಾತ್ರವಹಿಸಿದರು.

ರಚಿನ್ ರವೀಂದ್ರ

ಬೆಂಗಳೂರು ಮೂಲದ ಕಿವೀಸ್ ಆಟಗಾರ ರಚಿನ್ ರವೀಂದ್ರ ಈ ಬಾರಿ ವಿಶ್ವಕಪ್ ನಲ್ಲಿ ಹೆಚ್ಚು ಗಮನ ಸೆಳೆದ ಆಟಗಾರ. ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು ಅಬ್ಬರಿಸಿರುವ ರಚಿನ್‌ ತಂಡಕ್ಕೆ ಟಾಪ್‌ ಆರ್ಡರ್‌ ನಲ್ಲಿ ಆಧಾರವಾಗಿದ್ದರು. ನಾಯಕ ಕೇನ್ ವಿಲಿಯಮ್ಸನ್‌ ಅವರ ಅನುಪಸ್ಥಿತಿಯಲ್ಲಿ ತಂಡ ಸೇರಿಕೊಂಡ ರಚಿನ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅವರು 10 ಪಂದ್ಯಗಳಲ್ಲಿ 64.22 ಸರಾಸರಿ ಮತ್ತು 106.44 ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 578 ರನ್ ಗಳಿಸಿದ್ದಾರೆ. 3 ಶತಕ ಮತ್ತು 2 ಅರ್ಧ ಶತಕಗಳನ್ನು ಸಿಡಿಸಿದ್ದಾರೆ. ಅಲ್ಲದೆ ಬೌಲಿಂಗ್ ನಲ್ಲೂ ತಂಡಕ್ಕೆ ನೆರವಾಗಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ. ರಚಿನ್‌ ವಿಶ್ವಕಪ್ ನಲ್ಲಿ ಒಟ್ಟು 5 ವಿಕೆಟ್‌ ಪಡೆದಿದ್ದಾರೆ.

ಜೆರಾಲ್ಡ್ ಕೊಯೆಟ್ಜಿ

ದಕ್ಷಿಣ ಆಫ್ರಿಕಾದ ಈ ಯುವ ಬೌಲರ್ ಜೆರಾಲ್ಡ್ ಕೊಯೆಟ್ಜಿ ಭಾರತದ ಪಿಚ್‌ಗಳಲ್ಲಿ ತಮ್ಮ ನೈಜ ವೇಗದ ಬೌಲಿಂಗ್‌ನಿಂದ ಎಲ್ಲರನ್ನೂ ಆಕರ್ಷಿಸಿದ್ದಾರೆ. ಈ ಬಾರಿಯ ಏಕದಿನ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಐದನೇ ಬೌಲರ್ ಎಂಬ ಖ್ಯಾತಿ ಪಡೆದಿದ್ದಾರೆ. ಅವರು 8 ಪಂದ್ಯಗಳಲ್ಲಿ 19.80 ರ ಸರಾಸರಿಯಲ್ಲಿ ಒಟ್ಟು 20 ವಿಕೆಟ್‌ಗಳನ್ನು ಪಡೆದಿದ್ದಾರೆ. ಐಪಿಎಲ್‌ನಲ್ಲಿ, ಪ್ರತಿ ತಂಡವು ಯಾವಾಗಲೂ ಸರಿಯಾದ ಲೈನ್ ಮತ್ತು ಲೆಂಗ್ತ್‌ನಲ್ಲಿ ಬೌಲಿಂಗ್ ಮಾಡುವ ವೇಗದ ಬೌಲರ್ ಅನ್ನು ಬಯಸುತ್ತದೆ, ಆದರೆ ವಿದೇಶಿ ಪಿಚ್‌ಗಳಲ್ಲಿ ಅದ್ಭುತ ಪ್ರದರ್ಶನ ನೀಡುವ ವಿಶ್ವದಾದ್ಯಂತದ ವೇಗದ ಬೌಲರ್‌ಗಳು ಐಪಿಎಲ್ ಸಮಯದಲ್ಲಿ ಭಾರತೀಯ ಪಿಚ್‌ಗಳಲ್ಲಿ ಪರಿಣಾಮಕಾರಿಯಾಗಿರುವುದಿಲ್ಲ.

Story first published: Friday, December 1, 2023, 23:57 [IST]
Other articles published on Dec 1, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+