ಐಪಿಎಲ್ 2024 ರ ಹರಾಜು ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿದೆ. ಹರಾಜಿನಲ್ಲಿ 333 ಆಟಗಾರರಿಗೆ ಬಿಡ್ಡಿಂಗ್ ನಡೆಯಲಿದೆ. ಅದರ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಐಪಿಎಲ್‌ನಲ್ಲಿ 5 ಆಟಗಾರರು ಮೊದಲ ಬಾರಿಗೆ ಹರಾಜಿನಲ್ಲಿ ತಮ್ಮ ಹೆಸರನ್ನು ನಮೂದಿಸಿಕೊಂಡಿದ್ದಾರೆ. ಈ ಆಟಗಾರರ ಮೇಲೆ ಮಾಲೀಕರು ಹಣದ ಹೊಳೆಯನ್ನು ಹರಿಸುವುದು ಫಿಕ್ಸ್.. ಈ ಆಟಗಾರರು ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ.
ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ನಿಜಕ್ಕೂ ಐಪಿಎಲ್ ಹರಾಜಿಗೆ ಒಂದು ವೇದಿಕೆ ಆಗಿತ್ತು. ಈ ವೇದಿಕೆಯಲ್ಲಿ ಆಟಗಾರರು ಭರ್ಜರಿ ಪ್ರದರ್ಶನ ನೀಡಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅಬ್ಬರಿಸಿರುವ ಆಟಗಾರರಿಗೆ ಈ ಬಾರಿ ಹರಾಜಿನಲ್ಲಿ ಜಾಕ್ ಪಾಟ್ ಹೊಡೆಯುವುದು ಫಿಕ್ಸ್.

ನ್ಯೂಜಿಲೆಂಡ್‌ನ ರಚಿನ್ ರವೀಂದ್ರ ಮೊದಲ ಬಾರಿಗೆ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹರಾಜಿನಲ್ಲಿ ಅವರು ತಮ್ಮ ಮೂಲ ಬೆಲೆಯನ್ನು 50 ಲಕ್ಷ ರೂ. ಎಂದು ನಮೂದಿಸಿಕೊಂಡಿದ್ದಾರೆ. ಅವರು 2023 ರ ಏಕದಿನ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ತಮ್ಮ ಆಲೌರೌಂಡರ್ ಪ್ರದರ್ಶನದ ಬಲದಿಂದ ಎಲ್ಲರ ಚಿತ್ತ ಕದ್ದಿದ್ದಾರೆ. ಇವರು ಆಡಿದ 10 ಪಂದ್ಯಗಳಲ್ಲಿ ಮೂರು ಶತಕ ಸೇರಿದಂತೆ 578 ರನ್ ಸಿಡಿಸಿದ್ದಾರೆ. ಅಲ್ಲದೆ ಬೌಲಿಂಗ್‌ನಲ್ಲೂ ಪರಿಣಾಮಕಾರಿ ಆಗಬಲ್ಲರು ಎಂದು ಸಾಬೀತು ಪಡಿಸಿದ್ದಾರೆ. ಇವರು ಏಕದಿನ ವಿಶ್ವಕಪ್ ನಲ್ಲಿ ಒಟ್ಟು ಐದು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದಾರೆ. ಇವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಮಾಲೀಕರ ಮಧ್ಯೆ ಜಿದ್ದು ಏರ್ಪಡುವುದು ಖಚಿತ.
ದಕ್ಷಿಣ ಆಫ್ರಿಕಾದ 23 ವರ್ಷದ ಯುವ ವೇಗದ ಬೌಲರ್ ಗೆರಾಲ್ಡ್ ಕೋಟ್ಜಿ 2023 ರ ODI ವಿಶ್ವಕಪ್‌ನಲ್ಲಿ ಉತ್ತಮ ಬೌಲಿಂಗ್ ಪ್ರದರ್ಶಿಸಿದ್ದಾರೆ. ವಿಶ್ವಕಪ್‌ನ 8 ಪಂದ್ಯಗಳಲ್ಲಿ ಇವರು 20 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಪವರ್ ಪ್ಲೇನಲ್ಲಿ ಇವರು ಮನಮೋಹಕ ದಾಳಿಯನ್ನು ಸಂಘಟಿಸುತ್ತಾರೆ. ಇವರ ಎಸೆತಗಳನ್ನು ಆಡುವುದು ಬ್ಯಾಟರ್‌ಗಳಿಗೆ ಸವಾಲು. ಹರಾಜಿನಲ್ಲಿ ಅವರು ಇವರ ಬೇಸ್ ಪ್ರೈಸ್ 2 ಕೋಟಿ ರೂ.

2023ರ ಏಕದಿನ ವಿಶ್ವಕಪ್‌ನಲ್ಲಿ ಅಜ್ಮತುಲ್ಲಾ ಒಮರ್ಜಾಯ್ ಅಫ್ಘಾನಿಸ್ತಾನ ಪರ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅವರು 2023 ರ ODI ವಿಶ್ವಕಪ್‌ನ 9 ಪಂದ್ಯಗಳಲ್ಲಿ 353 ರನ್ ಸಿಡಿಸಿದ್ದಾರೆ, ಇದರಲ್ಲಿ ಮೂರು ಅರ್ಧ ಶತಕಗಳು ಸೇರಿವೆ. ಇದಲ್ಲದೆ, ಅವರು ಪಾರ್ಟ್-ಟೈಮರ್ ಬೌಲರ್ ಪಾತ್ರವನ್ನು ಸಹ ನಿರ್ವಹಿಸಬಹುದು. ಹೀಗಾಗಿ ಐಪಿಎಲ್ ಹರಾಜಿನಲ್ಲಿ ಅವರ ಮಾರಾಟ ಬಹುತೇಕ ಖಚಿತ ಎಂದು ಪರಿಗಣಿಸಲಾಗಿದೆ.
ಜೋಸ್ ಇಂಗ್ಲಿಷ್ ಕೆಳ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟರ್. ಅವರ ವಿಕೆಟ್ ಕೀಪಿಂಗ್ ಕೌಶಲ್ಯವೂ ಅದ್ಭುತ. 2023ರ ಏಕದಿನ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಪರ 159 ರನ್ ಗಳಿಸಿದ್ದಾರೆ. ಇದಲ್ಲದೇ ಭಾರತ ವಿರುದ್ಧದ ಟಿ20 ಸರಣಿಯಲ್ಲೂ ಶತಕ ಸಿಡಿಸಿದ್ದರು. ಇದುವರೆಗೆ 15 ಟಿ20 ಪಂದ್ಯಗಳಲ್ಲಿ 387 ರನ್ ಗಳಿಸಿದ್ದಾರೆ. ಹರಾಜಿನಲ್ಲಿ ಅವರು ತಮ್ಮ ಮೂಲ ಬೆಲೆಯನ್ನು 2 ಕೋಟಿ ರೂ.

2023ರ ಏಕದಿನ ವಿಶ್ವಕಪ್‌ನಲ್ಲಿ ಶ್ರೀಲಂಕಾದ ದಿಲ್ಶನ್ ಮಧುಶಂಕ ಅದ್ಭುತ ಪ್ರದರ್ಶನ ನೀಡಿದ್ದಾರೆ. 2023ರ ಏಕದಿನ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ ಮೂರನೇ ಬೌಲರ್. ಅವರು 9 ಪಂದ್ಯಗಳಲ್ಲಿ 21 ವಿಕೆಟ್ ಪಡೆದಿದ್ದಾರೆ. ಶ್ರೀಲಂಕಾ ಪರ ಅತಿ ದೊಡ್ಡ ಮ್ಯಾಚ್ ವಿನ್ನರ್ ಆಗಿ ದಿಲ್ಶನ್ ಹೊರಹೊಮ್ಮಿದ್ದು, ಹರಾಜಿನಲ್ಲಿ ಫ್ರಾಂಚೈಸಿ ಚಿತ್ತ ಕದಿದ್ದಾರೆ.