Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಧೋನಿಗಿಂತ ಕೊಹ್ಲಿ ಯಶಸ್ವಿ ನಾಯಕ ಎಂದು ಹೇಳುತ್ತಿವೆ ಈ ಅಂಕಿ ಅಂಶಗಳು!

These statistics are telling that Kohli is more successful captain than MS Dhoni

ವಿರಾಟ್ ಕೊಹ್ಲಿ ಮತ್ತು ಮಹೇಂದ್ರ ಸಿಂಗ್ ಧೋನಿ ಇಬ್ಬರು ಸಹ ಭಾರತ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕರು. ಭಾರತ ಹಲವಾರು ಕನಸಿನ ಟ್ರೋಫಿಗಳನ್ನು ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವದಲ್ಲಿ ಗೆದ್ದಿದೆ. ವಿರಾಟ್ ಕೊಹ್ಲಿ ಅವರ ನಾಯಕತ್ವದಲ್ಲಿ ಟೀಮ್ ಇಂಡಿಯಾ ಅನೇಕ ಸರಣಿಗಳನ್ನು ವಶಪಡಿಸಿಕೊಂಡು ವಿಶ್ವದ ಬಲಿಷ್ಠ ತಂಡವಾಗಿ ನಿಂತಿದೆ.

ಹೀಗಿರುವಾಗ ಇಬ್ಬರಲ್ಲಿ ಯಶಸ್ವಿ ನಾಯಕ ಯಾರು ಎಂಬ ಚರ್ಚೆ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಆಗುತ್ತಲೇ ಇರುತ್ತವೆ. ಹೀಗೆ ಯಶಸ್ವಿ ನಾಯಕ ಯಾರು ಎಂದು ಗೆಲುವು ಮತ್ತು ಸೋಲುಗಳ ಅಂಕಿ ಅಂಶವನ್ನು ಪರಿಶೀಲಿಸಿದಾಗ ನಮಗೆ ಸಿಗುವ ಉತ್ತರ ಈ ಕೆಳಕಂಡಂತಿದೆ ನೋಡಿ.

ಮಹೇಂದ್ರ ಸಿಂಗ್ ಧೋನಿ ಅವರು ನಾಯಕನಾಗಿ ಒಟ್ಟು 332 ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದಾರೆ. ಈ 332 ಪಂದ್ಯಗಳಲ್ಲಿ 178 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಿದರೆ, 120 ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿದೆ. ಹೀಗಾಗಿ ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಶೇಕಡಾ 53.61ರಷ್ಟು ಗೆಲುವನ್ನು ಸಾಧಿಸಿದೆ.

ವಿರಾಟ್ ಕೊಹ್ಲಿ ಅವರ ನಾಯಕತ್ವದಲ್ಲಿ ಟೀಮ್ ಇಂಡಿಯಾ ಇದುವರೆಗೂ ಒಟ್ಟು 198 ಪಂದ್ಯಗಳನ್ನು ಆಡಿದ್ದು 127 ಪಂದ್ಯಗಳಲ್ಲಿ ಜಯವನ್ನು ಸಾಧಿಸಿದೆ ಮತ್ತು ಕೇವಲ 54 ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿದೆ. ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಶೇಕಡಾ 64.14ರಷ್ಟು ಗೆಲುವನ್ನು ಸಾಧಿಸಿದೆ.

ಮಹೇಂದ್ರ ಸಿಂಗ್ ಧೋನಿ ಅವರಿಗಿಂತ ವಿರಾಟ್ ಕೊಹ್ಲಿ ಅವರು ಹೆಚ್ಚಿನ ಸಕ್ಸಸ್ ರೇಟ್ ಹೊಂದಿದ್ದು ಮುಂಬರುವ ಪಂದ್ಯಗಳಲ್ಲಿ ಇನ್ನೂ ಹೆಚ್ಚಿನ ಪಂದ್ಯಗಳನ್ನು ಗೆದ್ದು ಹೊಸ ದಾಖಲೆ ಬರೆಯಲಿದ್ದಾರಾ ಎಂಬುದನ್ನು ಕಾದು ನೋಡಬೇಕು.

Story first published: Thursday, March 25, 2021, 17:40 [IST]
Other articles published on Mar 25, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+