ಭಾರತ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದೆ. ಆಡಿದ ಐದು ಪಂದ್ಯಗಳಲ್ಲಿ ನಾಲ್ಕೂ ಪಂದ್ಯ ಗೆದ್ದ ಟೀಮ್ ಇಂಡಿಯಾ ಅಬ್ಬರಿಸಿದೆ. ಆತಿಥೇಯ ತಂಡದ ಪರ ಭರವಸೆಯ ಆಟಗಾರರು ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಆಡಿ ಸೈ ಎನಿಸಿಕೊಂಡಿದ್ದಾರೆ.
ಟೀಮ್ ಇಂಡಿಯಾ 2024 ಟಿ20 ವಿಶ್ವಕಪ್ ತಯಾರಿ ನಡೆಸಿದೆ. ಈ ನಿಟ್ಟಿನಲ್ಲಿ ತಂಡದಲ್ಲಿ ಖಾಲಿ ಇರುವ ಸ್ಲಾಟ್ ಗಳನ್ನು ಫಿಲ್ ಮಾಡಲು ಯೋಜನೆ ರೂಪಿಸಿಕೊಳ್ಳುತ್ತಿದೆ. ಇನ್ನು ಟಿ20 ವಿಶ್ವಕಪ್ ಗೆ ಬೆರಳೇಣಿಕೆ ಪಂದ್ಯಗಳು ಮಾತ್ರ ಉಳಿದಿದ್ದು, ಈ ಅವಧಿಯಲ್ಲಿ ಟೀಮ್ ಇಂಡಿಯಾ ತನ್ನ ಸುಸ್ಥಿರ ತಂಡವನ್ನು ಪ್ರಕಟಿಸಬೇಕಿದೆ.

ತವರಿನಲ್ಲಿ ನಡೆದ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ಪರ ಹಿರಿಯ ಆಟಗಾರರು ವಿಶ್ರಾಂತಿ ಪಡೆದಿದ್ದರು. ಇದೇ ಅವಕಾಶವನ್ನು ಬಳಸಿಕೊಂಡ ಯುವ ಆಟಗಾರರು ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವಂತಹ ಪ್ರದರ್ಶನ ನೀಡಿದರೆ, ಇನ್ನು ಕೆಲವು ಆಟಗಾರರು ನಿರಾಸೆ ಕಡಲಿನಲ್ಲಿ ಪಯಾಣ ಬೆಳೆಸಿದ್ದಾರೆ.
ಈ ಪಟ್ಟಿಯಲ್ಲಿ ಎದ್ದು ಕಾಣುವ ಹೆಸರು ಯಶಸ್ವಿ ಜೈಸ್ವಾಲ್.. ಟೀಮ್ ಇಂಡಿಯಾ ಭರವಸೆಯ ಆಟಗಾರ ಎಂದೇ ಗುರುತಿಸಲ್ಪಟ್ಟಿರುವ ಇವರು, ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ್ದಾರೆ.

ಯಶಸ್ವಿ ಅವರಿಗೆ ಆಸೀಸ್ ವಿರುದ್ಧ ಐದೂ ಟಿ20 ಪಂದ್ಯಗಳನ್ನು ಆಡುವ ಅವಕಾಶ ಲಭಿಸಿತು. ಆದರೆ ಅವರು ತಮ್ಮ ಘನತೆಗೆ ತಕ್ಕ ಆಟವನ್ನು ಆಡುವಲ್ಲಿ ಎಡವಿದ್ದಾರೆ. ಜೈಸ್ವಾಲ್ ಆಡಿದ 5 ಪಂದ್ಯಗಳಲ್ಲಿ 138 ರನ್ ಸಿಡಿಸಿದ್ದಾರೆ.
ಇನ್ನು ನಿರಾಸೆಯನ್ನು ಅನುಭವಿಸಿದ ಆಟಗಾರರ ಪಟ್ಟಿಯಲ್ಲಿ ಎದ್ದು ಕಾಣುವ ಇನ್ನೊಂದು ಹೆಸರು ತಿಲಕ್ ವರ್ಮಾ. ಮುಂಬೈ ಇಂಡಿಯನ್ಸ್ ಪರ ಧಮಾಕೆದಾರ್ ಪ್ರದರ್ಶನ ನೀಡಿದ್ದರಿಂದಲೇ ತಿಲಕ್‌ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅವಕಾಶ ಲಭಿಸಿತು.

ಆದರೆ ಈ ಅವಶಕಾಶವನ್ನು ಬಳಸಿಕೊಳ್ಳುವಲ್ಲಿ ತಿಲಕ್ ವರ್ಮಾ ವಿಫಲರಾಗಿದ್ದಾರೆ. ಇವರು ಆಸೀಸ್ ವಿರುದ್ಧ ಕೇವಲ ಮೂರು ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದರು. ಅಲ್ಲದೆ 50 ರನ್ ಮಾತ್ರ ಸಿಡಿಸಿ, ತಂಡ ಇಟ್ಟ ನಂಬಿಕೆಗೆ ಪೆಟ್ಟು ನೀಡಿದರು.
ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಕೊನೆಯ ಹೆಸರು ವೇಗಿ ಆವೀಶ್ ಖಾನ್.. ವಿಶ್ವಕಪ್ ತಂಡದಲ್ಲಿ ಆಡುವ ಕನಸು ಕಾಣುತ್ತಿರುವ ಆವೀಶ್ ಖಾನ್‌ಗೆ ಈ ಸರಣಿ ಮಹತ್ವದಾಗಿತ್ತು. ಆದರೆ ಈ ಸರಣಿಯಲ್ಲಿ ಆವೀಶ್ ನಿರಾಶಾದಾಯಕ ಪ್ರದರ್ಶನ ನೀಡಿದ್ದಾರೆ.
ಆವೀಶ್ ಆಡಿದ ಮೂರು ಪಂದ್ಯಗಳಲ್ಲಿ ಕೇವಲ ಎರಡು ವಿಕೆಟ್ ಪಡೆಯುವಲ್ಲಿ ಮಾತ್ರ ಸಫಲರಾಗಿದ್ದಾರೆ. ಹೀಗಾಗಿ ಇವರಿಗೂ ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ನಲ್ಲಿ ಸ್ಥಾನ ಸಿಗುವುದು ಡೌಟ್ ಎಂದೇ ಹೇಳಲಾಗುತ್ತಿದೆ.