For Quick Alerts
ALLOW NOTIFICATIONS  
For Daily Alerts
 

Champions Trophy 2025: ಮಹತ್ವದ ಟೂರ್ನಿ ಬಳಿಕ ಈ 10 ಸೂಪರ್‌ ಸ್ಟಾರ್ಸ್ ನಿವೃತ್ತಿ!

ಐಸಿಸಿಯ ಎರಡನೇ ಅತಿದೊಡ್ಡ ಏಕದಿನ ಟೂರ್ನಿ 2025ರ ಚಾಂಪಿಯನ್ಸ್ ಟ್ರೋಫಿ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಪಾಕಿಸ್ತಾನ-ಯುಎಇ ಆಯೋಜಿಸಿರುವ ಈ ಮೆಗಾ ಟೂರ್ನಿಯಲ್ಲಿ 8 ತಂಡಗಳು ಭಾಗವಹಿಸಲಿವೆ. ಆತಿಥೇಯ ಪಾಕಿಸ್ತಾನವನ್ನು ಹೊರತುಪಡಿಸಿ, ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ತಂಡಗಳು ಆಡಲಿವೆ. ಮೆಗಾ ಟೂರ್ನಿಗಳ ನಂತರ ಕೆಲವು ಸ್ಟಾರ್ ಆಟಗಾರರು ಆಟವನ್ನು ಶಾಶ್ವತವಾಗಿ ತೊರೆಯುವುದು ಕ್ರಿಕೆಟ್‌ನಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಈ ಬಾರಿಯೂ ಸಹ ಇದೇ ರೀತಿಯದ್ದನ್ನು ಕಾಣಬಹುದು.

ಚಾಂಪಿಯನ್ಸ್ ಟ್ರೋಫಿ ಬಳಿಕ 10 ಸ್ಟಾರ್ ಆಟಗಾರರು ಕ್ರಿಕೆಟ್ ವೃತ್ತಿಬದುಕಿಗೆ ತೆರೆ ಎಳೆಯಬಹುದು. ಈ ಸಾಲಿನಲ್ಲಿ ಟೀಮ್ ಇಂಡಿಯಾದ ಕೆಲವು ಸ್ಟಾರ್ ಆಟಗಾರರು ಕೂಡ ಇದ್ದಾರೆ. ಈ ಕುರಿತು ಇಲ್ಲದೆ ಸಂಪೂರ್ಣ ಮಾಹಿತಿ.

These ten superstars could retire after the ICC Champions Trophy 2025

ಫಖರ್ ಜಮಾನ್: ಪಾಕಿಸ್ತಾನದ ಆರಂಭಿಕ ಬ್ಯಾಟರ್ ಫಖರ್ ಜಮಾನ್ ಬಿಗ್ ಇನ್ನಿಂಗ್ಸ್‌ಗಳನ್ನು ಆಡುವುದಕ್ಕೆಗೆ ಹೆಸರುವಾಸಿಯಾಗಿದ್ದಾರೆ. ಕಳೆದ ಬಾರಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಪಾಕಿಸ್ತಾನ ತಂಡಕ್ಕೆ ಫಖರ್ ನಾಯಕರಾಗಿದ್ದರು. ಅವರು ಫೈನಲ್‌ನಲ್ಲಿ ಭಾರತದ ವಿರುದ್ಧ ಅದ್ಭುತ ಶತಕ ಗಳಿಸಿದ್ದರು. ಇತ್ತೀಚಿನ ದಿನಗಳಲ್ಲಿ ವಿವಾದ ಮತ್ತು ಫಿಟ್ನೆಸ್ ಕಾರಣದಿಂದಾಗಿ ಅವರು ತಂಡದಿಂದ ಹೊರಗುಳಿದಿದ್ದಾರೆ. ಫಖರ್ ಅವರಿಗೆ ಸುಮಾರು 35 ವರ್ಷ ವಯಸ್ಸಾಗಿದ್ದು, ಈ ಮೆಗಾ ಟೂರ್ನಿಯಲ್ಲಿ ಅವರು ವಿಫಲವಾದರೆ, ವೃತ್ತಿಜೀವನ ಕೊನೆಗೊಳ್ಳಬಹುದು.

ಕೇನ್ ವಿಲಿಯಮ್ಸನ್: ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ಕೂಡ ಫಿಟ್ನೆಸ್ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಪಾಕಿಸ್ತಾನದಲ್ಲಿ ನಡೆದ ತ್ರಿಕೋನ ಸರಣಿಯಲ್ಲಿ ಅವರು ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು. ಅವರಿಗೆ ಈಗ 34 ವರ್ಷ ವಯಸ್ಸಾಗಿದ್ದು, ನ್ಯೂಜಿಲೆಂಡ್ ಕ್ರಿಕೆಟ್‌ನ ಒಪ್ಪಂದವನ್ನೂ ತಿರಸ್ಕರಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಈ ಬಾರಿ ಕಿವೀಸ್ ಪಡೆ ಪ್ರಶಸ್ತಿ ಗೆಲ್ಲದಿದ್ದರೆ, ವಿಲಿಯಮ್ಸನ್ ಶೀಘ್ರದಲ್ಲೇ ಏಕದಿನ ಮಾದರಿಗೆ ವಿದಾಯ ಹೇಳಲಿದ್ದಾರೆ.

ರೋಹಿತ್ ಶರ್ಮಾ: ಭಾರತ ತಂಡದ ನಾಯಕ ರೋಹಿತ್ ಶರ್ಮಾ ಇತ್ತೀಚಿನ ದಿನಗಳಲ್ಲಿ ತಮ್ಮ ಕಳಪೆ ಫಾರ್ಮ್‌ನಿಂದಾಗಿ ಸುದ್ದಿಯಲ್ಲಿದ್ದು, ಸಾಕಷ್ಟು ಟೀಕೆಗಳನ್ನು ಎದುರಿಸಿದ್ದಾರೆ. ಆದರೆ, ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ತಮ್ಮ ಲಯ ಕಂಡುಕೊಂಡಿದ್ದಾರೆ. ಕಳೆದ ವರ್ಷ ಟಿ20 ವಿಶ್ವಕಪ್ ಗೆದ್ದ ನಂತರ ಅವರು ಚುಟುಕು ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಬಾರಿ ಭಾರತ ಚಾಂಪಿಯನ್ಸ್ ಟ್ರೋಫಿ ಗೆದ್ದರೆ, ಅವರು ನಿವೃತ್ತಿ ನಿರ್ಧಾರದಿಂದ ಎಲ್ಲರನ್ನು ಅಚ್ಚರಿಗೊಳಿಸಬಹುದು. ಅವರಿಗೆ ಈಗ 37 ವರ್ಷ ವಯಸ್ಸಾಗಿದ್ದು, 2027 ರ ಏಕದಿನ ವಿಶ್ವಕಪ್‌ನಲ್ಲಿ ಆಡುವುದು ಅವರಿಗೆ ಕಷ್ಟಕರವೆನಿಸುತ್ತಿದೆ.

ಗ್ಲೆನ್ ಮ್ಯಾಕ್ಸ್‌ವೆಲ್: ಆಸ್ಟ್ರೇಲಿಯಾದ ಅನುಭವಿ ಆಲ್‌ರೌಂಡ್ ಗ್ಲೆನ್ ಮ್ಯಾಕ್ಸ್‌ವೆಲ್ ತಮ್ಮ ಸ್ಪೋಟಕ ಬ್ಯಾಟಿಂಗ್‌ನಿಂದ ಯಾವುದೇ ಪಂದ್ಯವನ್ನು ತಿರುಗಿಸಬಲ್ಲರು. ಆದರೆ, ಇತ್ತೀಚಿನ ದಿನಗಳಲ್ಲಿ ಅವರು ತಮ್ಮ ಕಳಪೆ ಫಾರ್ಮ್‌ನಿಂದ ಬಳಲುತ್ತಿದ್ದಾರೆ. 2023 ರ ಏಕದಿನ ವಿಶ್ವಕಪ್ ನಂತರ ಮ್ಯಾಕ್ಸ್‌ವೆಲ್ 10 ಏಕದಿನ ಪಂದ್ಯಗಳಲ್ಲಿ ವಿಫಲರಾಗಿದ್ದಾರೆ. ಆಸ್ಟ್ರೇಲಿಯಾ ತಂಡ ಕೂಡ ಕೆಟ್ಟ ಸ್ಥಿತಿಯಲ್ಲಿದೆ. ಕಾಂಗರೂ ಪಡೆಗೆ ವಿಶೇಷವಾದದ್ದೇನನ್ನೂ ಮಾಡಲು ಸಾಧ್ಯವಾಗದಿದ್ದರೆ, ಮ್ಯಾಕ್ಸಿ ನಿವೃತ್ತಿ ಹೊಂದಬಹುದು.

ಜೋ ರೂಟ್: ಜೋ ರೂಟ್ ಇತ್ತೀಚೆಗೆ ಏಕದಿನ ಸ್ವರೂಪಕ್ಕೆ ಮರಳಿದ್ದಾರೆ. ಭಾರತದ ವಿರುದ್ಧದ ಸರಣಿಯಲ್ಲಿ ಅವರು ವಿಶೇಷವಾದದ್ದೇನನ್ನೂ ಮಾಡಲು ಸಾಧ್ಯವಾಗಲಿಲ್ಲ. 2023 ರ ಏಕದಿನ ವಿಶ್ವಕಪ್ ನಂತರ, ಅವರು ಕೇವಲ 3 ಏಕದಿನ ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಈ ಮೂರು ಪಂದ್ಯಗಳು ಭಾರತದ ವಿರುದ್ಧ ನಡೆದಿದ್ದವು. ಇಂತಹ ಪರಿಸ್ಥಿತಿಯಲ್ಲಿ, ಚಾಂಪಿಯನ್ಸ್ ಟ್ರೋಫಿ ನಂತರ ರೂಟ್ ಏಕದಿನ ವೃತ್ತಿಜೀವನ ಕೊನೆಗೊಳ್ಳಬಹುದು.

ಮೊಹಮ್ಮದ್ ನಬಿ: ಅಫ್ಘಾನಿಸ್ತಾನದ ಮೊಹಮ್ಮದ್ ನಬಿ ಅವರಿಗೆ ಚಾಂಪಿಯನ್ಸ್ ಟ್ರೋಫಿ ಐಸಿಸಿ ಟೂರ್ನಿಯಾಗಿದೆ. ಚಾಂಪಿಯನ್ಸ್ ಟ್ರೋಫಿ ನಂತರ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲಿದ್ದಾರೆ. ನಬಿ ಅಫ್ಘಾನಿಸ್ತಾನ ತಂಡಕ್ಕೆ ದೀರ್ಘಕಾಲ ಸೇವೆ ಸಲ್ಲಿಸಿದ್ದಾರೆ. ಅವರಿಗೆ 170 ಏಕದಿನ ಪಂದ್ಯಗಳ ಅನುಭವವಿದೆ. ಈಗ ಅವರ ನಾಯಕತ್ವದಲ್ಲಿ ಅಫ್ಘಾನ್ ತಂಡ ಚಾಂಪಿಯನ್ಸ್ ಟ್ರೋಫಿಯಲ್ಲಿ ಎಷ್ಟರ ಮಟ್ಟಿಗೆ ತಲುಪಬಹುದು ಎಂಬುದು ಕುತೂಹಲ ಮೂಡಿಸಿದೆ.

ವಿರಾಟ್ ಕೊಹ್ಲಿ: ಸ್ಟಾರ್ ವಿರಾಟ್ ಕೊಹ್ಲಿಗೆ ಇದು ಕೊನೆಯ ಐಸಿಸಿ ಟೂರ್ನಿ ಆಗಿರಬಹುದು. ಕಳೆದ ವರ್ಷ ಟಿ20 ವಿಶ್ವಕಪ್ ಗೆದ್ದ ನಂತರ ಅವರು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು. ಇತ್ತೀಚಿನ ವರ್ಷಗಳಲ್ಲಿ ಅವರ ಫಾರ್ಮ್ ಬಗ್ಗೆ ಪ್ರಶ್ನೆಗಳು ಎದ್ದಿವೆ. ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಗೆದ್ದರೆ ಅವರು ನಿವೃತ್ತಿ ತೆಗೆದುಕೊಳ್ಳುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಬಹುದು.

ರವೀಂದ್ರ ಜಡೇಜಾ: ಭಾರತ ತಂಡದಲ್ಲಿ ಹೆಚ್ಚುತ್ತಿರುವ ಸ್ಪಿನ್ ಆಯ್ಕೆಗಳಿಂದಾಗಿ, ರವೀಂದ್ರ ಜಡೇಜಾ ಮೇಲೆ ಹೆಚ್ಚಿನ ಒತ್ತಡವಿದೆ. ಅಕ್ಸರ್ ಪಟೇಲ್ ಅವರಿಗೆ ಕಠಿಣ ಸ್ಪರ್ಧೆ ನೀಡಿದ್ದಾರೆ. ರೋಹಿತ್ ಮತ್ತು ವಿರಾಟ್ ಅವರಂತೆಯೇ ಜಡೇಜಾ ಕೂಡ ಕಳೆದ ವರ್ಷ ಟಿ20 ವಿಶ್ವಕಪ್ ಗೆಲುವಿನ ನಂತರ ನಿವೃತ್ತಿ ಹೇಳಿದ್ದಾರೆ. ಜಡೇಜಾ ಶೀಘ್ರದಲ್ಲೇ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವ ಸಾಧ್ಯತೆ ಹೆಚ್ಚಿದೆ.

ಮುಷ್ಫಿಕರ್ ರಹೀಮ್: ಬಾಂಗ್ಲಾದೇಶದ ಅನುಭವಿ ವಿಕೆಟ್ ಕೀಪರ್-ಬ್ಯಾಟರ್ ಮುಷ್ಫಿಕರ್ ರಹೀಮ್ 37 ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವರು 272 ಏಕದಿನ ಪಂದ್ಯಗಳನ್ನು ಆಡಿದ್ದು, ಚಾಂಪಿಯನ್ಸ್ ಟ್ರೋಫಿಯ ನಂತರ ನಿವೃತ್ತಿ ಘೋಷಿಸಬಹುದು.

ಆದಿಲ್ ರಶೀದ್: ಇಂಗ್ಲೆಂಡ್‌ನ ಅನುಭವಿ ಸ್ಪಿನ್ನರ್ ಆದಿಲ್ ರಶೀದ್‌ಗೆ ಇದು ಕೊನೆಯ ಐಸಿಸಿ ಟೂರ್ನಿಯೂ ಆಗಿರಬಹುದು. ಅವರಿಗೆ 36 ವರ್ಷ ವಯಸ್ಸಾಗಿದ್ದು, 146 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ವಯಸ್ಸು ಹೆಚ್ಚಾಗುತ್ತಿರುವುದರಿಂದ ಚಾಂಪಿಯನ್ಸ್ ಟ್ರೋಫಿಯ ನಂತರ ರಶೀದ್ ನಿವೃತ್ತಿ ಘೋಷಿಸಬಹುದು.

Story first published: Sunday, February 16, 2025, 14:43 [IST]
Other articles published on Feb 16, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+