For Quick Alerts
ALLOW NOTIFICATIONS  
For Daily Alerts
 

IND vs SA Test: ಟೀಮ್ ಇಂಡಿಯಾ ಮಾನ ಉಳಿಸಲು ಈ ಇಬ್ಬರು ಆರ್ಭಟಿಸುವುದು ಮುಖ್ಯ

ಟೀಮ್ ಇಂಡಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್‌ ಪಂದ್ಯ ಸೆಂಚೂರಿಯನ್‌ನಲ್ಲಿ ನಡೆಯುತ್ತಿದೆ. ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್‌ನಲ್ಲಿ ಫ್ರಂಟ್ ಫುಟ್‌ನಲ್ಲಿ ಕಾಣಿಸುತ್ತಿದ್ದು, ಟೀಮ್ ಇಂಡಿಯಾ ಬ್ಯಾಕ್‌ ಫುಟ್‌ನಲ್ಲಿ ನಿಂತಿದೆ.

ಈ ವರ್ಷ ಭರ್ಜರಿ ಆಟದ ಪ್ರದರ್ಶನ ನೀಡಿರುವ ಟೀಮ್ ಇಂಡಿಯಾ ಸೋಲಿನಿಂದ ವರ್ಷವನ್ನು ಮುಗಿಸಲು ಬಯಸುವುದಿಲ್ಲ. ಈ ಪಂದ್ಯವನ್ನು ಗೆಲ್ಲಲು ಪ್ಲ್ಯಾನ್ ಮಾಡಿಕೊಳ್ಳುತ್ತಿದೆ. ಟೀಮ್ ಇಂಡಿಯಾ ಈ ಪ್ಲ್ಯಾನ್‌ ಸಕ್ಸಸ್‌ ಆಗ ಬೇಕಾದರೆ, ಟೀಮ್ ಇಂಡಿಯಾ ಸಂಘಟಿತ ಆಟ ಆಡುವುದು ಅವಶ್ಯ.

These two Team India players must fight to save the Test series—crucial moment

ಮೊದಲಾವಧಿ ಇಂಪಾರ್ಟೆಂಟ್

ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಹಿನ್ನಡೆ ಅನುಭವಿಸುತ್ತಿದೆ. ಆತಿಥೇಯರ ಮುನ್ನಡೆಯನ್ನು ಹೆಚ್ಚಿಗೆ ಮಾಡದ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ಟೀಮ್ ಇಂಡಿಯಾದ ಮೇಲಿದೆ. ಈ ನಿಟ್ಟಿನಲ್ಲಿ ಟೀಮ್ಇಂಡಿಯಾ ವೇಗಿಗಳು ಮೊದಲಾವಧಿಯಲ್ಲಿ ಬಿಗುವಿನ ದಾಳಿ ನಡೆಸಿ ಎದುರಾಳಿ ತಂಡವನ್ನು ಕಟ್ಟಿ ಹಾಕಬೇಕಿದೆ. ಅಂದಾಗ ಮಾತ್ರ ಟೀಮ್ ಇಂಡಿಯಾ ಈ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಲು ಸಾಧ್ಯ.

ಈಗಾಗಲೇ ಸೌತ್ ಆಫ್ರಿಕಾ 11 ರನ್‌ಗಳ ಮುನ್ನಡೆ ಸಾಧಿಸಿದೆ. ಆತಿಥೇಯರ ಬಳಿ ಇನ್ನು ಐದು ವಿಕೆಟ್‌ ಬಾಕಿ ಇವೆ. ಈ ವಿಕೆಟ್‌ಗಳನ್ನು ಟೀಮ್ ಇಂಡಿಯಾ ಮೊದಲಾವಧಿಯಲ್ಲಿ ಕಬಳಿಸಿದರೆ, ಉತ್ತಮವಾಗುತ್ತದೆ.

ಆಕ್ರಮಣಕಾರಿ ಆಟ ಆಡಬೇಕು ರೋಹಿತ್

ರೋಹಿತ್ ಶರ್ಮಾ ಟೆಸ್ಟ್‌ ಕ್ರಿಕೆಟ್‌ನಲ್ಲೂ ಏಕದಿನ ಶೈಲಿಯ ಬ್ಯಾಟಿಂಗ್ ಮಾಡುವುದನ್ನು ಕಾಣಬಹುದು. ಪ್ರಸಕ್ತ ಟೆಸ್ಟ್‌ನಲ್ಲೂ ರೋಹಿತ್ ಈ ಕೆಲಸವನ್ನೇ ಮಾಡುವ ಅನಿವಾರ್ಯತೆ ಇದೆ. ಅಲ್ಲದೆ ಕೆಟ್ಟ ಎಸೆತಗಳನ್ನು ದಂಡಿಸುತ್ತಾ, ಉತ್ತಮ ಎಸೆತಗಳನ್ನು ಬಿಟ್ಟರೆ ದೊಡ್ಡ ಇನ್ನಿಂಗ್ಸ್‌ ಕಟ್ಟಬಹುದು. ರೋಹಿತ್‌ ಆಕ್ರಮಣಕಾರಿ ಆಟದಿಂದ ಚೆಂಡನ್ನು ಹಳೆಯದಾಗಿ ಮಾಡಬಹುದು.

These two Team India players must fight to save the Test series—crucial moment

ಈ ನಿಟ್ಟಿನಲ್ಲಿ ರೋಹಿತ್ ಯಶಸ್ಸು ಕಂಡುಕೊಂಡರೆ ನಿಶ್ಚಿತವಾಗಿ ಟೀಮ್ ಇಂಡಿಯಾ ಬಿಗ್ ಟೋಟಲ್ ಕಲೆ ಹಾಕಬಹುದು. ಅಲ್ಲದೆ ರೋಹಿತ್ ದಕ್ಷಿಣ ಆಫ್ರಿಕಾದಲ್ಲೂ ರನ್ ಕಲೆ ಹಾಕಿ ಅಬ್ಬರಿಸಬಹುದು.

ಎಚ್ಚರಿಕೆಯ ಆಟ ಆಡಬೇಕಿದೆ ವಿರಾಟ್

ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ಟೀಮ್ ಇಂಡಿಯಾದ ಚೇಸಿಂಗ್ ಸ್ಟಾರ್ ವಿರಾಟ್ ಕೊಹ್ಲಿ ಉತ್ತಮ ಲಯದಲ್ಲಿ ಕಂಡು ಕೊಂಡರು. ಇವರ ಬ್ಯಾಟಿಂಗ್ ನೋಡಿದ ಅಭಿಮಾನಿಗಳು ಬಿಗ್ ಇನ್ನಿಂಗ್ಸ್ ಮೂಡಬಹುದು ಎಂಬ ಲೆಕ್ಕಾಚಾರ ಹಾಕಿಕೊಂಡಿದ್ದರು. ಆದರೆ ಅಭಿಮಾನಿಗಳ ಆಸೆ ಫಲಿಸಲಿಲ್ಲ.

ಟೀಮ್ ಇಂಡಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕಬೇಕಾದರೆ, ವಿರಾಟ್‌ ಕೊಹ್ಲಿ ತಾಳ್ಮೆಯ ಇನ್ನಿಂಗ್ಸ್ ಕಟ್ಟುವುದು ಬಹು ಮುಖ್ಯ. ಹೀಗೆ ಆದಲ್ಲಿ ಟೀಮ್ ಇಂಡಿಯಾದ ಸರಣಿ ಗೆಲುವಿನ ಆಸೆ ಕೈಗೂಡುತ್ತದೆ.

These two Team India players must fight to save the Test series—crucial moment

ಉಳಿದಂತೆ ಸ್ಟಾರ್ ಯುವ ಆಟಗಾರರು ತಮ್ಮ ಜವಾಬ್ದಾರಿಯನ್ನು ಅರಿತು ಆಡಿದರೆ ಗೆಲುವು ಸನಿಹವಾಗುತ್ತದೆ. ಟಾಪ್ ಆರ್ಡರ್‌ನಲ್ಲಿ ಯಶಸ್ವಿ ಜೈಸ್ವಾಲ್‌, ಮಿಡ್ಲ್ ಆರ್ಡರ್‌ನಲ್ಲಿ ಶುಭ್‌ಮನ್‌ ಗಿಲ್‌, ಶ್ರೇಯಸ್ ಅಯ್ಯರ್‌ ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಬೇಕಿದೆ. ಅಂದಾಗ ಮಾತ್ರ ಗೆಲುವಿನ ಆಸೆ ಈಡೇರುತ್ತದೆ.

Story first published: Thursday, December 28, 2023, 9:30 [IST]
Other articles published on Dec 28, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+