'ಈ ಭಯಾನಕ ಹೊತ್ತಿನಲ್ಲಿ ಭಾರತೀಯ ಗೆಳೆಯರ ಬಗ್ಗೆ ಯೋಚಿಸುತ್ತಿದ್ದೇನೆ'

ಮೆಲ್ಬರ್ನ್: ಭಾರತದಲ್ಲಿ ಕೋವಿಡ್-19ನಿಂದ ಎದುರಾಗಿರುವ ಸಂಕಷ್ಟದ ಪರಿಸ್ಥಿಯ ಬಗ್ಗೆ ಆಸ್ಟ್ರೇಲಿಯಾದ ಮಾಜಿ ಸ್ಪಿನ್ ದಂತಕತೆ ಶೇನ್ ವಾರ್ನ್ ಮರುಗಿದ್ದಾರೆ. ಕೊರೊನಾ ದ್ವಿತೀಯ ಅಲೆಯಿಂದಾಗಿ ಭಾರತದಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಸಾವು ನೋವುಗಳು ಜಾಸ್ತಿಯಾಗುತ್ತಲೇಯಿವೆ. ದೇಶದ ಈ ಪರಿಸ್ಥಿತಿಗೆ ವಾರ್ನ್ ಬೇಸರ ವ್ಯಕ್ತಪಡಿಸಿದ್ದಾರೆ.
ರಾಜಸ್ಥಾನ್ ರಾಯಲ್ಸ್ ಮಾಜಿ ನಾಯಕರೂ ಆಗಿದ್ದ ಶೇನ್ ವಾರ್ನ್ ಸದ್ಯದ ಭಾರತದ ಪರಿಸ್ಥಿತಿಯ ಬಗ್ಗೆ ಮಾತನಾಡಿದ್ದಾರೆ. ಅದ್ಭುತ ದೇಶ ಭಾರತಕ್ಕೆ ಇಂಥ ಕಷ್ಟದ ಪರಿಸ್ಥಿತಿ ಎದುರಾಗಿದೆ. ಆದರೆ ಎಲ್ಲರೂ ಸುರಕ್ಷತೆಯ ಕಡೆಗೆ ಗಮನಕೊಡಿ. ಕೊರೊನಾ ವಿರುದ್ಧ ಹೋರಾಟ ಮುಂದುವರೆಯಲಿ ಎಂದು ಶೇನ್ ಹೇಳಿದ್ದಾರೆ.
'ಈ ಭಯಾನಕ ಹೊತ್ತಿನಲ್ಲಿ ನಾನು ನನ್ನ ಭಾರತೀಯ ಗೆಳಯರ ಬಗ್ಗೆ ಯೋಚಿಸುತ್ತಿದ್ದೇನೆ. ದಯವಿಟ್ಟು ನೀವು ನಿಮ್ಮ ಬಗ್ಗೆ ಮತ್ತು ನಿಮ್ಮ ಕುಟುಂಬಸ್ಥರ ಬಗ್ಗೆ ಜಾಗ್ರತೆವಹಿಸಿ. ಅದ್ಭುತ ದೇಶ ಭಾರತಕ್ಕೆ ಈ ಪರಿಸ್ಥಿತಿ ಎದುರಾಗಿರುವುದಕ್ಕೆ ಬೇಸರವಾಗುತ್ತದೆ. ನನ್ನ ಪ್ರೀತಿ, ಬೆಂಬಲವನ್ನು ನಿಮ್ಮೆಡೆಗೆ ಕಳುಹಿಸುತ್ತಿದ್ದೇನೆ' ಎಂದು ಟ್ವೀಟ್‌ನಲ್ಲಿ ವಾರ್ನ್ ಬರೆದುಕೊಂಡಿದ್ದಾರೆ.
ಭಾರತದಲ್ಲಿ ಗುರುವಾರ (ಮೇ 6) ಒಂದೇ ದಿನ 4,12,262 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದವು. ಕಳೆದ 24 ಗಂಟೆಗಳಲ್ಲಿ ಇದೇ ದಾಖಲಾದ ಅತ್ಯಧಿಕ ಸೋಂಕಿನ ಸಂಖ್ಯೆಯಾಗಿದೆ. ಇದೇ ಕಾರಣಕ್ಕೆ ಆರಂಭಗೊಂಡಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿ ಕೂಡ ಅರ್ಧಕ್ಕೆ ಸ್ಥಗಿತಗೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications