Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ ಟಿ20 ವಿಶ್ವಕಪ್‌ ಗೆದ್ದಿದ್ದು, ಧೋನಿ ಯುಗ ಶುರುವಾಗಿದ್ದು ಇದೇ ದಿನ!

‘This day in 2007’- BCCI recalls India’s memorable triumph

ಜೋಹಾನ್ಸ್‌ಬರ್ಗ್‌, ಸೆಪ್ಟೆಂಬರ್ 24: ಸುಮಾರು 12 ವರ್ಷಗಳ ಹಿಂದೆ ಅಂದರೆ 2007 ಸೆಪ್ಟೆಂಬರ್ 24ರಂದು ಟೀಮ್ ಇಂಡಿಯಾ ಐಸಿಸಿ ವರ್ಲ್ಡ್ ಟಿ20 ಪ್ರಶಸ್ತಿ ಜಯಿಸಿತ್ತು. ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಭಾರತ, ಪಾಕಿಸ್ತಾನವನ್ನು ಸೋಲಿಸಿ ಚೊಚ್ಚಲ ಟ್ರೋಫಿ ಗೆದ್ದಿತ್ತು. ಎಂಎಸ್ ಧೋನಿ ಯುಗ ಆರಂಭವಾಗಿದ್ದೂ ಆವತ್ತಿನಿಂದಲೇ.

ಪಾಕಿಸ್ತಾನ ವಿರುದ್ಧದ ಆ ಪಂದ್ಯದಲ್ಲಿ ಧೋನಿ ನಾಯಕತ್ವದ ಭಾರತ 5 ರನ್‌ಗಳ ರೋಚಕ ಗೆಲುವನ್ನಾಚರಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಭಾರತದಿಂದ ಗೌತಮ್ ಗಂಭೀರ್ 75, ಯೂಸೂಫ್ ಪಠಾಣ್ 15, ರಾಬಿನ್ ಉತ್ತಪ್ಪ 8, ಯುವರಾಜ್ ಸಿಂಗ್ 14, ಎಂಎಸ್ ಧೋನಿ 4, ರೋಹಿತ್ ಶರ್ಮಾ 30, ಇರ್ಫಾನ್ ಪಠಾಣ್ 3 ರನ್‌ ಸೇರಿಸಿದ್ದರು.

ಟೀಮ್ ಇಂಡಿಯಾ 20 ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 157 ರನ್ ಮಾಡಿತ್ತು. ಗುರಿ ಬೆಂಬತ್ತಿದ ಪಾಕಿಸ್ತಾನ, ಇಮ್ರಾನ್ ನಝಿರ್ 33, ಯೂನಿಸ್ ಖಾನ್ 24, ಮಿಸ್ಬಾ ಉಲ್ ಹಕ್ 43, ರನ್‌ನೊಂದಿಗೆ 19.3ನೇ ಓವರ್‌ಗೆ ಎಲ್ಲಾ ವಿಕೆಟ್‌ ಕಳೆದು 152 ರನ್ ಬಾರಿಸಿ ಶರಣಾಗಿತ್ತು. ಧೋನಿ ಅಂದಿನಿಂದ ಹೆಚ್ಚು ಜನಪ್ರಿಯರಾಗತೊಡಗಿದ್ದರು.

ಪಾಕ್ ಇನ್ನಿಂಗ್ಸ್‌ನಲ್ಲಿ ಭಾರತದ ಆರ್‌ಪಿ ಸಿಂಗ್ 3, ಎಸ್‌ ಶ್ರೀಶಾಂತ್ 1, ಜೋಗೀಂದರ್ ಸಿಂಗ್ 2, ಇರ್ಫಾನ್ ಪಠಾಣ್ 3 ವಿಕೆಟ್ ಪಡೆದು ಎದುರಾಳಿಯನ್ನು ಕಾಡಿದ್ದರು. ಅಂತೂ ಟಿ20 ವಿಶ್ವಕಪ್ ಚೊಚ್ಚಲ ಟೂರ್ನಿಯಲ್ಲೇ ಭಾರತ ಚಾಂಪಿಯನ್‌ ಆಗಿ ವಿಶ್ವದಗಲ ಮಿನುಗಿತ್ತು. ಆವತ್ತಿನ ಆ ಅಪರೂಪದ ದಿನವನ್ನು ಸ್ಮರಿಸಿ ಬಿಸಿಸಿಐ ಇಂದು ಟ್ವೀಟ್ ಮಾಡಿದೆ.

Story first published: Tuesday, September 24, 2019, 15:58 [IST]
Other articles published on Sep 24, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+