For Quick Alerts
ALLOW NOTIFICATIONS  
For Daily Alerts
 

ಈ ದಿನ ಅಂದು: ಏಕದಿನ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಮೊದಲ ದ್ವಿಶತಕ ಸಿಡಿಸಿ ಇಂದಿಗೆ 7 ವರ್ಷ

This day in 2013: Rohit Sharma hits maiden double century in ODIs

ಟೀಮ್ ಇಂಡಿಯಾದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ ಮೂರು ದ್ವಿಶತಕ ಸಿಡಿಸಿದ ಮೊದಲ ಹಾಗೂ ಏಕೈಕ ಕ್ರಿಕೆಟಿಗ. ಒಂದು ದ್ವಿಶತಕ ಸಿಡಿಸುವುದು ಅಂತಾರಾಷ್ಟ್ರೀಯ ಕ್ರಿಕೆಟ್‌ನ ಶ್ರೇಷ್ಠ ಆಟಗಾರರಿಗೇ ಕನಸಾಗಿರುವಾಗ ರೋಹಿತ್ ಶರ್ಮಾ ಈ ಸಾಧನೆಯನ್ನು ಬರೊಬ್ಬರಿ ಮೂರು ಬಾರಿ ಮಾಡಿ ತನ್ನ ಸಾಮರ್ಥ್ಯವನ್ನು ಜಗತ್ತಿಗೆ ಸಾರಿದ್ದಾರೆ. ಇದರಲ್ಲಿ ಮೊದಲ ಶತಕವನ್ನು ಸಿಡಿಸಿದ್ದು ಇದೇ ದಿನ. ಅಂದರೆ 2013ರ ನವೆಂಬರ್ 2ರಂದು.

2010 ಫೆಬ್ರವರಿ 24 ರವರೆಗೆ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಒಂದು ದ್ವಿಶತಕ ದಾಖಲಾಗಿರಲಿಲ್ಲ. ಆದರೆ ಆ ದಿನ ಕ್ರಿಕೆಟ್‌ನ ದಿಗ್ಗಜ ಸಚಿನ್ ತೆಂಡೂಲ್ಕರ್ ದಕ್ಷಿಣ ಆಫ್ರಕಾ ವಿರುದ್ಧದ ಪಂದ್ಯದಲ್ಲಿ ಮೊದಲ ಬಾರಿಗೆ ದ್ವಿಶತಕವನ್ನು ಸಿಡಿಸಿ ದಾಖಲೆ ಬರೆದರು. ಬಳಿಕ ಮುಂದಿನ ವರ್ಷದಲ್ಲಿ ಇದೇ ಸಾಧನೆಯನ್ನು ವೀರೇಂದ್ರ ಸೆಹ್ವಾಗ್ ವೆಸ್ಟ್ ಇಂಡೀಸ್ ವಿರುದ್ಧ 219 ರನ್ ಸಿಡಿಸಿ ಪುನರಾವರ್ತಿಸಿದರು.

ಇದಾಗಿ ಎರಡು ವರ್ಷಗಳ ಬಳಿಕ ರೋಹಿತ್ ಶರ್ಮಾ ಈ ಸಾಧನೆಯನ್ನು ಮಾಡಿದ ವಿಶ್ವದ ಮೂರನೇ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಸದ್ಯ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಶ್ರೇಷ್ಠ ಆಟಗಾರ ಎನಿಸಿರುವ ರೋಹಿತ್ ಶರ್ಮಾ ಖಾತೆಯಲ್ಲಿ ಮೂರು ದ್ವಿಶತಕಗಳಿವೆ. ಆದರೆ ಮೊದಲ ಶತಕ ಯಾವತ್ತೂ ಸ್ಮರಣಿಯ.

ಬೆಂಗಳೂರಿನಲ್ಲಿ ನಡೆದ ಆ ಪಂದ್ಯದಲ್ಲಿ ಭಾರತಕ್ಕೆ ಎದುರಾಳಿಯಾಗಿ ಕಣಕ್ಕಿಳಿದದ್ದು ಬಲಿಷ್ಠ ಆಸ್ಟ್ರೇಲಿಯಾ. ಈ ಪಂದ್ಯದಲ್ಲಿ ರೋಹಿತ್ ಸರ್ಮಾ ದಾಖಲೆಯ 16 ಸಿಕ್ಸರ್ ಸಿಡಿಸಿದ್ದಾರೆ. ಒರ್ವ ಬ್ಯಾಟ್ಸ್‌ಮನ್ ಇನ್ನಿಂಗ್ಸ್ ಒಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆಯೂ ಇದಾಗಿತ್ತು. 2019ರವರೆಗೂ ಈ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲೇ ಇತ್ತು. ಬಳಿಕ ಇಂಗ್ಲೆಂಡ್ ನಾಯಕ ಇನ್ನಿಂಗ್ಸ್‌ನಲ್ಲಿ 17 ಸಿಕ್ಸರ್ ಸಿಡಿಸಿ ಈ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಅಂದಿನ ಪಂದ್ಯದಲ್ಲಿ ರೋಹಿತ್ ಶರ್ಮಾ 158 ಎಸೆತಗಳನ್ನು ಎದುರಿಸಿ 209 ರನ್ ಗಳಿಸಿದ್ದರು. ಇದರಲ್ಲಿ 12 ಬೌಂಡರಿ ಹಾಗೂ 16 ಭರ್ಜರಿ ಸಿಕ್ಸರ್‌ಗಳು ಸೇರಿಕೊಂಡಿತ್ತು. ಈ ಮೂಲಕ ದಾಖಲೆ ಮಾಡಿದ್ದರು ರೋಹಿತ್ ಶರ್ಮಾ.

Story first published: Monday, November 2, 2020, 14:19 [IST]
Other articles published on Nov 2, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+