ಪ್ರೇಯಸಿಯ ಭೇಟಿಗೆ ರಾತ್ರಿ 2 ಗಂಟೆಗೆ ತೆರಳಿದ್ದ ಟೀಮ್ ಇಂಡಿಯಾ ಆಟಗಾರ ಯಾರು ಗೊತ್ತಾ?

ಕೊರೊನಾ ವೈರಸ್ ವಿಶ್ವಾದ್ಯಂತ ಸಾಕಷ್ಟು ಭೀತಿಯನ್ನು ಹುಟ್ಟಿಸಿದೆ. ದೇಶಕ್ಕೆ ದೇಶವೇ ಈಗ ಸ್ಥಬ್ಧಗೊಂಡಿದೆ. ಎಲ್ಲಾ ಕ್ರಿಕೆಟಿಗರು ಈಗ ಮನೆಯಲ್ಲೇ ಕುಳಿತು ಕಾಲಕಳೆಯುತ್ತಿದ್ದಾರೆ. ಇಂತಾ ಸಂದರ್ಭದಲ್ಲಿ ಟೀಮ್ ಇಂಡಿಯಾ ಕ್ರಿಕೆಟಿಗನೋರ್ವನ ಕುತೂಹಲಕಾರಿ ಪ್ರೇಮಕಥೆ ಬಹಿರಂಗವಾಗಿದೆ.
ಕ್ರಿಕೆಟ್ ವೆಬ್‌ಸೈಟ್ ಕ್ರಿಕ್ ಬಝ್ ಟೀಮ್ ಇಂಡಿಯಾ ಆಟಗಾರನ ಸಂದರ್ಶನವೊಂದನ್ನು ನಡೆಸಿದೆ. ಈ ಸಂದರ್ಶನದಲ್ಲಿ ಟೀಮ್ ಇಂಡಿಯಾ ಆಟಗಾರನಿಗೆ ಆತನ ಗೆಳಯನೂ ಸಾಥ್ ನೀಡಿದ್ದರು. ಆ ಗೆಳೆಯ ಟೀಮ್ ಇಂಡಿಯಾ ಆಟಗಾರನ ಪ್ರೀತಿಯ ವಿಚಾರವನ್ನು ಹಂಚಿಕೊಂಡಿದ್ದಾರೆ.
ಈ ಪ್ರೀತಿಯ ಕಥೆ ನಿಜಕ್ಕೂ ಸಿನಿಮಾ ಕಥೆಯಂತೆಯೇ ಇದೆ. ಪ್ರೇಯಸಿಗಾಗಿ ಈ ಕಥೆಯ ಹೀರೋ 300 ಕಿ.ಮಿ ದೂರ ಹೋಗಿ ತಡರಾತ್ರಿ 2 ಗಂಟೆಗೆ ಭೇಟಿಮಾಡುವ ಪ್ರಯತ್ನ ಮಾಡಿದ್ದರಂತೆ. ಯಾರು ಆ ಕ್ರಿಕೆಟಿಗ ಮುಂದೆ ಓದಿ..

ಯಾರು ಆ ರೊಮ್ಯಾಂಟಿಕ್ ಹೀರೋ
ಈ ಪ್ರೇಮಕಥೆ ಬೇರೆ ಯಾರದ್ದೂ ಅಲ್ಲ. ಟೀಮ್ ಇಂಡಿಯಾದ ಟೆಸ್ಟ್ ಆ ಆಟಗಾರ ಹನುಮ ವಿಹಾರಿ ಅವರದ್ದು. ಟೀಮ್ ಇಂಡಿಯಾ ಟೆಸ್ಟ್ ತಂಡದ ಮಧ್ಯಮ ಕ್ರಮಾಂಕದ ಆಟಗಾರ ವಿಹಾರಿ ಮಿತಭಾಷಿ ಮತ್ತು ತುಂಬಾ ಕೂಲ್. ಆದರೆ ಆತನ ಪ್ರೇಮ ಕಥೆ ಮಾತ್ರ ಯಾವ ಸಿನಿಮಾಗೂ ಕಡಿಮೆಯಿದ್ದಂತಿಲ್ಲ.

ಪ್ರೀತಿಯ ಬಗ್ಗೆ ತುಟಿಬಿಚ್ಚಿದ ಹನುಮ ವಿಹಾರಿ
ಸಂದರ್ಶನದ ಸಂದರ್ಭದಲ್ಲಿ ಹನುಮವಿಹಾರಿ ತನ್ನ ಪ್ರೇಮದ ಬಗ್ಗೆ ಹೇಳಿಕೊಂಡರು. ತನ್ನ ಗೆಳತಿ ಪ್ರೀತಿಯನ್ನು(ಈಗ ಪತ್ನಿ) ಭೇಟಿಯಾಗಲು ಹನುಮ ವಿಹಾರಿ ರಾತ್ರಿ 2 ಗಂಟೆಗೆ ಹೋಗುತ್ತಿದ್ದ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.

300 ಕಿಮೀ ಪ್ರಯಾಣ
ಹನುಮ ವಿಹಾರಿ ತನ್ನ ಪ್ರೇಯಸಿಯ ಭೇಟಿಗಾಗಿ 300 ಕಿ.ಮೀ ಪ್ರಯಾಣವನ್ನು ಮಾಡುತ್ತಿದ್ದರಂತೆ. ಹೈದರಾವಾದ್‌ನಿಂದ ವಾರಂಗಲ್‌ಗೆ ತನ್ನ ಕಾರ್‌ನಲ್ಲಿ ಪ್ರಯಣಿಸಿ ಭೇಟಿ ಮಾಡುತ್ತಿದ್ದದ್ದಾಗಿ ಹನುಮ ವಿಹಾರಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ತನ್ನ ಗೆಳೆಯ ಶ್ರೀಲೀಲ್ ಅವರೊಂದಿಗೆ ಹನುಮ ವಿಹಾರಿ ತನ್ನ ಪ್ರೇಮಕಥೆಯನ್ನು ಬಿಚ್ಚಿಟ್ಟರು.

ನೋಡಿದಂತಿಲ್ಲ ಈ ಹನುಮ
ಟೀಮ್ ಇಂಡಿಯಾದ ನೇರವಂತಿಗೆಯ ಮತ್ತು ಕೂಲ್ ಸ್ವಭಾವದಂತಿರುವ ಹನುಮ ವಿಹಾರಿ ನೋಡಿದಂತಿಲ್ಲ ಎಂದು ಶ್ರೀಲೀಲ್ ಹೇಳಿದ್ದಾರೆ. ಪ್ರೀತಿಯ ವಿಚಾರದಲ್ಲಿ ಹನುಮವಿಹಾರಿ ಬಹಳ ರೊಮ್ಯಾಂಟಿಕ್ ಎಂಬುದನ್ನೂ ಹೇಳಿದ್ದಾರೆ. ಯಾರಿಗೂ ತಿಳಿಸದೆ 300 ಕಿ.ಮಿ ಪ್ರಯಾಣಿಸುತ್ತಿದ್ದ ಎಂದು ಶ್ರೀಲೀಲ್ ಹೇಳಿದ್ದಾರೆ.

2 ಗಂಟೆಗೆ ಭೇಟಿಗೆ ಬಂದು ಆಗಿದ್ದೇನು?
ಒಂದು ಬಾರಿ ಹನುಮ ವಿಹಾರಿ ಗೆಳೆಯ ಶ್ರೀಲೀಲ್ ಜೊತೆಗೆ ಗೆಳತಿಯನ್ನು ಭೇಟಿಯಾಗಲು ಬಂದಿದ್ದ ವಿಚಾರವನ್ನು ಹನುಮ ಹೇಳಿಕೊಳ್ಳುತ್ತಾರೆ. ಆದರೆ ಆ ಸಂದರ್ಭದಲ್ಲಿ ಗೆಳತಿ ಪ್ರೀತಿ ಮನೆಯ ಗೇಟ್ ಹಾಕಿದ್ದ ಕಾರಣ ಭೇಟಿಯಾಗಲು ಸಾಧ್ಯವಾಗಲಿಲ್ಲ. ನಿರಾಶೆಗೊಂಡು ವಾಪಾಸ್ಸಾಗಬೇಕಾಯಿತು ಎಂದು ಹನುಮ ವಿಹಾರಿ ಮಾತನಾಡುತ್ತಾ ಹೇಳಿದರು.

ಮಾತನಾಡಿಸಿಯೇ ಹೋಗಿದ್ದರು ವಿಹಾರಿ
ಹನುಮ ವಿಹಾರಿಯ ಮಾತಿಗೆ ಗೆಳೆಯ ಶ್ರೀಲೀಲ್ ಅಡ್ಡ ಬಂದು, ಈ ಮಾತು ಸುಳ್ಳು, ಮನೆಯ ಗೇಟ್ ಹಾಕಿದ್ದಿದ್ದು ನಿಜ. ಆದರೆ ಭೇಟಿಯಾಗದೆ ವಾಪಸ್ಸಾಗಿರಲಿಲ್ಲ. ಹಾಕಿದ್ದ ಗೇಟ್ ಬಳಿ ಬಂದು ಹನುಮ ವಿಹಾರಿ ಗೆಳತಿ ಪ್ರೀತಿಯೊಂದಿಗೆ ಮಾತನಾಡಿಯೇ ವಾಪಸ್ಸಾಗಿದ್ದರು ಎಂದು ಘಟನೆಯನ್ನು ಹೇಳಿದರು.

ಮದುವೆಗೆ ಹಮನು ವಿಹಾರಿಯಲ್ಲಿ ವಿರೋಧ
ಹನುಮ ವಿಹಾರಿ ಮತ್ತು ಪ್ರೀತಿ ಪ್ರೇಮದಲ್ಲಿ ಬಿದ್ದಾಗಿತ್ತು. ಆದರೆ ಮದುವೆಗೆ ಹನುಮ ವಿಹಾರಿ ಮನೆಯವರು ಒಪ್ಪಿರಲಿಲ್ಲ. ಹೀಗಾಗಿ ಇಬ್ಬರ ಪ್ರೀತಿ ಕದ್ದು ಮುಚ್ಚಿ ಮುಂದುವರಿದಿತ್ತು. ಬಳಿಕ ಕಳೆದ ವರ್ಷ ಪ್ರೀತಿ ಮತ್ತು ಹನುಮ ವಿಹಾರಿ ಮದುವೆ ಸುಸೂತ್ರವಾಗಿ ನಡೆಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications