2008ರಲ್ಲಿ ರೈನಾರನ್ನು ಸಿಎಸ್‌ಕೆ ಖರೀದಿಸಿದಾಗ ಎಂಎಸ್ ಧೋನಿ ನೀಡಿದ್ದ ಪ್ರತಿಕ್ರಿಯೆ ಬಹಿರಂಗ

ಐಪಿಎಲ್ ಸ್ಪೆಷಲಿಸ್ಟ್, ಪವರ್ ಹಿಟ್ಟರ್ ಎಂದೇ ಹೆಸರು ಮಾಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಬ್ಯಾಟಿಂಗ್ ಅಸ್ತ್ರ ಸುರೇಶ್ ರೈನಾ ಅವರ 'ಬಿಲೀವ್' ಎಂಬ ಆತ್ಮ ಚರಿತ್ರೆ ಬಿಡುಗಡೆಯಾಗಿದೆ. ರೈನಾ ಕ್ರಿಕೆಟ್ ಜೀವನದ ಕುರಿತು ಬರೆಯಲಾಗಿರುವ ಈ ಪುಸ್ತಕದಲ್ಲಿ ರೈನಾ ಮೊಟ್ಟಮೊದಲ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೇರ್ಪಡೆಯಾದ ವಿಷಯದ ಕುರಿತೂ ಉಲ್ಲೇಖಿಸಲಾಗಿದೆ.
2016 ಮತ್ತು 2017ರ ಐಪಿಎಲ್ ಆವೃತ್ತಿಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಐಪಿಎಲ್ ಆವೃತ್ತಿಗಳಲ್ಲಿಯೂ ಸಹ ರೈನಾ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಿದ್ದಾರೆ. 2008ರಲ್ಲಿ ಐಪಿಎಲ್ ಉದ್ಘಾಟನಾ ಆವೃತ್ತಿಯ ಮೆಗಾ ಹರಾಜಿನಲ್ಲಿ 55 ಲಕ್ಷ ಮೂಲ ಬೆಲೆಯನ್ನು ಹೊಂದಿದ್ದ ಸುರೇಶ್ ರೈನಾ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ 2.6 ಕೋಟಿಗೆ ಖರೀದಿಸಿತು. ಚೆನ್ನೈ ತಂಡ ತನ್ನನ್ನು ಚೊಚ್ಚಲ ಐಪಿಎಲ್ ಹರಾಜಿನಲ್ಲಿ ಖರೀದಿಸಿದ ಕುರಿತು ಸುರೇಶ್ ರೈನಾ ಮೆಲುಕು ಹಾಕಿದ್ದಾರೆ.
'ಎಲ್ಲ ಆಟಗಾರರ ರೀತಿ ನನಗೂ ಯಾವ ತಂಡ ನನ್ನನ್ನು ಖರೀದಿಸಲಿದೆ ಎಂಬ ಕುತೂಹಲ ಇತ್ತು. ಕೊನೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ನನ್ನನ್ನು ಖರೀದಿಸಿದಾಗ ತುಂಬಾ ಖುಷಿಯಾಯಿತು, ಅದರಲ್ಲಿಯೂ ಮಹೇಂದ್ರ ಸಿಂಗ್ ಧೋನಿ ಅವರ ಜೊತೆ ಆಟವಾಡುತ್ತೇನೆಂಬುದು ಮತ್ತೊಂದು ಖುಷಿಯ ವಿಷಯವಾಗಿತ್ತು' ಎಂದು ಸುರೇಶ್ ರೈನಾ ಹೇಳಿಕೊಂಡಿದ್ದಾರೆ. ಹಾಗೆಯೇ ಚೆನ್ನೈ ತಂಡಕ್ಕೆ ಆಯ್ಕೆಯಾದ ನಂತರ ಮಹೇಂದ್ರ ಸಿಂಗ್ ಧೋನಿ ಸುರೇಶ್ ರೈನಾ ಅವರಿಗೆ 'ಮಜವಾಗಿರುತ್ತೆ' ಎಂದು ಪ್ರತಿಕ್ರಿಯೆಯನ್ನು ನೀಡಿದ್ದರಂತೆ. ಹೌದು ರೈನಾ ಚೆನ್ನೈ ತಂಡಕ್ಕೆ ಆಯ್ಕೆಯಾದ ನಂತರ ಮಹೇಂದ್ರ ಸಿಂಗ್ ಧೋನಿ ಅವರು ಈ ರೀತಿಯ ಪ್ರತಿಕ್ರಿಯೆಯನ್ನು ನೀಡಿದ್ದರು ಎಂದು ಸುರೇಶ್ ರೈನಾ ಅವರು ಹೇಳಿಕೊಂಡಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಇದುವರೆಗೂ 200 ಪಂದ್ಯಗಳನ್ನಾಡಿರುವ ಸುರೇಶ್ ರೈನಾ 5491 ರನ್ ಗಳಿಸಿದ್ದು ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಹೀಗೆ ಐಪಿಎಲ್ ಇತಿಹಾಸದಲ್ಲಿ ಉತ್ತಮ ಆಟವನ್ನು ಆಡಿರುವ ರೈನಾ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications