For Quick Alerts
ALLOW NOTIFICATIONS  
For Daily Alerts
 

ಈ ಪ್ಲೇಯರ್‌ನನ್ನು ಸೆಲೆಕ್ಟ್‌ ಅಲ್ಲ, ರಿಜೆಕ್ಟ್‌ ಮಾಡಲಾಗುತ್ತಿದೆ: ಟೀಮ್ ಮ್ಯಾನೇಜ್ಮೆಂಟ್ ವಿರುದ್ಧ ಕಿಡಿಕಾರಿದ ಮಾಜಿ ಪ್ಲೇಯರ್

ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಟೀಮ್ ಇಂಡಿಯಾದ ಐದು ಬ್ಯಾಟರ್‌ ಗಳು ದ್ವಿಶತಕ ಸಾಧನೆ ಮಾಡಿದ್ದಾರೆ. ಅದರಲ್ಲಿ ಒಬ್ಬ ಆಟಗಾರನ ಹೆಸರು ಇಶಾನ್ ಕಿಶನ್. ಇಶಾನ್ ಕಿಶನ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿದ್ದು, ಇವರು ತಮ್ಮ ಆಕ್ರಮಣಕಾರಿ ಬ್ಯಾಟಿಂಗ್‌ನಿಂದ ಬಲಿಷ್ಠ ಬೌಲಿಂಗ್ ವಿಭಾಗವನ್ನು ಕಟ್ಟಿ ಹಾಕಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ.

ಇಶಾನ್ ಅವರ ಸಾಮರ್ಥ್ಯದಿಂದಲೇ ತಂಡದಲ್ಲಿ ಲಭಿಸಿದೆ. ಈ ಸ್ಟಾರ್ ಪ್ಲೇಯರ್ ಪದೇ ಪದೇ ತಂಡಕ್ಕೆ ಸೇರಿಸಿಕೊಂಡ ನಂತರವೂ ಈ ಆಟಗಾರನಿಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಆಡಲು ಅಷ್ಟಾಗಿ ಅವಕಾಶಗಳು ಲಭಿಸುತ್ತಿಲ್ಲ. ಭಾರತೀಯ ಕ್ರಿಕೆಟ್ ನ ಈ ವರ್ತನೆಗೆ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಪ್ರತಿಕ್ರಿಯಿಸಿದ್ದಾರೆ.

This player is being rejected, not selected: Ex-player lashed on team india management

ಈ ಬಗ್ಗೆ ಮಾತನಾಡಿರುವ ಅವರು, ಇದು ಭಾರತೀಯ ಕ್ರಿಕೆಟ್‌ನ ಹಳೆಯ ಸಮಸ್ಯೆಯಾಗಿದ್ದು, ಅವರು ಆಟಗಾರರನ್ನು ಸುಲಭವಾಗಿ ಆಯ್ಕೆ ಮಾಡುವುದಿಲ್ಲ. ಮತ್ತು ಆಟಗಾರರನ್ನು ಕಡೆಗಣಿಸುತ್ತಾರೆ ಎಂದು ತಿಳಿಸಿದ್ದಾರೆ.

ಇಶಾನ್ ಕಿಶನ್ ಗೆ ಅವಕಾಶ ಯಾವಾಗ?

ಇಶಾನ್ ಕಿಶನ್ ಕಳೆದ ಹಲವಾರು ಸರಣಿಗಳಲ್ಲಿ ಬಹುತೇಕ ಎಲ್ಲಾ ಮೂರು ಸ್ವರೂಪಗಳ ತಂಡಗಳಲ್ಲಿ ಆಯ್ಕೆಯಾಗಿದ್ದಾರೆ. ಆದರೆ ಅವರು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.

ಇಶಾನ್ ಕಿಶನ್ ಆರಂಭಿಕ ಬ್ಯಾಟ್ಸ್‌ಮನ್, ಆದರೆ ಅವರು ತಂಡಕ್ಕಾಗಿ ಆಡಲು ಅಗತ್ಯವಿರುವ ಯಾವುದೇ ಸ್ಥಾನದಲ್ಲಿ ಆಡುತ್ತಾರೆ. ಏಷ್ಯಾಕಪ್‌ನಲ್ಲಿ ಶ್ರೇಯಸ್ ಅಯ್ಯರ್ ಗಾಯಗೊಂಡಾಗ, ಮಧ್ಯಮ ಕ್ರಮಾಂಕದಲ್ಲಿ ಇಶಾನ್ ಕಿಶನ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು.

ಏಷ್ಯಾ ಕಪ್ ನಲ್ಲಿ ನೀಡಿದ ಪ್ರದರ್ಶನದ ಆಧಾರದ ಮೇಲೆ, ಅವರನ್ನು ವಿಶ್ವಕಪ್ ತಂಡದಲ್ಲಿ ಸೇರಿಸಲಾಯಿತು. ಆದರೆ ಕೆಲವು ಪಂದ್ಯಗಳಲ್ಲಿ ಮಾತ್ರ ಆಡುವ ಅವಕಾಶ ಸಿಕ್ಕಿತು. ಶುಭಮನ್ ಗಿಲ್ ಗಾಯದಿಂದ ವಾಪಸಾದ ತಕ್ಷಣ ಇಶಾನ್‌ಗೆ ಒಂದೇ ಒಂದು ಪಂದ್ಯದಲ್ಲಿ ಆಡುವ ಅವಕಾಶ ಸಿಗಲಿಲ್ಲ.

This player is being rejected, not selected: Ex-player lashed on team india management

ಏಕದಿನ ವಿಶ್ವಕಪ್ ಮುಗಿದ ತಕ್ಷಣವೇ, ಆಸ್ಟ್ರೇಲಿಯ ವಿರುದ್ಧದ ಟಿ20 ಸರಣಿ ಆಯೋಜಿಸಲಾಗಿತ್ತು. ಈ 5 ಪಂದ್ಯಗಳ ಟಿ20 ಸರಣಿಯಲ್ಲೂ ಇಶಾನ್‌ಗೆ ಮೊದಲ ಮೂರು ಪಂದ್ಯಗಳಲ್ಲಿ ಮಾತ್ರ ಆಡುವ ಅವಕಾಶ ಸಿಕ್ಕಿತ್ತು. ನಾಲ್ಕನೇ ಪಂದ್ಯದಿಂದ ಶ್ರೇಯಸ್ ಅಯ್ಯರ್ ತಂಡಕ್ಕೆ ಬಂದ ತಕ್ಷಣ, ಇಶಾನ್ ಕಿಶನ್ ಅವರನ್ನು ಮತ್ತೆ ಆಡುವ ಹನ್ನೊಂದರಿಂದ ಕೈಬಿಡಲಾಯಿತು. ಇಶಾನ್ ಕಿಶನ್ ಜೊತೆಗಿನ ಈ ನಿರಂತರ ವರ್ತನೆಗೆ ಭಾರತದ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಪ್ರತಿಕ್ರಿಯೆ ನೀಡಿದ್ದಾರೆ.

ಸ್ಪೋರ್ಟ್ಸ್ ಟಾಕ್ ಜೊತೆ ಮಾತನಾಡಿದ ಅವರು, "ತವರಿನಲ್ಲಿ ನಡೆದ ಆಸೀಸ್ ವಿರುದ್ಧ ಟಿ20 ಸರಣಿಯಲ್ಲಿ ಇಶಾನ್ ಕಿಶನ್ 3 ಪಂದ್ಯಗಳಲ್ಲಿ ಆಡುವ ಅವಕಾಶ ಲಭಿಸಿತು. ನಂತರ ಅವರನ್ನು ಕೈ ಬಿಡಲಾಯಿತು. ಇಶಾನ್ ವಿಶ್ವಕಪ್‌ನ ಆರಂಭಿಕ ಪಂದ್ಯಗಳಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಇರುವಂತಹ ಆಟಗಾರ. ಸ್ಥಿರ ಆಟವನ್ನು ಆಡಿದರೂ, ಇಶಾನ್‌ ಕಿಶನ್‌ ಅವರನ್ನು ಪದೆ ಪದೇ ಕಡೆಗಣಿಸಲಾಗುತ್ತಿದೆ ಎಂದು ಅಜಯ್ ಜಡೇಜಾ ತಿಳಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ 39 ಎಸೆತಗಳಲ್ಲಿ 58 ರನ್ ಗಳಿಸಿದ ಇಶಾನ್ ಎರಡನೇ ಪಂದ್ಯದಲ್ಲಿ 32 ಎಸೆತಗಳಲ್ಲಿ 52 ರನ್ ಗಳಿಸಿದ್ದರು. ಮೂರನೇ ಪಂದ್ಯದಲ್ಲಿ, ಅವರು 5 ಎಸೆತಗಳಲ್ಲಿ ಸೊನ್ನೆಗೆ ಔಟ್ ಆದರು. ನಂತರ ಅವರನ್ನು ಪ್ಲೇಯಿಂಗ್ ಇಲೆವೆನ್ ನಿಂದ ಕೈಬಿಡಲಾಯಿತು.

ಇಶಾನ್ ಆಸ್ಟ್ರೇಲಿಯಾ ವಿರುದ್ಧ 5 ಟಿ20 ಪಂದ್ಯಗಳನ್ನು ಸಹ ಆಡಿಲ್ಲ. ಮೂರು ಪಂದ್ಯಗಳ ನಂತರ ಅವರಿಗೆ ವಿಶ್ರಾಂತಿ ನೀಡಲಾಯಿತು. ಹೀಗಾಗಿ ಭಾರತೀಯ ಕ್ರಿಕೆಟ್ ನಲ್ಲಿ ಹಳೆಯ ಸಂಪ್ರದಾಯ ಮುಂದುವರೆದಿದೆ ಎಂದು ಟೀಮ್ ಇಂಡಿಯಾದ ಮಾಜಿ ಆಟಗಾರ ಅಜಯ್ ಜಡೇಜಾ ತಿಳಿಸಿದ್ದಾರೆ.

Story first published: Tuesday, December 5, 2023, 16:20 [IST]
Other articles published on Dec 5, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+