ಐಪಿಎಲ್ 2020: ನಾಯಕನಾಗಿ ಅತ್ಯಂತ ಕಠಿಣ ಟೂರ್ನಿಯಾಗಿರಲಿದೆ ಎಂದ ಶ್ರೇಯಸ್ ಅಯ್ಯರ್

ಐಪಿಎಲ್‌ನ ಅತ್ಯಂತ ಯುವ ತಂಡಗಳಲ್ಲಿ ಒಂದಾಗಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವದ ಜವಾಬ್ಧಾರಿ 2018ರ ಆವೃತ್ತಿಯಿಂದ ಶ್ರೇಯಸ್ ಅಯ್ಯರ್ ಹೆಗಲಿಗೆ ಬಿತ್ತು. ಅದಾದ ಬಳಿಕ 23ರ ಹರೆಯದ ಶ್ರೇಯಸ್ ಅಯ್ಯರ್ ಪ್ರದರ್ಶನ ನಿರಂತರವಾಗಿ ಏರುಗತಿಯಲ್ಲೇ ಸಾಗುತ್ತಿದೆ. ಸದ್ಯ ಟೀಮ್ ಇಂಡಿಯಾದಲ್ಲೂ ನಾಲ್ಕನೇ ಕ್ರಮಾಂಕದಲ್ಲಿ ಅಯ್ಯರ್ ಫಿಕ್ಸ್ ಆಗಿದ್ದಾರೆ.
ಮುಂಬೈ ಮೂಲದ ಶ್ರೇಯಸ್ ಅಯ್ಯರ್ ಈ ಬಾರಿಯ ಐಪಿಎಲ್ ಆವೃತ್ತಿ ಎಲ್ಲಾ ಆಟಗಾರರಿಗೂ ಒಂದು ದೊಡ್ಡ ಸವಾಲು ಎಂದು ಹೇಳಿದ್ದಾರೆ. ಜೊತೆಗೆ ಅಭಿಮಾನಿಗಳಿಗೆ ಹೆಚ್ಚಿನ ಮನರಂಜನೆಯನ್ನು ನೀಡುವ ಜವಾಬ್ಧಾರಿ ಆಟಗಾರರಿಗೆ ಈ ಆವೃತ್ತಿಯಲ್ಲಿ ಹೆಚ್ಚಾಗಿದ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಇದು ಕಳೆದ ಆವೃತ್ತಿಗಿಂತ ಸಂಪೂರ್ಣ ವಿಭಿನ್ನ ಆವೃತ್ತಿಯಾಗಿದೆ. ಆದರೆ ಈ ಸವಾಲು ನನ್ನನ್ನು ಹೆಚ್ಚು ಕಾತುರನನ್ನಾಗಿ ಮಾಡಿದೆ. ಅದರಲ್ಲೂ ನಾಯಕನಾಗಿ ಈ ಜವಾನ್ಧಾರಿ ನನಗೆ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿದೆ. ಇದೊಂದು ಸಂಪೂರ್ಣ ವಿಭಿನ್ನ ಐಪಿಎಲ್ ಎಮಬುದರಲ್ಲಿ ಯಾವುದೇ ಅನುಮಾನವಿಲ್ಲ. ಅಭಿಮಾನಿಗಳು ಇಲ್ಲದೆ ನಾವು ಕಣಕ್ಕಿಳಿಯಲಿದ್ದೇವೆ ಎಂದು ಶ್ರೇಯಸ್ ಅಯ್ಯರ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಕೆಲ ಅನುಭವಿ ಆಟಗಾರರು ಕೂಡ ಸೇರಿಕೊಳ್ಳುತ್ತಿರುವುದು ನಾಯಕನಾಗಿ ಶ್ರೇಯಸ್ ಅಯ್ಯರ್‌ಗೆ ಹೆಚ್ಚು ಅನುಕೂಲತೆಯನ್ನು ಒದಗಿಸಲಿದೆ. ಕೋಚ್ ಆಗಿ ರಿಕಿ ಪಾಂಟಿಂಗ್ ತಂಡದಲ್ಲಿದ್ದರೆ ಹಿರಿಯ ಆಟಗಾರರಾದ ಅಜಿಂಕ್ಯ ರಹಾನೆ, ಆರ್ ಅಶ್ವಿನ್ ಅನುಭವಗಳು ಕೂಡ ಯುವ ನಾಯಕನಿಗೆ ಸಹಕಾರಿಯಾಗುವ ನಿರೀಕ್ಷೆಯಿದೆ.
ಡಲ್ಲಿ ಮೂಲದ ಫ್ರಾಂಚೈಸಿ ಈವರೆಗಿನ ಐಪಿಎಲ್‌ನಲ್ಲಿ ಒಂದು ಬಾರಿಯೂ ಚಾಂಪಿಯನ್ ಪಟ್ಟಕ್ಕೇರುವಲ್ಲಿ ವಿಫಲವಾಗಿದೆ. ಈ ಬಾರಿ ವಿಭಿನ್ನ ಪರಿಸ್ಥಿಯಲ್ಲಿ ಶ್ರೇಯಸ್ ನಾಯಕತ್ವದ ಡೆಲ್ಲ ಕ್ಯಾಪಿಟಲ್ಸ್ ತಂಡದ ಪ್ರದರ್ಶನ ಹೇಗಿರಲಿದೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications