For Quick Alerts
ALLOW NOTIFICATIONS  
For Daily Alerts
 

ಭಾರತ ವಿರುದ್ಧದ ತಪ್ಪುಗಳನ್ನು ತಿದ್ದಿಕೊಳ್ಳಲು ಇದು ಅವಕಾಶ: ಸ್ಟಾರ್ಕ್

This summer is a chance to rectify our mistakes against India in 2018-19, says Mitchell Starc

ಅಡಿಲೇಡ್: ವರ್ಷದ ಹಿಂದೆ ಅಂದರೆ 2018-19ರ ಸೀಸನ್‌ನಲ್ಲಿ ಭಾರತ ವಿರುದ್ಧದ ಟೆಸ್ಟ್ ಸರಣಿಯನ್ನು ಆಸ್ಟ್ರೇಲಿಯಾ ಸೋತಿತ್ತು. ಮತ್ತೀಗ ಅದೇ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಬರುತ್ತಿದೆ. ಕಳೆದ ಬಾರಿ ಆಸ್ಟ್ರೇಲಿಯನ್ನರು ಮಾಡಿದ್ದ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಈ ಸರಣಿ ಒಳ್ಳೆಯ ಅವಕಾಶ ಎಂದು ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಹೇಳಿದ್ದಾರೆ.

2018-19ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆಸ್ಟ್ರೇಲಿಯಾಕ್ಕೆ ಪ್ರವಾಸ ಹೋಗಿದ್ದ ಭಾರತ, ಅಲ್ಲಿ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು 2-1ರಿಂದ ಗೆದ್ದಿತ್ತು. ಆದರೆ ಅದೇ ಸಮಯದಲ್ಲಿ ಆಸ್ಟ್ರೇಲಿಯಾ ತಂಡದಲ್ಲಿ ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಇರಲಿಲ್ಲ. ಇಬ್ಬರೂ ವರ್ಷದ ನಿಷೇಧಕ್ಕೀಡಾಗಿದ್ದರು. ಈಗ ಇಬ್ಬರೂ ತಂಡದಲ್ಲಿದ್ದಾರೆ.

ಟೆಸ್ಟ್ ಸರಣಿ ಬಗ್ಗೆ ಮಾತನಾಡಿದ ಮಿಚೆಲ್ ಸ್ಟಾರ್ಕ್, '2018-19ರಲ್ಲಿ ಸರಣಿಯುದ್ದಕ್ಕೂ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಭಾರತ ತಂಡ ನಮಗಿಂತ ಉತ್ತಮವಾಗಿತ್ತು. ಕಳೆದ ವರ್ಷದ ಸೋಲನ್ನು ನಾವು ಮುಚ್ಚಿಟ್ಟುಕೊಳ್ಳುವಂತಿಲ್ಲ. ನಾವು ಎಲ್ಲಾ ಅಂಶಗಳನ್ನು ಉತ್ತಮಗೊಳಿಸಿಕೊಳ್ಳಬೇಕಿದೆ. ಈ ಬೇಸಿಗೆ ನಮಗೆ ತಪ್ಪುಗಳನ್ನು ಸರಿಪಡಿಕೊಳ್ಳಲು ಇರುವ ಒಂದು ಅವಕಾಶ,' ಎಂದಿದ್ದಾರೆ.

ಡಿಸೆಂಬರ್ 17ರಿಂದ ಭಾರತ-ಆಸ್ಟ್ರೇಲಿಯಾ ನಡುವಿನ ನಾಲ್ಕು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಆರಂಭಗೊಳ್ಳಲಿದೆ. ಆರಂಭಿಕ ಪಂದ್ಯ ಅಡಿಲೇಡ್ ಓವಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಸರಣಿಯ ಮೊದಲ ಟೆಸ್ಟ್ ಪಿಂಕ್‌ ಬಾಲ್ ಟೆಸ್ಟ್ (ಡೇ-ನೈಟ್ ಟೆಸ್ಟ್) ಆಗಿರಲಿದೆ.

Story first published: Monday, December 14, 2020, 22:49 [IST]
Other articles published on Dec 14, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+