ಭಾರತ Vs ನ್ಯೂಜಿಲ್ಯಾಂಡ್: ಸೂಪರ್ ಓವರ್ ನಲ್ಲಿ ಕೊಹ್ಲಿಯ ಎಡವಟ್ಟು

ಉಸಿರು ಬಿಗಿಹಿಡಿಯುವಂತೆ ಸಾಗಿದ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಐದು ಟಿ20 ಪಂದ್ಯದ ಸರಣಿಯ, ಮೂರನೇ ಪಂದ್ಯದಲ್ಲೂ ಭಾರತ ಜಯಗಳಿಸುವ ಮೂಲಕ, ಕಿವೀಸ್ ನಾಡಿನಲ್ಲಿ ಮೊದಲ ಬಾರಿಗೆ ಸರಣಿ ಗೆದ್ದಿದೆ.
ಕೊನೆಯ ಓವರಿನ ಮೊದಲ ಬಾಲ್ ನಲ್ಲೇ ಮೊಹಮ್ಮದ್ ಶಮಿ ಸಿಕ್ಸ್ ನೀಡಿದ ಮೇಲೆ, ಇನ್ನೇನು, ಮ್ಯಾಚ್ ಕೈತಪ್ಪಿತು ಎನ್ನುವಷ್ಟರಲ್ಲಿ ಅದ್ಭುತ ಲೈನ್ ಎಂಡ್ ಲೆಂನ್ತ್ ಮೂಲಕ ಬೌಲ್ ಮಾಡಿದ ಶಮಿ, ಮ್ಯಾಚ್ ಟೈ ಆಗುವ ಹಾಗೇ ಮಾಡಿದರು.
ಸೂಪರ್ ಓವರ್ ಬೌಲ್ ಮಾಡಲು ನಾಯಕ ವಿರಾಟ್ ಕೊಹ್ಲಿ, ಕರಾರುವಕ್ಕಾಗಿ ವಿಕೆಟ್ ಟು ವಿಕೆಟ್ ಬೌಲ್ ಮಾಡುವ ಜಸ್ ಪ್ರೀತ್ ಬುಮ್ರಾ ಕೈಗೆ ಚೆಂಡು ನೀಡಿದರು. ಮೊದಲೆರಡು ಬಾಲ್ ಒಂದೊಂದೇ ರನ್ ನೀಡಿದ ಬುಮ್ರಾ, ನಂತರ ಸರಿಯಾಗಿ ಚಚ್ಚಿಸಿಕೊಂಡರು.
ಕೊನೆಯ ಓವರ್ ಅನ್ನು ಬುಮ್ರಾಗೆ ನೀಡಿದ್ದು ದೊಡ್ಡ ತಪ್ಪು ಎಂದು ರಾವಲ್ಪಿಂಡಿ ಎಕ್ಸ್ ಪ್ರೆಸ್ ಎಂದೇ ಹೆಸರಾಗಿರುವ ಶೋಹೆಬ್ ಅಖ್ತರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಅವರು ನೀಡಿದ ಕಾರಣ ಹೀಗಿದೆ:

ಶೋಹೆಬ್ ಅಖ್ತರ್ ಹೆಸರಿನಲ್ಲಿರುವ ಯುಟ್ಯೂಬ್ ಚಾನೆಲ್
ಶೋಹೆಬ್ ಅಖ್ತರ್ ಹೆಸರಿನಲ್ಲಿರುವ ಯುಟ್ಯೂಬ್ ಚಾನೆಲ್ ಮೂಲಕ, ಅಖ್ತರ್ ಪ್ರತೀ ಮ್ಯಾಚಿನ ವಿಶ್ಲೇಷಣೆಯನ್ನು ಮಾಡುತ್ತಾರೆ. ಅವರ ಚ್ಯಾನಲ್ ಗೆ ಸುಮಾರು 1.95ಮಿಲಿಯನ್ ಚಂದಾದಾರಿದ್ದಾರೆ. ಇವರ, ಸರಣಿಯ ಮೂರನೇ ಮ್ಯಾಚಿನ ವಿಶ್ಲೇಷಣೆಯನ್ನು ಸುಮಾರು ಹನ್ನೆರಡು ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.

ನ್ಯೂಜಿಲ್ಯಾಂಡ್ ಮ್ಯಾಚ್ ಸೋತಿದ್ದಕ್ಕೆ ದುಃಖವಾಗುತ್ತದೆ
ನ್ಯೂಜಿಲ್ಯಾಂಡ್ ಮ್ಯಾಚ್ ಸೋತಿದ್ದಕ್ಕೆ ದುಃಖವಾಗುತ್ತದೆ ಎಂದಿರುವ ಅಖ್ತರ್, ಈ ಪಂದ್ಯದ ನಂತರ ವಿಶ್ವಕಪ್ ಕ್ರಿಕೆಟಿನ ನೆನಪುಗಳು ಮತ್ತೆ ನೆನಪಾಗುತ್ತದೆ. ನ್ಯೂಜಿಲ್ಯಾಂಡ್ ಪಂದ್ಯ ಸೋತಿದ್ದಕ್ಕೆ ವಿರಾಟ್ ಕೊಹ್ಲಿ ಕೂಡಾ ಬೇಸರ ವ್ಯಕ್ತಪಡಿಸಿದ್ದಾರೆ. ಸೂಪರ್ ಓವರ್ ಅನ್ನು ಎಸೆಯಲು, ಕೊಹ್ಲಿ, ಬುಮ್ರಾ ಕೈಗೆ ಬಾಲ್ ಕೊಟ್ಟಾಗ ನನಗೆ ಆಶ್ಚರ್ಯವಾಯಿತು - ಶೋಹೆಬ್ ಅಖ್ತರ್.

ಸೂಪರ್ ಓವರ್ ನಲ್ಲಿ ಕೊಹ್ಲಿಯ ಎಡವಟ್ಟು
ಈ ಪಂದ್ಯವನ್ನು ಭಾರತ ಗೆದ್ದಿರಬಹುದು, ಆದರೂ, ನನ್ನ ಪ್ರಕಾರ, ಬುಮ್ರಾಗೆ ಸೂಪರ್ ಓವರ್ ನೀಡಿದ್ದು ತಪ್ಪು. ಇದು ಕೊಹ್ಲಿಯ ಎಡವಟ್ಟು. ಬುಮ್ರಾ ಬದಲು ಶಮಿ ಕೈಗೆ ಬಾಲ್ ನೀಡಬೇಕಿತ್ತು. ಯಾಕೆಂದರೆ, ಆತ ಅನುಭವೀ ಆಟಗಾರ. ಯಾರ್ಕರ್ ಎಸೆಯಲು ಅಲ್ಲಿ ಸಾಧ್ಯವಾಗುತ್ತಿರಲಿಲ್ಲ - - ಶೋಹೆಬ್ ಅಖ್ತರ್.

ಶಮಿ ಆಗತಾನೇ ಬೌಲಿಂಗ್ ಮಾಡಿದ್ದರು. ವಾರ್ಮ್ ಅಪ್ ಆಗಿದ್ದರು
ಶಮಿ ಆಗತಾನೇ ಬೌಲಿಂಗ್ ಮಾಡಿದ್ದರು. ವಾರ್ಮ್ ಅಪ್ ಆಗಿದ್ದರು, ಕೊನೆಯ ಓವರ್ ಚೆನ್ನಾಗಿ ಎಸೆದು ಟೈ ಮಾಡುವಲ್ಲಿ ಯಶಸ್ವಿಯಾಗಿದ್ದರು, ವಿಶ್ವಾಸ ಅವರಲ್ಲಿತ್ತು. ಬುಮ್ರಾ ಒಬ್ಬ ಉತ್ತಮ ಫಾಸ್ಟ್ ಬೌಲರ್, ಆದರೆ, ಸೂಪರ್ ಓವರ್ ಅಂತಹ ಸಮಯದಲ್ಲಿ ಯಾರ್ಕರ್ ಹಾಕುವುದಕ್ಕಿಂತ ಹೆಚ್ಚಾಗಿ ಲೈನ್ ಎಂಡ್ ಲೆಂನ್ತ್ ಕಡೆ ಗಮನಕೊಡಬೇಕು. ಶಮಿ ಇದನ್ನು ಚೆನ್ನಾಗಿ ಬಲ್ಲರು, ಹಾಗಾಗಿ, ನನ್ನ ಅನುಭವದ ಪ್ರಕಾರ, ಬುಮ್ರಾಗಿಂತ, ಶಮಿ ಉತ್ತಮ ಆಯ್ಕೆಯಾಗಬಹುದಿತ್ತು ಎಂದು ಶೋಹೆಬ್ ಅಖ್ತರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications